ಡೆಹ್ರಾಡೂನ್ (ಉತ್ತರಾಖಂಡ್) : ಕೇದಾರನಾಥದಲ್ಲಿ ಹವಾಮಾನವು ನಿರಂತರವಾಗಿ ಬದಲಾವಣೆಯಾಗುತ್ತಿದ್ದು, ಇದರಿಂದ ಸಾಕಷ್ಟು ವಿಪತ್ತು ಎದುರಾಗಿದೆ. ಇಂದು ಬೆಳಗ್ಗೆ ಕೂಡ ಕೇದಾರನಾಥದ ಮೂರು ಸ್ಥಳಗಳಲ್ಲಿ ಮಂಜುಗಡ್ಡೆಯ ತುಂಡುಗಳು ಮುರಿದು ಬಿದ್ದ ಘಟನೆ ನಡೆದಿದೆ. ಇದರಿಂದಾಗಿ ಕೇದಾರನಾಥ ಕಾಲುದಾರಿಯ ಮೇಲೆ ಬೃಹತ್ ಹಿಮನದಿಗಳು ಹರಿದಿವೆ.
ರಸ್ತೆಯ ಮಧ್ಯೆ ಜಾರಿ ಬಂದ ಹಿಮಬಂಡೆಗಳನ್ನು ತೆರವುಗೊಳಿಸುತ್ತಿರುವುದು ರಸ್ತೆ ಮೇಲೆ ಹಿಮದ ತುಂಡುಗಳು ಬಿದ್ದಿರುವುದು ಹಲವು ಸಮಸ್ಯೆಗೆ ಕಾರಣವಾಗಿದೆ. ಕೆಲವು ದಿನಗಳ ಹಿಂದೆ ಬಿದ್ದಿದ್ದ ಹಿಮದ ರಾಶಿಯನ್ನು ಕೂಲಿಕಾರರು ಹಾಗೂ ಅಲ್ಲಿನ ನಿವಾಸಿಗಳು ಸೇರಿ ತೆರವುಗೊಳಿಸಿದ್ದರು. ಇದೀಗ ಆ ಮಾರ್ಗವು ಮತ್ತೆ ಹಲವೆಡೆ ಬ್ಲಾಕ್ ಆಗಿರುವುದು ಮಾತ್ರವಲ್ಲದೆ ಹಾಳಾಗಿದೆ.
ಹಿಮಪಾತದಿಂದ ಪೈಪ್ಲೈನ್ ಹಾಳಾಗಿರುವುದು ಹಿಮಬಂಡೆಗಳಿಂದ ಅಪಾಯ ಹೆಚ್ಚಳ: ಮಾರ್ಚ್ 21 ರಂದು ಅಂದರೆ 2 ದಿನಗಳ ಹಿಂದೆ ಕೇದಾರನಾಥದ ಭೈರವ್ ಗಡೇರಾದಲ್ಲಿ ಹಿಮನದಿ ಒಡೆದಿದ್ದರಿಂದ ಸಾಕಷ್ಟು ಹಾನಿ ಸಂಭವಿಸಿತ್ತು. ಹಿಮನದಿಯ ಅಡಿಯಲ್ಲಿರುವ ರಸ್ತೆ ಸಂಪೂರ್ಣ ಹಾಳಾಗಿದೆ ಎಂದು ಹೇಳಲಾಗುತ್ತಿದೆ. 2 ದಿನಗಳ ನಿರಂತರ ಹಿಮಪಾತದಿಂದಾಗಿ, (ಮಾರ್ಚ್ 22) ಇಂದು ಬೆಳಗ್ಗೆ ಮೂರು ಸ್ಥಳಗಳಲ್ಲಿ ದೊಡ್ಡ ಹಿಮದ ತುಂಡುಗಳು ರಸ್ತೆಯ ಮೇಲೆ ಬಿದ್ದಿವೆ. ಈ ಹಿಮನದಿಯು ಲಿಂಚೋಲಿ ಮತ್ತು ಭೈರವ್ ಗದೆರೆ ನಡುವೆ ಮಾತ್ರ ಬಂದಿದೆ. ಎರಡು ದಿನಗಳ ಹಿಂದೆ ಬಂದ ಹಿಮನದಿಗಿಂತ ಈ ಬಾರಿ ಬಂದಿರುವ ಹಿಮನದಿಗಳು ತುಂಬಾ ದೊಡ್ಡದಾಗಿದೆ ಮತ್ತು ಅಪಾಯಕಾರಿಯಾಗಿದೆ ಎಂದು ಸಾಬೀತಾಗಿದೆ.
ಕೇದಾರನಾಥ ದೇವಾಲಯಕ್ಕೆ ಹೋಗುವ ಮಾರ್ಗ ರಸ್ತೆಗೆ ಬಂದ ಬೃಹತ್ ಹಿಮಬಂಡೆಗಳು:ರಸ್ತೆ ಮೇಲಿನ ಹಿಮ ತೆಗೆಯುವ ಕಾರ್ಯ ಮುಂದುವರೆದಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ನಂದನ್ ಸಿಂಗ್ ರಾಜ್ವರ್ ತಿಳಿಸಿದ್ದಾರೆ. ಇಂದು ಮುಂಜಾನೆಯೂ ಮೂರು ಕಡೆ ದೊಡ್ಡ ಹಿಮನದಿಗಳು ಬಂದಿರುವುದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಗೌರಿಕುಂಡ್‌ನಿಂದ ಲಿಂಚೋಲಿ ನಡುವಿನ ಸುಮಾರು 8 ರಿಂದ 9 ಕಿಲೋಮೀಟರ್‌ಗಳ ಪ್ಯಾಚ್ ಹಲವೆಡೆ ಹಾನಿಗೊಳಗಾಗಿದ್ದು ಮಾತ್ರವಲ್ಲದೆ, ಹಿಮನದಿಯ ಆಗಮನದಿಂದಾಗಿ, ಬೃಹತ್ ಮಂಜುಗಡ್ಡೆಗಳು ರಸ್ತೆಗೆ ಬಂದಿವೆ ಎಂದಿದ್ದಾರೆ.
ಡ್ರೋನ್‌ಗಳ ಮೂಲಕ ಪರಿಸ್ಥಿತಿ ಅವಲೋಕನ: ಜಿಲ್ಲಾ ವಿಪತ್ತು ನಿರ್ವಹಣೆ ಮತ್ತು ಜಿಲ್ಲಾಡಳಿತ ಇದೀಗ ಡ್ರೋನ್‌ಗಳ ಮೂಲಕ ಸಂಪೂರ್ಣ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ. ಆದ್ದರಿಂದ ಮೇಲಿನಿಂದ ಬರುವ ಹಿಮನದಿಗಳು ಎಷ್ಟು ದೂರ ಇಳಿಯಬಹುದು ಮತ್ತು ಯಾವ ಸ್ಥಳಗಳಲ್ಲಿ ನಿಯಂತ್ರಣ ಸಿಬ್ಬಂದಿಯನ್ನು ರಚಿಸಬಹುದು ಎಂಬುದು ಸ್ಪಷ್ಟವಾಗುತ್ತದೆ. ಇದರೊಂದಿಗೆ ಹಿಮಪಾತ ನಿಂತ ಬಳಿಕ ಮತ್ತೊಮ್ಮೆ ಹೆಚ್ಚಿನ ಜನರೊಂದಿಗೆ ಹಿಮ ತೆಗೆಯುವ ಕಾರ್ಯ ಆರಂಭಿಸಲಾಗುವುದು ಎಂದರು.
ಕೇದಾರನಾಥ ಕಾಲುದಾರಿಯಲ್ಲಿ ಹಿಮಬಂಡೆಗಳ ಕುಸಿತ ಮತ್ತೊಮ್ಮೆ ಹಾನಿಗೊಳಗಾದ ಪಾದಚಾರಿ ರಸ್ತೆ:ಯಂತ್ರಗಳ ಮೂಲಕ ಹಿಮವನ್ನು ಕತ್ತರಿಸಿ ಕೈಯಾರೆ ತೆಗೆಯುವುದು ಆಡಳಿತದ ಮುಂದಿರುವ ದೊಡ್ಡ ಸವಾಲು. ಆದರೆ ಪಾದಚಾರಿ ಮಾರ್ಗಕ್ಕೆ ಹೆಚ್ಚು ಹಾನಿಯಾದರೆ ಅದನ್ನು ಸರಿಪಡಿಸಲು ಅಥವಾ ನಿರ್ಮಿಸಲು ಸಾಕಷ್ಟು ಹೆಣಗಾಡಬೇಕಾಗುತ್ತದೆ. ಈ ಮಾರ್ಗವನ್ನು 2013 ರ ಹಿಮಪಾತದ ದುರಂತದ ನಂತರ ಮತ್ತೆ ನಿರ್ಮಿಸಲಾಗಿದೆ. ಮತ್ತೊಮ್ಮೆ ದೊಡ್ಡ ಹಿಮನದಿಗಳು ಆಗಮನವಾಗಿರುವುದರಿಂದ ಹಲವೆಡೆ ರೈಲಿಂಗ್‌ಗಳು ಮುರಿದು ಫುಟ್‌ಪಾತ್‌ಗಳು ಒಡೆದು ತೊಂದರೆಯಾಗುತ್ತಿದೆ.
ಕೇದಾರನಾಥ ಧಾಮದಲ್ಲಿ ಇನ್ನೂ 2 ರಿಂದ 3 ಅಡಿಗಳಷ್ಟು ಹಿಮ ಹೆಪ್ಪುಗಟ್ಟಿರುವ ಕಾರಣ ಶೀಘ್ರದಲ್ಲೇ ಹಿಮವನ್ನು ತೆಗೆದುಹಾಕಲು ಪ್ರಯತ್ನಿಸಲಾಗುತ್ತಿದೆ. ಅಲ್ಲಿ ಯಂತ್ರಗಳ ಮೂಲಕ ಹಿಮ ತೆಗೆಯುವ ಕೆಲಸ ನಡೆಯುತ್ತಿದ್ದು, ಹಿಮಪಾತದಿಂದಾಗಿ ಯಂತ್ರಗಳಿಗೂ ಸಾಕಷ್ಟು ತೊಂದರೆಯಾಗುತ್ತಿದೆ. ಗ್ಲೇಸಿಯರ್ ಆಗಮನದಿಂದ ಹಲವೆಡೆ ನೀರಿನ ಪೈಪ್ಲೈನ್ ಕೂಡ ಒಡೆದು ಹೋಗಿದೆ.
ಹವಾಮಾನ ಇಲಾಖೆಯಿಂದ ಮಳೆಯ ಎಚ್ಚರಿಕೆ: ಮತ್ತೊಂದೆಡೆ, ಮಾರ್ಚ್ 22, 23 ಮತ್ತು 24 ರಂದು ಕೇದಾರನಾಥ ಮತ್ತು ಮೇಲಿನ ಪ್ರದೇಶಗಳಲ್ಲಿ ಭಾರೀ ಹಿಮಪಾತವಾಗಬಹುದು ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಅಲ್ಲದೇ, ರಾಜ್ಯದ ಬಹುತೇಕ ಭಾಗಗಳಲ್ಲಿ ಹಗುರ ಮತ್ತು ಭಾರಿ ಮಳೆಯಾಗಲಿದೆ. ಎತ್ತರದ ಪ್ರದೇಶಗಳಲ್ಲಿ ಹಿಮಪಾತವಾಗುವ ಸಾಧ್ಯತೆ ಹೆಚ್ಚು.
ಇದನ್ನೂ ಓದಿ :ಕಾಶ್ಮೀರದ ಬಾಲ್ಟಾಲ್ದಲ್ಲಿ ಭಾರಿ ಹಿಮಕುಸಿತ.. ವಿಡಿಯೋ