ಕರ್ನಾಟಕ

karnataka

ETV Bharat / bharat

ಉಕ್ರೇನ್​​ನಿಂದ ತಾಯ್ನಾಡಿಗೆ ಬಂದ ಖುಷಿ.. ಕೇಂದ್ರ ಸರ್ಕಾರವನ್ನ ಹಾಡಿ ಹೊಗಳಿದ ವಿದ್ಯಾರ್ಥಿಗಳು!

ಯುದ್ಧ ಪೀಡಿತ ಉಕ್ರೇನ್​​ನಿಂದ 219 ವಿದ್ಯಾರ್ಥಿಗಳನ್ನ ಹೊತ್ತ ಏರ್ ಇಂಡಿಯಾ ವಿಮಾನ ಮುಂಬೈಗೆ ಆಗಮಿಸಿದ್ದು, ತಾಯ್ನಾಡಿಗೆ ಬರುತ್ತಿದ್ದಂತೆ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

First evacuation flight from Ukraine lands in Mumbai
First evacuation flight from Ukraine lands in Mumbai

By

Published : Feb 26, 2022, 9:23 PM IST

ಮುಂಬೈ(ಮಹಾರಾಷ್ಟ್ರ): ರಷ್ಯಾ- ಉಕ್ರೇನ್​ ನಡುವಿನ ಬಿಕ್ಕಟ್ಟಿನಿಂದ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್​​ನಲ್ಲಿ ಸಿಲುಕಿಕೊಂಡಿದ್ದು, ಇದೀಗ 219ರ ಜನರ ಮೊದಲ ಬ್ಯಾಚ್​ ಮುಂಬೈಗೆ ಆಗಮಿಸಿದೆ. ಉಕ್ರೇನ್​​ನಿಂದ ತಾಯ್ನಾಡಿಗೆ ಬರುತ್ತಿದ್ದಂತೆ ಸಂತಸ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು ಕೇಂದ್ರ ಸರ್ಕಾರವನ್ನ ಹಾಡಿ ಹೊಗಳಿದ್ದಾರೆ.

ಉಕ್ರೇನ್​​ನಿಂದ ತಾಯ್ನಾಡಿಗೆ ಬಂದ ಖುಷಿ.

ಭಾರತ ಸರ್ಕಾರದ ಮೇಲೆ ನಮಗೆ ನಂಬಿಕೆ ಇತ್ತು. ಖಂಡಿತವಾಗಿ ನಮ್ಮನ್ನು ಭಾರತಕ್ಕೆ ಕರೆತರುತ್ತಾರೆಂಬ ನಂಬಿಕೆ ಇಟ್ಟುಕೊಂಡಿದ್ದೆವು. ಆರಂಭದಲ್ಲಿ ಸ್ವಲ್ಪ ಭಯ, ಗಾಬರಿ ಇತ್ತು. ಆದರೆ, ಇದೀಗ ಭಾರತಕ್ಕೆ ಮರಳಲು ತುಂಬಾ ಸಂತೋಷವಾಗಿದೆ ಎಂದು ಎಂಬಿಬಿಎಸ್​ ವಿದ್ಯಾರ್ಥಿ ಹೇಳಿಕೊಂಡಿದ್ದಾರೆ. ಇದೇ ವೇಳೆ ಮಾತನಾಡಿರುವ ಕೇಂದ್ರ ಸಚಿವ ಪಿಯೂಷ್​ ಗೊಯಲ್​, ನಮ್ಮ ವಿದ್ಯಾರ್ಥಿಗಳು ತವರಿಗೆ ಮರಳಿರುವುದು ತುಂಬಾ ಖುಷಿಯಾಗಿದೆ. ಮತ್ತೊಂದು ಬ್ಯಾಚ್​ ಆದಷ್ಟು ಬೇಗ ದೆಹಲಿಗೆ ಬರಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ:ಉಕ್ರೇನ್‌ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಹೊತ್ತ ಮೊದಲ ವಿಮಾನ ಮುಂಬೈಗೆ ಆಗಮನ

ಇದೇ ವೇಳೆ, ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ ಅವರು, ರಷ್ಯಾ - ಉಕ್ರೇನ್‌ ನಡುವಿನ ಬಿಕ್ಕಟ್ಟಿನ ಆರಂಭದಿಂದಲೂ ಉಕ್ರೇನ್‌ನಲ್ಲಿ ಸಿಲುಕಿರುವ ಪ್ರತಿಯೊಬ್ಬ ಭಾರತೀಯನನ್ನು ಮರಳಿ ದೇಶಕ್ಕೆ ಕರೆತರುವುದು ನಮ್ಮ ಮುಖ್ಯ ಉದ್ದೇಶವಾಗಿತ್ತು. 219 ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಿದ್ದಾರೆ. ಇದು ಮೊದಲ ಬ್ಯಾಚ್ ಆಗಿದ್ದು, ಎರಡನೆಯ ಬ್ಯಾಚ್‌ ಅತಿ ಶೀಘ್ರದಲ್ಲೇ ದೆಹಲಿ ತಲುಪಲಿದೆ. ಅವರೆಲ್ಲರೂ ಮನೆಗೆ ಮರಳುವವರೆಗೆ ನಾವು ಈ ಕಾರ್ಯಾಚರಣೆಯನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.

ABOUT THE AUTHOR

...view details