ಕರ್ನಾಟಕ

karnataka

ETV Bharat / bharat

ಮೌನಿ ಅಮಾವಾಸ್ಯೆ: ಗಂಗಾ ನದಿಯಲ್ಲಿ ಭಕ್ತರ ಪವಿತ್ರ ಸ್ನಾನ

ಮೌನಿ ಅಮಾವಾಸ್ಯೆ ಹಿನ್ನೆಲೆ ಉತ್ತರ ಪ್ರದೇಶದ ಪ್ರಯಾಗರಾಜ್​ನ ಗಂಗಾ ನದಿಯಲ್ಲಿ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ.

devotees holy bath in Ganga river
ಗಂಗಾ ನದಿಯಲ್ಲಿ ಭಕ್ತರ ಪವಿತ್ರ ಸ್ನಾನ

By

Published : Feb 1, 2022, 10:58 AM IST

ಪ್ರಯಾಗರಾಜ್ (ಉತ್ತರ ಪ್ರದೇಶ):ಇಂದಿನ ಮೌನಿ ಅಮಾವಾಸ್ಯೆ ಹಿನ್ನೆಲೆ ಭಕ್ತರು ಉತ್ತರ ಪ್ರದೇಶದ ಪ್ರಯಾಗರಾಜ್​ನ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.

ಈ ವರ್ಷ ಇಂದು ಅಂದರೆ ಫೆಬ್ರವರಿ 1 ರಂದು ಮಾಘ ಮಾಸದ ಅಮಾವಾಸ್ಯೆಯನ್ನು ಅಂದರೆ ಮೌನಿ ಅಮಾವಾಸ್ಯೆಯನ್ನು ಆಚರಿಸಲಾಗುತ್ತಿದೆ. ಇದನ್ನು ಮಾಘಿ ಅಮಾವಾಸ್ಯೆ ಎಂತಲೂ ಕರೆಯುತ್ತಾರೆ. ಈ ದಿನ ಪವಿತ್ರ ಸ್ನಾನ, ದಾನ, ದೇವರ ವಿಶೇಷ ಪೂಜೆ ಮಾಡುವುದರಿಂದ ಪುಣ್ಯ ಲಭಿಸುತ್ತದೆ ಎನ್ನುವ ನಂಬಿಕೆಯಿದೆ. ಹಿಂದೂ ಧರ್ಮದಲ್ಲಿ ಮಾಘ ಮಾಸಕ್ಕೆ ವಿಶೇಷ ಮಹತ್ವವಿದೆ.

ಗಂಗಾ ನದಿಯಲ್ಲಿ ಭಕ್ತರ ಪವಿತ್ರ ಸ್ನಾನ

ಈ ದಿನ ದೇವರುಗಳು ಸ್ವರ್ಗದಿಂದ ಇಳಿದು ಬಂದು ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಇಂದು ಬ್ರಹ್ಮ ಮುಹೂರ್ತದಲ್ಲಿ ಮೌನ ಸ್ನಾನ ಮಾಡುವುದರಿಂದ ಪಾಪಗಳೆಲ್ಲ ನಿವಾರಣೆಯಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇಲ್ಲಿನ ಭಕ್ತರದ್ದು.

ಇದನ್ನೂ ಓದಿ:ಇಂದಿನಿಂದ ಏನೆಲ್ಲಾ ಬದಲಾವಣೆ?.. ಎಸ್​​ಬಿಐ ಐಎಂಪಿಎಸ್ ವರ್ಗಾವಣೆ ಮಿತಿ ಏರಿಕೆ: ಎಲ್​ಪಿಜಿ ದರಗಳೂ ಪರಿಷ್ಕರಣೆ

ಪವಿತ್ರ ಹಬ್ಬದ ಈ ಸಂದರ್ಭದಲ್ಲಿ ಪ್ರಯಾಗರಾಜ್​ನ ತ್ರಿವೇಣಿ ಸಂಗಮದಲ್ಲಿ ಚಳಿ ಮತ್ತು ಮಂಜನ್ನು ಲೆಕ್ಕಿಸದೇ ಭಕ್ತರು ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಸಂಗಮ ಸೇರಿದಂತೆ ಎಲ್ಲಾ ಪ್ರಮುಖ ಘಾಟ್‌ಗಳಲ್ಲಿ ತಡರಾತ್ರಿಯಿಂದಲೇ ಭಕ್ತರು ಸ್ನಾನ ಮಾಡಲು ಪ್ರಾರಂಭಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

​​ನೂಕುನುಗ್ಗಲು ಆಗುವ ಸಂಭವ ಇರುವುದರಿಂದ ಸ್ನಾನಘಟ್ಟದ ​​ಉದ್ದವನ್ನು ಹೆಚ್ಚಿಸಲಾಗಿದೆ. ಭಕ್ತರಿಗೆ ಸಹಾಯವಾಗಲೆಂದು ಸ್ವಯಂಸೇವಕರು ಮಾರ್ಗದರ್ಶನ ನೀಡುತ್ತಿರುವುದು ಕಂಡು ಬಂದಿತು. ಯಾವುದೇ ಅವಘಡ ಸಂಭವಿಸದಂತೆ ನೋಡಿಕೊಳ್ಳಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೊತಗೆ, ಸ್ವಚ್ಛತೆಗಾಗಿ ನೈರ್ಮಲ್ಯ ತಂಡಗಳನ್ನು ನಿಯೋಜಿಸಲಾಗಿದೆ.

ABOUT THE AUTHOR

...view details