ಕರ್ನಾಟಕ

karnataka

By

Published : Apr 20, 2021, 4:52 PM IST

ETV Bharat / bharat

ಬೆಂಗಳೂರು ಮೆಟ್ರೋ 2ನೇ ಹಂತದ ಯೋಜನೆಗೆ ಕೇಂದ್ರದ ಅನುಮೋದನೆ:14,788 ಕೋಟಿ ರೂ ವೆಚ್ಚಕ್ಕೆ ಗ್ರೀನ್​ ಸಿಗ್ನಲ್​!

ಬೆಂಗಳೂರು ಮೆಟ್ರೋ ರೈಲು ಯೋಜನೆ 2ಎ ಮತ್ತು 2 ಬಿ ಹಂತಕ್ಕೆ ಕೇಂದ್ರ ಸಂಪುಟ ಇಂದು ಅನುಮೋದನೆ ನೀಡಿದ್ದು, ಸುಮಾರು 58 ಕಿಲೋ ಮೀಟರ್​ ಉದ್ಧದ ರೈಲ್ವೆ ಯೋಜನೆ ಇದಾಗಿದೆ.

Bangalore Metro
Bangalore Metro

ನವದೆಹಲಿ: ಬೆಂಗಳೂರು ಮೆಟ್ರೋ ರೈಲು ಯೋಜನೆಯ ಎರಡನೇ ಹಂತಕ್ಕೆ ಇದೀಗ ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಕ್ಕಿದ್ದು, ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರೈಲ್ವೆ ಸಚಿವ ಪಿಯೂಷ್​ ಗೋಯಲ್​ ತಿಳಿಸಿದ್ದಾರೆ.

58 ಕಿಲೋ ಮೀಟರ್​ 2ಎ ಹಂತದಲ್ಲಿ ಸೆಂಟ್ರಲ್​ ಸಿಲ್ಕ್ ಬೋರ್ಡ್​​ ಜಂಕ್ಷನ್​​ನಿಂದ ಕೆಆರ್​ ಪುರಂವರೆಗೆ ಹಾಗೂ 2ಬಿ ಹಂತದಲ್ಲಿ ಕೆಆರ್ ಪುರಂನಿಂದ ಹೆಬ್ಬಾಳ ಜಂಕ್ಷನ್ ಮಾರ್ಗವಾಗಿ ವಿಮಾನ ನಿಲ್ದಾಣದವರೆಗೂ ಮೆಟ್ರೋ ರೈಲು ಯೋಜನೆಯನ್ನು ವಿಸ್ತರಿಸಲಾಗುತ್ತಿದೆ. ಇದಕ್ಕಾಗಿ 14,788 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಆಸ್ಪತ್ರೆ ಸೇರಿ ಐದೇ ನಿಮಿಷದಲ್ಲಿ ಶವವಾಗಿ ಹೊರ ಬಂದ ಕೊರೊನಾ ಸೋಂಕಿತ ವ್ಯಕ್ತಿ!

ಈ ಯೋಜನೆ ಬೆಂಗಳೂರು ನಗರ ಸಾರಿಗೆ ವ್ಯವಸ್ಥೆ ಸುಗಮಗೊಳಿಸಲಿದ್ದು, ತೀವ್ರ ಬೆಳವಣಿಗೆ, ಖಾಸಗಿ ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ನಗರದಲ್ಲಿ ಮೂಲಸೌಕರ್ಯ ಮತ್ತು ಕೈಗಾರಿಕೆ ಚಟುವಟಿಕೆಗಳಿಗೆ ಒತ್ತು ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ಯಲಚೇನಹಳ್ಳಿಯಿಂದ ಸಿಲ್ಕ್​​ ಇನ್ಸ್​ಟಿಟ್ಯೂಟ್​ ಮೆಟ್ರೋ ನಿಲ್ದಾಣ ಮಾರ್ಗವನ್ನ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್​ ಸಿಂಗ್ ಪುರಿ ಮತ್ತು ಸಿಎಂ ಬಿಎಸ್​ವೈ ಉದ್ಘಾಟನೆ ಮಾಡಿದ್ದಾರೆ.

ABOUT THE AUTHOR

...view details