ಕರ್ನಾಟಕ

karnataka

ETV Bharat / bharat

ಮನೆಯಲ್ಲೇ ಅಪ್ರಾಪ್ತೆಯ ಹೆರಿಗೆ, ನವಜಾತ ಶಿಶು ಕೊಂದ ಪಾಪಿ ತಂದೆ - maharastra incident

ಅಪ್ರಾಪ್ತ ಬಾಲಕಿಯ ಗರ್ಭಪಾತ ನಡೆಸಿ, ನವಜಾತ ಶಿಶುವನ್ನು ಕೊಂದಿರುವ ಹೀನ ಕೃತ್ಯ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ.

the-girl-gave-birth-baby-at-home-and-the-father-also-killed-the-child
ಮನೆಯಲ್ಲೇ ಅಪ್ರಾಪ್ತೆ ಬಾಲಕಿಯ ಹೆರಿಗೆ, ನವಜಾತ ಶಿಶುವನ್ನು ಕೊಂದ ಪಾಪಿ ತಂದೆ

By

Published : Mar 8, 2023, 8:24 PM IST

ಪಟಾನ್ (ಮಹಾರಾಷ್ಟ್ರ): ಅತ್ಯಾಚಾರಕ್ಕೊಳಗಾಗಿ ಗರ್ಭಿಣಿ ಆಗಿದ್ದ ಅಪ್ರಾಪ್ತೆಯನ್ನ ತಂದೆಯೊಬ್ಬ ಗರ್ಭಪಾತ ಮಾಡಿಸಿ, ನವಜಾತ ಶಿಶು ಕೊಂದಿರುವ ಆಘಾತಕಾರಿ ಘಟನೆ ನೆರೆಯ ಮಹಾರಾಷ್ಟ್ರದ ಪಟಾನ್ ತಾಲೂಕಿನಲ್ಲಿ ನಡೆದಿದೆ.

ಈಗಾಗಲೇ ಅತ್ಯಾಚಾರ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಬಾಲಕಿಯ ವೈದ್ಯಕೀಯ ಪರೀಕ್ಷೆಯಲ್ಲಿ ಆಕೆ ಗರ್ಭಿಣಿಯಾಗಿಲ್ಲ ಎಂದು ತೋರಿಸಿದಾಗ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದ್ದು. ನಂತರ ಬಾಲಕಿಯು, ತನ್ನ ತಂದೆ ಅಕ್ಕಪಕ್ಕದ ಮನೆಯವರಿಗೆ ಗರ್ಭಪಾತ ಆಗಿರುವುದು ಗೊತ್ತಾಗಬಾರದು ಎಂದು ಶಿಶುವಿನ ತಲೆ ಮತ್ತು ಬಾಯಿಯನ್ನು ಒತ್ತಿ ಸಾಯಿಸಿದ್ದಾರೆ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ಈ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಂದೆ ವಿರುದ್ಧ ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ.

ಗರ್ಭಪಾತ ನಡೆಸಿದಾಗ ಬಾಲಕಿ ಎಂಟೂವರೆ ತಿಂಗಳ ಗರ್ಭಿಣಿಯಾಗಿದ್ದಳು ಎಂದು ತನಿಖೆಯ ಮುಖಾಂತರ ತಿಳಿದು ಬಂದಿದೆ. ಅತ್ಯಾಚಾರ ಎಸಗಿದ ಆರೋಪಿಯನ್ನ ಪೋಕ್ಸೋ ಕಾಯ್ದೆಯಡಿ ಪೊಲೀಸರು ಈಗಾಗಲೇ ಬಂಧಿಸಿದ್ದು, ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಬಾಲಕಿ ತಂದೆ ಗರ್ಭಪಾತ ಮಾಡಿದ ನಂತರ ಮಗುವಿನ ಅಳುವಿನ ಶಬ್ದವು ಅಕ್ಕಪಕ್ಕದ ಮನೆಯವರಿಗೆ ಕೇಳಿಸಬಾರದು ಎಂದು ನವಜಾತ ಶಿಶುವಿನ ಕುತ್ತಿಗೆ ಸೀಳಿ ಕೊಂದಿದ್ದಾನೆ. ನಂತರ ಸಾಕ್ಷ್ಯನಾಶ ಮಾಡಲು ಶಿಶುವಿನ ತಲೆಯನ್ನು ಚರಂಡಿಗೆ ಎಸೆಯಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.

ತನಿಖೆ ನಡೆಸುತ್ತಿರುವ ಪೊಲೀಸರು ಅಪರಾಧ ನಡೆದ ಸ್ಥಳದಿಂದ ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀನಾಯ ಕೃತ್ಯ ಎಸಗಿದ ತಂದೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಇದೀಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ (ಎಎಸ್‌ಪಿ) ದೀಪಜ್ಯೋತಿ ಪಾಟೀಲ್ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿದ್ದರೆ, ಎಎಸ್‌ಪಿ ಅಭಿಜೀತ್ ಚೌಧರಿ ಸಾಕ್ಷ್ಯ ನಾಶಪಡಿಸಿದ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಇಂಡಿಗೋ ವಿಮಾನದಲ್ಲಿ ಸಿಗರೇಟ್ ಸೇದಿ ಆತಂಕ ತಂದೊಡ್ಡಿದ ಯುವತಿ ಪೊಲೀಸ್​ ವಶಕ್ಕೆ

ಯೂಟ್ಯೂಬ್​ ನೋಡಿ ಹೆರಿಗೆ ಮಾಡಿಕೊಂಡ ವಿದ್ಯಾರ್ಥಿನಿ ಮಗು ಸಾವು ತಾಯಿ ಪ್ರಾಣಕ್ಕೂ ಕುತ್ತು:ಮಹಾರಾಷ್ಟ್ರದಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಯೂಟ್ಯೂಬ್​ ವಿಡಿಯೋ ನೋಡಿ ಹೆರಿಗೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಾರ್ಚ್​ 5ರಂದು ನಡೆದಿದೆ . ಈ ವೇಳೆ, ಮಗು ಸಾವನ್ನಪ್ಪಿದ್ದು, ಹೆರಿಗೆಯ ನಂತರ ಭಾರಿ ರಕ್ತಸ್ರಾವ ಉಂಟಾಗಿ ಬಾಲಕಿಯ ಪ್ರಾಣ ಕೂಡ ಅಪಾಯದಲ್ಲಿದೆ ಎಂದು ವರದಿಯಾಗಿದೆ.

ನಾಗ್ಪುರ ನಗರದ ಅಂಬಾಝರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾರ್ಚ್​ 3ರಂದು ಈ ಘಟನೆ ನಡೆದಿದೆ. ಅಪ್ರಾಪ್ತ ವಯಸ್ಸಿನ ಬಾಲಕಿ ಹೆರಿಗೆ ಮಾಡಿಕೊಂಡ ಬಳಿಕ ಮಗು ಮೃತಪಟ್ಟಿದೆ. ಸದ್ಯ ಗಂಭೀರ ಸ್ಥಿತಿಯಲ್ಲಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ :ಡಿಸಿ ಕಚೇರಿಯಲ್ಲಿ ಮೂವರು ಹೆಣ್ಣು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಯತ್ನ.. ಮಹಿಳಾ ದಿನಾಚರಣೆಯಂದು ಮನಕಲಕುವ ಘಟನೆ

ABOUT THE AUTHOR

...view details