ಕುಂತಿ (ಜಾರ್ಖಂಡ್):ಮಾರುಕಟ್ಟೆ ಹೋಗಲು ಅನುಮತಿ ನೀಡದ ಗಂಡನ ಮೇಲೆ ಹೆಂಡತಿ ಮಾರಣಾಂತಿಕ ದಾಳಿ ನಡೆಸಿ, ಹತ್ಯೆ ಮಾಡಿರುವ ಘಟನೆ ಇಲ್ಲಿನ ಸೋನಪುರಗರ್ನಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕಲಾವತಿ ಆರೋಪಿತ ಮಹಿಳೆಯಾಗಿದ್ದು, ಅರ್ಜುನ್ ಸಿಂಗ್ ಕೊಲೆಯಾದ ವ್ಯಕ್ತಿ
ಏನಿದು ಘಟನೆ: ಮನೆಯ ಹತ್ತಿರದ ವಾಟರ್ ಪಂಪ್ನಲ್ಲಿ ಅರ್ಜುನ್ ಸಿಂಗ್ ಸ್ನಾನ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಕಲಾವತಿ ಮಾರುಕಟ್ಟೆಗೆ ಹೋಗಿಬರುವುದಾಗಿ ಪತಿಗೆ ತಿಳಿಸಿದ್ದರು. ಅದಕ್ಕೆ ಗಂಡ ಒಪ್ಪಿಲ್ಲ. ಇದರಿಂದ ಕುಪಿತಳಾದ ಕಲಾವತಿ, ಗಂಡನ ಜೊತೆ ರಸ್ತೆಯಲ್ಲಿಯೇ ವಾಗ್ವಾದ ನಡೆಸಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ಆಗ ಅಲ್ಲೇ ಇದ್ದ ಇಟ್ಟಿಗೆ ತೆಗೆದುಕೊಂಡು ಪತಿ ತಲೆಗೆ ಪತ್ನಿ ಹೊಡೆದಿದ್ದಾಳೆ. ಗಂಭೀರ ಗಾಯಗೊಂಡ ಪತಿ ಕುಸಿದು ಬಿದ್ದಿದ್ದಾನೆ. ಅಷ್ಟಕ್ಕೂ ಸುಮ್ಮನಾಗದ ಕಲಾವತಿ, ನಿರಂತರವಾಗಿ ಇಟ್ಟಿಗೆಯಿಂದ ಹೊಡೆದಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.