ಕರ್ನಾಟಕ

karnataka

ETV Bharat / bharat

ಅಲೆಗಳ ಹೊಡೆತಕ್ಕೆ ಸಮುದ್ರಕ್ಕೆ ಬಿದ್ದ ಯುವತಿ.. ಮುಂಬೈ ಪೊಲೀಸರಿಂದ ರಕ್ಷಣೆ

ಮುಂಬೈನ ಗೇಟ್ ವೇ ಆಫ್ ಇಂಡಿಯಾ ಬಳಿಯ ಸಮುದ್ರದಲ್ಲಿ ತನ್ನ ಸ್ನೇಹಿತನೊಂದಿಗೆ ದೋಣಿ ವಿಹಾರಕ್ಕೆ ಯುವತಿ ತೆರಳಿದ್ದಳು. ಈ ವೇಳೆ ರಭಸವಾದ ಅಲೆಗಳ ಹೊಡೆತಕ್ಕೆ ಬಾಲಕಿ ಸಮುದ್ರದಲ್ಲಿ ಬಿದ್ದಿದ್ದು, ಕೂಡಲೇ ಪೊಲೀಸರು ಆಕೆಯನ್ನು ಕಾಪಾಡಿದ್ದಾರೆ.

The girl fallen from the boat in Mumbai  girl rescued by the mumbai police  mumbai police news  ಮುಂಬೈಯಲ್ಲಿ ಬೋಟ್​ನಿಂದ ಸಮುದ್ರದಲ್ಲಿ ಬಿದ್ದ ಯುವತಿ  ಸಮುದ್ರಗೆ ಬಿದ್ದ ಯುವತಿಯನ್ನು ಕಾಪಾಡಿದ ಮುಂಬೈ ಪೊಲೀಸ್​ ಮುಂಬೈ ಪೊಲೀಸ್​ ಸುದ್ದಿ
ಮುಂಬೈ ಪೊಲೀಸ್​

By

Published : Jan 10, 2022, 2:32 PM IST

ಮುಂಬೈ:ಇಲ್ಲಿನ ಗೇಟ್ ವೇ ಆಫ್ ಇಂಡಿಯಾದ ಬಳಿ ಯುವತಿಯೊಬ್ಬಳು ಭಾನುವಾರ ಸಮುದ್ರದಲ್ಲಿ ತನ್ನ ಸ್ನೇಹಿತೆಯೊಂದಿಗೆ ದೋಣಿ​ ವಿಹಾರಕ್ಕೆ ತೆರಳಿದ್ದಳು. ಆದರೆ, ಸಮುದ್ರದ ಅಲೆಗಳ ರಭಸಕ್ಕೆ ಯುವತಿ ಬೋಟ್​ನಿಂದ ಕೆಳಗೆ ಬಿದ್ದಿದ್ದಳು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಯುವತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಲೆಗಳ ಹೊಡೆತಕ್ಕೆ ಸಮುದ್ರಕ್ಕೆ ಬಿದ್ದ ಯುವತಿಯನ್ನು ರಕ್ಷಿಸಿದ ಮುಂಬೈ ಪೊಲೀಸರು

ಭಾನುವಾರವಾದ್ದರಿಂದ ಗೇಟ್ ಆಫ್ ಇಂಡಿಯಾ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬೋಟಿಂಗ್​ ಹೋಗುತ್ತಿರುತ್ತಾರೆ. ಯುವತಿಯೂ ಸಹ ತನ್ನ ಸ್ನೇಹಿತನೊಂದಿಗೆ ಬೋಟಿಂಗ್​​ಗೆ ಹೋಗಿದ್ದಳು. ಈ ವೇಳೆ ಇದ್ದಕ್ಕಿದ್ದಂತೆ ಸಮುದ್ರದಲ್ಲಿ ದೊಡ್ಡ ಅಲೆಯೊಂದು ಬೋಟ್​ಗೆ ಅಪ್ಪಳಿಸಿದೆ. ಪರಿಣಾಮ ಯುವತಿ ಸಮುದ್ರಕ್ಕೆ ಬಿದ್ದಿದ್ದಳು.

ಓದಿ:ಹಣಕ್ಕಾಗಿ 'ಪತ್ನಿಯರ ವಿನಿಮಯ' ದಂಧೆ ಬೆಳಕಿಗೆ.. ಇದಕ್ಕಾಗಿ ಮೆಸೆಂಜರ್​, ಟೆಲಿಗ್ರಾಂ ಗ್ರೂಪ್​ ರಚನೆ

ತಕ್ಷಣವೇ ಕರಾವಳಿ ಪೊಲೀಸ್ ಮತ್ತು ಕೊಲಾಬಾ ಪೊಲೀಸರ ಗಸ್ತು ಪಡೆಗಳಿಗೆ ಮಾಹಿತಿ ನೀಡಲಾಯಿತು. ಸುದ್ದಿ ತಿಳಿದ ಮುಂಬೈ ಪೊಲೀಸರು ಯುವತಿಯನ್ನು ರಕ್ಷಿಸಿ ಸುರಕ್ಷಿತವಾಗಿ ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ABOUT THE AUTHOR

...view details