ಪುಣೆ( ಮಹಾರಾಷ್ಟ್ರ): ಥೂ ಎಂಥಾ ಜನರೋ... ಏನೆನೆಲ್ಲಾ ಮಾಡ್ತಾರೋ... ಇಂತಹದ್ದೊಂದು ತಲೆತಗ್ಗಿಸುವ ಕೆಲಸ ಪುಣೆಯಲ್ಲಿ ನಡೆದಿದೆ. ಈ ಸಂಬಂಧ ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿದೆ.
ಶಾಕಿಂಗ್..!:ಪತಿ ತನ್ನ ಸ್ನೇಹಿತರ ಜೊತೆ ಲೈಂಗಿಕ ಸಂಬಂಧ ಹೊಂದಲು ಹೆಂಡತಿಗೆ ಒತ್ತಾಯಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ. ನಿನ್ನನ್ನ ಕೈ ಬಿಡದೇ ಕಾಪಾಡುತ್ತೇನೆ ಎಂದು ಸಪ್ತಪದಿ ತುಳಿದ ಗಂಡ, ತನ್ನ ಸ್ವಂತ ಹೆಂಡತಿಯನ್ನು ತನ್ನಿಬ್ಬರು ಸ್ನೇಹಿತರ ಜತೆ ಹಾಸಿಗೆ ಹಂಚಿಕೊಳ್ಳುವಂತೆ ಒತ್ತಾಯಿಸಿದ ಘಟನೆ ನಡೆದಿದೆ.
ವಿಚಿತ್ರ ಎಂದರೆ ತನ್ನ ಸ್ನೇಹಿತರ ಜತೆ ಹೆಂಡತಿ ಹಾಸಿಗೆ ಹಂಚಿಕೊಳ್ಳುವಂತೆ ಒತ್ತಾಯಿಸಿದ್ದಲ್ಲದೇ, ಕಿರುಕುಳ ನೀಡಲು ಮುಂದಾಗಿರುವ ದೃಶ್ಯವನ್ನ ಪತಿ ಮಹಾರಾಜ ನಿಂತು ನೋಡುತ್ತಿದ್ದನಂತೆ. ಈ ಕಿರುಕುಳ ತಾಳಲಾರದೇ ಪತ್ನಿ ಪತಿಯ ವಿರುದ್ಧ ಸಿಡಿದೆದ್ದಿದ್ದಾರೆ. ಈ ಸಂಬಂಧ ಪುಣೆಯ ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಯಲ್ಲಿ ಪತಿ ಹಾಗೂ ಆತನ ಇಬ್ಬರು ಸಹಚರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.