ಕರ್ನಾಟಕ

karnataka

ETV Bharat / bharat

ಬಿಜೆಪಿಯ 'ರಥಯಾತ್ರೆ'ಗೆ ಮಮತಾ 'ದಿದೀರ್ ಡೂಟ್'.. ಯಾರಾಗ್ತಾರೆ ಬಂಗಾಳದ ಬಹದ್ದೂರ್?

ಉಭಯ ಪಕ್ಷಗಳು ಚುನಾವಣಾ ಪ್ರಚಾರದ ಹಂತದಲ್ಲಿ ಸಾಧ್ಯವಾದಷ್ಟು ಜನರನ್ನು ತಲುಪಲು ಪ್ರಯತ್ನಿಸುತ್ತಿವೆ ಮತ್ತು ಸಾಮಾನ್ಯ ಪಕ್ಷದ ಕಾರ್ಯಕರ್ತರ ಸ್ಥೈರ್ಯ ಹೆಚ್ಚಿಸುವ ಕಾರ್ಯ ಮಾಡುತ್ತಿವೆ. ಈ ಕಾರ್ಯತಂತ್ರವು ಜನಸಾಮಾನ್ಯರೊಂದಿಗೆ ನೇರ ಸಂಪರ್ಕವನ್ನು ಹೊಂದುವಂತೆ ಮತ್ತು ಜನರ ನಾಡಿ ಮಿಡಿತ ಅರಿಯಲು ಸಹಕಾರಿಯಾಗುತ್ತದೆ ಎಂದು ಎರಡೂ ಪಕ್ಷಗಳ ನಾಯಕರು ಭಾವಿಸಿದ್ದಾರೆ..

The game is on now between "Didi's Doot" and "Rathyatra"
ಬಂಗಾಳದಲ್ಲಿ ಟಿಎಂಸಿ ಬಿಜೆಪಿ ನಡುವೆ ಫೈಟ್

By

Published : Feb 15, 2021, 8:47 PM IST

ಕೋಲ್ಕತಾ :ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸಮಯ ಹತ್ತಿರವಾಗುತ್ತಿದ್ದಂತೆ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ಕಾದಾಟಗಳು ಕಾವು ಪಡೆದುಕೊಳ್ಳುತ್ತಿವೆ.

ಶತಾಯಗತಾಯ ಅಧಿಕಾರ ಹಿಡಿಯಲೇಬೇಕೆಂಬ ತವಕದಲ್ಲಿರುವ ಬಿಜೆಪಿ ಹಾಗೂ ಯಾವುದೇ ಕಾರಣಕ್ಕೂ ರಾಜ್ಯ ಬಿಟ್ಟುಕೊಡಲ್ಲ ಎಂಬ ಜಿದ್ದಿನಲ್ಲಿರುವ ಟಿಎಂಸಿ, ಮತದಾರರನ್ನು ತಮ್ಮತ್ತ ಸೆಳೆಯಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ. ಚುನಾವಣೆಯ ಭಾಗವಾಗಿ ಬಿಜೆಪಿ ರಾಜ್ಯಾದ್ಯಾಂತ ರಥ ಯಾತ್ರೆ ಮಾಡುತ್ತಿದ್ದು, ಇದಕ್ಕೆ ಸೆಡ್ಡು ಹೊಡೆಯಲು ಟಿಎಂಸಿ 'ದಿದೀರ್​ ಡೂಟ್'​ ಎಂಬ ಅಭಿಯಾನ ಪ್ರಾರಂಭಿಸಿದೆ.

ಬದಲಾಗುತ್ತಿರುವ ಕಾಲದಲ್ಲಿ ರಾಜಕೀಯ ಪ್ರಚಾರದ ಶೈಲಿಗಳು ಮತ್ತು ವೈಶಿಷ್ಟ್ಯಗಳಲ್ಲಿ ಬದಲಾವಣೆಗಳಾಗಿವೆ. ಸಾಂಪ್ರದಾಯಿಕ ರ್ಯಾಲಿಗಳು ಮತ್ತು ರಸ್ತೆ ಬದಿಯ ಸಭೆಗಳಲ್ಲದೆ, ಸೈಬರ್-ವಾರ್ ಇತ್ತೀಚಿನ ದಿನಗಳಲ್ಲಿ ಚುನಾವಣಾ ಅಭಿಯಾನದ ಅವಿಭಾಜ್ಯ ಅಂಗವಾಗಿದೆ. ಅದನ್ನು ಗಮನದಲ್ಲಿಟ್ಟುಕೊಂಡು ತೃಣಮೂಲ ಕಾಂಗ್ರೆಸ್ 'ದಿದೀರ್ ಡೂಟ್'ಎಂದು ಹೆಸರಿಸಲಾದ ಮೊಬೈಲ್ ಅಪ್ಲಿಕೇಶನ್‌ನ ಪ್ರಾರಂಭಿಸಿದೆ.

ಇದನ್ನು ಪ್ರಚಾರ ರ್ಯಾಲಿಗಳಲ್ಲಿಯೂ ಬಳಸಲಾಗುತ್ತಿದೆ. ಕಳೆದ ಶನಿವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಮತ್ತು ಟಿಎಂಸಿ ಸಂಸದ ಅವಿಷೇಕ್ ಬಂದೋಪಾಧ್ಯಾಯ ಅವರು ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಪ್ರಚಾರ ಮಾಡುವಾಗ ಕಾರೊಂದನ್ನು ಬಳಸಿದ್ದರು. ಆ ಕಾರಿನಲ್ಲಿ 'ದಿದೀರ್ ಡೂಟ್' ಪದಗಳನ್ನು ಗಮನ ಸೆಳೆಯುವಂತೆ ಬರೆಯಲಾಗಿತ್ತು.

ಬಿಜೆಪಿಯ ರಥ ಯಾತ್ರೆಯನ್ನು ಎದುರಿಸುವುದು 'ದಿದೀರ್ ಡೂಟ್‌'ನ ಮೂಲ ಉದ್ದೇಶ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿಯ ರಥ ಯಾತ್ರೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಬಿಜೆಪಿ ರಾಜ್ಯ ನಾಯಕ ದಿಲೀಪ್ ಘೋಷ್ ಹಾಗೂ ಇತ್ತೀಚೆಗೆ ಪಕ್ಷ ಸೇರಿದ ಮಾಜಿ ಟಿಎಂಸಿ ಮುಖಂಡ ಸುವೇಂದು ಅಧಿಕಾರಿ ಮುಖ್ಯ ಪ್ರಚಾರಕರಾಗಿದ್ದಾರೆ.

ಅವಿಷೇಕ್ ಬಂದೋಪಾಧ್ಯಾಯ ಕೂಡ ಇದೇ ರೀತಿಯ ಪ್ರತಿ-ಪ್ರಚಾರ ಮಾರ್ಗವನ್ನು ಪ್ರಾರಂಭಿಸಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ಸರಿಯಾದ ಸಮಯಕ್ಕೆ ಇತರ ತೃಣಮೂಲ ಕಾಂಗ್ರೆಸ್ ಮುಖಂಡರು ಅಳವಡಿಸಿಕೊಳ್ಳಲಿದ್ದಾರೆ.

ಉಭಯ ಪಕ್ಷಗಳು ಚುನಾವಣಾ ಪ್ರಚಾರದ ಹಂತದಲ್ಲಿ ಸಾಧ್ಯವಾದಷ್ಟು ಜನರನ್ನು ತಲುಪಲು ಪ್ರಯತ್ನಿಸುತ್ತಿವೆ ಮತ್ತು ಸಾಮಾನ್ಯ ಪಕ್ಷದ ಕಾರ್ಯಕರ್ತರ ಸ್ಥೈರ್ಯ ಹೆಚ್ಚಿಸುವ ಕಾರ್ಯ ಮಾಡುತ್ತಿವೆ. ಈ ಕಾರ್ಯತಂತ್ರವು ಜನಸಾಮಾನ್ಯರೊಂದಿಗೆ ನೇರ ಸಂಪರ್ಕವನ್ನು ಹೊಂದುವಂತೆ ಮತ್ತು ಜನರ ನಾಡಿ ಮಿಡಿತ ಅರಿಯಲು ಸಹಕಾರಿಯಾಗುತ್ತದೆ ಎಂದು ಎರಡೂ ಪಕ್ಷಗಳ ನಾಯಕರು ಭಾವಿಸಿದ್ದಾರೆ.

ಸದ್ಯ, ಎರಡೂ ಪಕ್ಷಗಳು ತಮ್ಮದೇ ಶೈಲಿಯಲ್ಲಿ ಶಕ್ತಿ ಪ್ರದರ್ಶನ ಮಾಡುತ್ತಿವೆ. ಈ ಹೋರಾಟದಲ್ಲಿ ದೀದಿಯ ಡೂಟ್​ಗಳನ್ನು ಸೋಲಿಸಿ ಕೇಸರಿ ಪಕ್ಷ ವಿಜಯದ ಪತಾಕೆ ಹಾರಿಸುತ್ತೋ, ಇಲ್ಲಾ, ಟಿಎಂಸಿ ಮೂರನೇ ಬಾರಿ ಅಧಿಕಾರವನ್ನು ಹಿಡಿಯುತ್ತೋ ಎಂಬುವುದನ್ನು ಕಾದು ನೋಡಬೇಕಿದೆ. ಈ ನಿರ್ಣಾಯಕ ಪ್ರಶ್ನೆಗೆ ಉತ್ತರ ಸಿಗಲು ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು.

ABOUT THE AUTHOR

...view details