ನವದೆಹಲಿ:73 ನೇ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳು(ಟ್ಯಾಬ್ಲೋ) ದೇಶದ ಗಮನ ಸೆಳೆದಿವೆ. ಈ ಬಾರಿ 12 ರಾಜ್ಯಗಳ ಟ್ಯಾಬ್ಲೋಗಳ ಪರೇಡ್ಗೆ ಕೇಂದ್ರ ಸರ್ಕಾರ ಅನುಮತಿಸಿದೆ. ಆಯಾ ರಾಜ್ಯಗಳು ಪ್ರದರ್ಶಿಸಿದ ಟ್ಯಾಬ್ಲೋಗಳ ವಿಶೇಷ ಹೀಗಿದೆ.
ಸ್ವಾತಂತ್ರ್ಯ ಹೋರಾಟದ ಪಂಜಾಬ್ ಸ್ತಬ್ಧಚಿತ್ರ
ಸ್ವಾತಂತ್ರ್ಯ ಹೋರಾಟದಲ್ಲಿ ಪಂಜಾಬ್ನ ಕೊಡುಗೆಯನ್ನು ಈ ಟ್ಯಾಬ್ಲೋದಲ್ಲಿ ಚಿತ್ರಿಸುತ್ತದೆ. ಸ್ವಾತಂತ್ರ್ಯ ಸೇನಾನಿಗಳಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಮುಂಭಾಗದಲ್ಲಿ ನಿಲ್ಲಿಸಲಾಗಿದೆ. ಲಾಲಾ ಲಜಪತ್ರಾಯ್ ಮತ್ತು ಉಧಮ್ಸಿಂಗ್ ನೇತೃತ್ವದಲ್ಲಿ ಸೈಮನ್ ಕಮಿಷನ್ ವಿರುದ್ಧ ನಡೆದ ಹೋರಾಟದಲ್ಲಿ ಬ್ರಿಟಿಷ್ ಸೈನಿಕರು ಥಳಿಸುತ್ತಿರುವುದನ್ನು ಇಲ್ಲಿ ತೋರಿಸಲಾಗಿದೆ.
ಕ್ರೀಡಾ ಸ್ಫೂರ್ತಿಯ ಹರಿಯಾಣ ಟ್ಯಾಬ್ಲೋ
ಹರಿಯಾಣದ ಟ್ಯಾಬ್ಲೋ ಕ್ರೀಡೆಯ ಕುರಿತಾಗಿ ಚಿತ್ರಿಸಲಾಗಿದೆ. ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಛೋಪ್ರಾ, ಕುಸ್ತಿಪಟುಗಳ ಸ್ಪರ್ಧೆಯನ್ನು ತೋರಿಸಲಾಗಿದೆ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಗೆದ್ದ 7 ಪದಕಗಳಲ್ಲಿ ಹರಿಯಾಣ 4 ಪದಕಗಳನ್ನು ಬಾಚಿಕೊಂಡಿದೆ. 2020ರ ಪ್ಯಾರಾಲಿಂಪಿಕ್ಸ್‌ನಲ್ಲಿ ಪಡೆದ 19 ಪದಕಗಳಲ್ಲಿ 6 ಪದಕಗಳನ್ನು ಹರಿಯಾಣದ ಆಟಗಾರರು ಪಡೆದುಕೊಂಡಿದ್ದನ್ನು ಇಲ್ಲಿ ಹೇಳಲಾಗಿದೆ.
ಗೋವಾ ಪರಂಪರೆ ಅನಾವರಣ
ರಿಪಬ್ಲಿಕ್ ಡೇ ಪರೇಡ್‌ನಲ್ಲಿ ಭಾಗವಹಿಸಿದ ಗೋವಾ ಟ್ಯಾಬ್ಲೋ, 'ಗೋವಾ ಪರಂಪರೆ' ಥೀಮ್ ಅನ್ನು ಆಧರಿಸಿದೆ. ಟ್ಯಾಬ್ಲೋವು ಫೋರ್ಟ್ ಅಗುಡಾ, ಪಣಜಿಯ ಆಜಾದ್ ಮೈದಾನದಲ್ಲಿ ಹುತಾತ್ಮರ ಸ್ಮಾರಕ ಮತ್ತು ಡೋನಾ ಪೌಲಾವನ್ನು ಹೊಂದಿದೆ.
ದೇವಾಲಯಗಳ ಪ್ರದರ್ಶಿಸಿದ ಉತ್ತರಾಖಂಡ
ಉತ್ತರಾಖಂಡದ ಟ್ಯಾಬ್ಲೋ ಹೇಮಕುಂಡ್ ಸಾಹಿಬ್ ಗುರುದ್ವಾರ, ದೋಬ್ರಾ- ಚಂಟಿ ಸೇತುವೆ ಮತ್ತು ಬದರಿನಾಥ ದೇವಾಲಯವನ್ನು ಒಳಗೊಂಡಿದೆ.