ಕರ್ನಾಟಕ

karnataka

ETV Bharat / bharat

800 ವರ್ಷಗಳ ಬಳಿಕ ಆಗಸದಲ್ಲಿ ಗುರು-ಶನಿಗಳ 'ಮಹಾ' ಸಂಯೋಗ; ನಿಮಗಿದೆ ನೋಡುವ ಸುಯೋಗ!

ಸುಮಾರು ಎಂಟು ಶತಮಾನಗಳ ಬಳಿಕ ಆಕಾಶದಲ್ಲಿ ಗುರು ಮತ್ತು ಶನಿ ಗ್ರಹಗಳು ಒಂದಕ್ಕೊಂದು ತುಂಬಾ ಹತ್ತಿರ ಬಂದಿದ್ದು, ಈ ಒಂದು ಸುಂದರ ದೃಶ್ಯವನ್ನು ನಾವು ಡಿ.21ರಂದು ನೋಡಬಹುದಾಗಿದೆ.

By

Published : Dec 17, 2020, 5:35 PM IST

Updated : Dec 17, 2020, 6:08 PM IST

ಸಮೀಪಕ್ಕೆ ಬಂದಿರುವ ಗುರು, ಶನಿ ಗ್ರಹಗಳು
ಸಮೀಪಕ್ಕೆ ಬಂದಿರುವ ಗುರು, ಶನಿ ಗ್ರಹಗಳು

ನಾಸಾ: ಗುರು ಮತ್ತು ಶನಿ ಗ್ರಹಗಳು 2020ರ ಡಿ.21ರಂದು ಒಂದಕ್ಕೊಂದು ತುಂಬಾ ಸನಿಹ ಇರಲಿವೆ. ನಿಜವಾಗಿ ಈ ಎರಡು ಗ್ರಹಗಳು ಹತ್ತಿರದಲ್ಲಿ ಇಲ್ಲ. ಇವೆರಡರ ಮಧ್ಯೆ ಸುಮಾರು 733 ದಶಲಕ್ಷ ಕಿಲೋಮೀಟರ್ ಅಂತರವಿದೆ. ಆದ್ರೆ ಈ ದಿನ ನಾವು ಭೂಮಿಯಿಂದ ಇವೆರಡನ್ನೂ ನೋಡಿದಾಗ ಎರಡು ತುಂಬಾ ಹತ್ತಿರದಲ್ಲಿರುವಂತೆ ಕಾಣುತ್ತವೆ.

ಈ ಒಂದು ಸುಂದರ ದೃಶ್ಯವು ಆಕಾಶದಲ್ಲಿ ಸುಮಾರು 800 ವರ್ಷಗಳ ಬಳಿಕ ಗೋಚರಿಸುತ್ತಿದೆ. ಎರಡು ಗ್ರಹಗಳು ಆಕಾಶದಲ್ಲಿ ಹತ್ತಿರ ಸಮೀಪಿಸದೆ ಸುಮಾರು 400 ವರ್ಷಗಳೇ ಕಳೆದು ಹೋಗಿವೆ. ಆಕಾಶದಲ್ಲಿ ಹೀಗೆ ಎರಡು ಗ್ರಹಗಳು ಒಟ್ಟಿಗೆ ಸೇರಿದಾಗ ಅದನ್ನು 'ಮಹಾ' ಸಂಯೋಗ ('Great' Conjunction) ಎಂದು ಕರೆಯಲಾಗುತ್ತದೆ.

ಓದಿ:ಇಸ್ರೋದ PSLV-C50 ಉಡ್ಡಯನ ಯಶಸ್ವಿ: ಕಕ್ಷೆ ಸೇರಿದ ಸಂವಹನ ಉಪಗ್ರಹ

ಡಿ.21ರಂದು ಗುರು ಮತ್ತು ಶನಿ ಗ್ರಹಗಳು ತುಂಬಾ ಸಮೀಪದಲ್ಲಿರಲಿವೆ. ಸೂರ್ಯಾಸ್ತದ ನಂತರ ಈ ಬಾಹ್ಯಾಕಾಶ ವಿದ್ಯಮಾನವನ್ನು ನಾವು ಕಣ್ತುಂಬಿಕೊಳ್ಳಬಹುದಾಗಿದೆ. ಬೈನಾಕ್ಯುಲರ್‌ಗಳು ಮತ್ತು ವೈಡ್-ಆಂಗಲ್ ಟೆಲಿಸ್ಕೋಪ್‌ಗಳ ಮೂಲಕ ನಾವು ಶನಿ ಹಾಗೂ ಗುರು ಗ್ರಹವನ್ನು ಒಂದೇ ಸಮಯದಲ್ಲಿ ನೋಡಬಹುದಾಗಿದೆ. ಡಿ.21ರ ನಂತರ ಗ್ರಹಗಳು ಬೇರೆಡೆಗೆ ತಿರುಗಲು ಪ್ರಾರಂಭಿಸುತ್ತವೆ ಮತ್ತೆ 2080ರ ತನಕ ನಾವು ಈ ದೃಶ್ಯವನ್ನು ನೋಡಲು ಸಾಧ್ಯವಾಗುವುದಿಲ್ಲ.

Last Updated : Dec 17, 2020, 6:08 PM IST

ABOUT THE AUTHOR

...view details