ಕರ್ನಾಟಕ

karnataka

ETV Bharat / bharat

ಹೋಟೆಲ್​ ಬಳಿ ಕುಳಿತುಕೊಂಡಿದ್ದೇ ತಪ್ಪಾಯ್ತು: ಕುದಿಯುವ ನೀರು ಎರಚಿ ಮೂವರು ಬಿಕ್ಷುಕರ ಹತ್ಯೆ - ಪುಣೆಯ ಸಾಸ್ವಾದ್ ಪ್ರದೇಶದಲ್ಲಿ ಮೂವರ ಹತ್ಯೆ

ಪಾಪು ಜಗತಾಪ್​ನ ಹೋಟೆಲ್ ಬಳಿ ಇರುವ ಅಹಲ್ಯಾದೇವಿ ಮಾರುಕಟ್ಟೆಯ ವರಾಂಡದಲ್ಲಿ ಮೂವರು ಭಿಕ್ಷುಕರು ನಿತ್ಯ ಕುಳಿತುಕೊಳ್ಳುತ್ತಿದ್ದರು. ಇದರಿಂದ ಕೋಪಗೊಂಡ ಪಪ್ಪು ಅವರನ್ನು ಓಡಿಸಲು ದೊಣ್ಣೆಯಿಂದ ಥಳಿಸಲು ಮುಂದಾಗಿದ್ದಾರೆ. ಆದರೂ ಭಿಕ್ಷುಕರು ಅಲ್ಲಿಂದ ಕಾಲ್ಕೀಳುತ್ತಿರಲಿಲ್ಲ.ಇದರಿಂದ ಕೋಪಗೊಂಡು ಬಿಸಿನೀರು ಎರಚಿ ಅವರನ್ನು ಕೊಂದಿದ್ದಾನೆ.

ಹೋಟೆಲ್​ ಬಳಿ ಕೂರುತ್ತಿದ್ದಕ್ಕೆ ಕುದಿಯುವ ನೀರು ಎರಚಿ  ಮೂವರು ಬಿಕ್ಷುಕರ ಹತ್ಯೆ
ಹೋಟೆಲ್​ ಬಳಿ ಕೂರುತ್ತಿದ್ದಕ್ಕೆ ಕುದಿಯುವ ನೀರು ಎರಚಿ ಮೂವರು ಬಿಕ್ಷುಕರ ಹತ್ಯೆ

By

Published : Jun 3, 2022, 7:41 PM IST

ಪುಣೆ(ಮಹಾರಾಷ್ಟ್ರ):ಪುಣೆಯ ಸಾಸ್ವಾದ್ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ಜರುಗಿದೆ. ಹೋಟೆಲ್ ಮಾಲೀಕ ಮೂವರು ಭಿಕ್ಷುಕರ ಮೇಲೆ ಕುದಿಯುವ ನೀರು ಸುರಿದು ಬರ್ಬರವಾಗಿ ಕೊಂದಿದ್ದಾನೆ. ಸಾಸ್ವಾದ್ ಪೊಲೀಸರ ಪ್ರಕಾರ, ಪಪ್ಪು ಅಲಿಯಾಸ್ ನೀಲೇಶ್ ಜಯವಂತ್ ಜಗತಾಪ್ ಎಂಬುವವ ಭಿಕ್ಷುಕರನ್ನು ಥಳಿಸಿ ನಂತರ ಅವರ ದೇಹದ ಮೇಲೆ ಕುದಿಯುವ ನೀರನ್ನು ಸುರಿದಿದ್ದಾನೆ. ಈ ಘಟನೆಯು ಮೇ 23 ರಂದು ಸಾಸ್ವಾದ್‌ನಲ್ಲಿ ನಡೆದಿದೆ.

ಪಾಪು ಜಗತಾಪ್​ನ ಹೋಟೆಲ್ ಬಳಿ ಇರುವ ಅಹಲ್ಯಾದೇವಿ ಮಾರುಕಟ್ಟೆಯ ವರಾಂಡದಲ್ಲಿ ಮೂವರು ಭಿಕ್ಷುಕರು ಪ್ರತಿದಿನ ಕುಳಿತುಕೊಳ್ಳುತ್ತಿದ್ದರು. ಇದರಿಂದ ಕೋಪಗೊಂಡ ಪಪ್ಪು ಅವರನ್ನು ಓಡಿಸಲು ದೊಣ್ಣೆಯಿಂದ ಥಳಿಸಲು ಮುಂದಾಗಿದ್ದಾರೆ. ಆದರೂ ಭಿಕ್ಷುಕರು ಅಲ್ಲಿಂದ ಕಾಲ್ಕೀಳುತ್ತಿರಲಿಲ್ಲ. ಹೀಗಾಗಿ ಮತ್ತಷ್ಟು ಕೋಪಗೊಂಡ ಪಪ್ಪು ತನ್ನ ಹೋಟೆಲ್‌ನಿಂದ ಬಿಸಿನೀರು ತಂದು ಮೂವರು ಭಿಕ್ಷುಕರ ಮೇಲೆ ಸುರಿದಿದ್ದಾನೆ. ಕೂಡಲೇ ಸ್ಥಳೀಯರು ಭಿಕ್ಷುಕರನ್ನು ಸಾಸೂನ್ ಆಸ್ಪತ್ರೆಗೆ ರವಾನಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ.

ಮೊದಲಿಗೆ ಪೊಲೀಸರು ಪ್ರಕರಣ ದಾಖಲಿಸಿರಲಿಲ್ಲ. ನಂತರ ಮೇ 30ರಂದು ಪ್ರಕರಣ ದಾಖಲಾಗಿತ್ತು. ಈ ವಿಚಾರವಾಗಿ ಪಪ್ಪು ಜಗತಾಪ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಚಕ್ರತೀರ್ಥ ಬಂಧಿಸುವಂತೆ ಜನಸಾಮಾನ್ಯ ಒಕ್ಕಲಿಗರ ವೇದಿಕೆ ಒತ್ತಾಯ: ಬೃಹತ್‌ ಪ್ರತಿಭಟನೆ

ABOUT THE AUTHOR

...view details