ಕರ್ನಾಟಕ

karnataka

ETV Bharat / bharat

ಬ್ರಿಟಿಷ್ ಅಧ್ಯಾಯದ ಮೊದಲ ಪುಟ 'ಅಜ್ಮೀರ್'.. ದೇಶದ ಚಹರೆ ಬದಲಿಸಿತು ಜಹಾಂಗೀರ್ ಮಾಡಿಕೊಂಡ ಆ ಒಂದು ಒಪ್ಪಂದ - ಅಜ್ಮೀರ್ ಕೋಟೆ ಸುದ್ದಿ

ಈಸ್ಟ್ ಇಂಡಿಯಾ ಕಂಪನಿ ಸೂರತ್ ಮತ್ತು ಭಾರತದ ಇತರ ಭಾಗಗಳಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಲು ವಿಶೇಷ ಹಕ್ಕುಗಳನ್ನು ಬಯಸಿತ್ತು. ಹಲವು ಸಭೆಗಳ ನಂತರ, ಜಹಾಂಗೀರ್ ಪ್ರಸ್ತಾವನೆ ಒಪ್ಪಿಕೊಂಡರು. ಈ ಒಪ್ಪಂದವು ಭಾರತದ ಇತಿಹಾಸವನ್ನು ಶಾಶ್ವತವಾಗಿ ಬದಲಾಯಿಸಿತು.

ಅಜ್ಮೀರ್ ಕೋಟೆ
ಅಜ್ಮೀರ್ ಕೋಟೆ

By

Published : Aug 28, 2021, 5:57 AM IST

ಅಜ್ಮೀರ್ (ರಾಜಸ್ಥಾನ):ಅಜ್ಮೀರ್ ನಗರದ ಮಧ್ಯದಲ್ಲಿರುವ ರಾಜ್ಯ ವಸ್ತು ಸಂಗ್ರಹಾಲಯವನ್ನು ಅಜ್ಮೀರ್ ಕೋಟೆ ಎಂದು ಕರೆಯುತ್ತಾರೆ. ಇದನ್ನು ಅಕ್ಬರನ ಕಾಲದಲ್ಲಿ ನಿರ್ಮಿಸಲಾಯಿತು. ಭಾರತದಲ್ಲಿ ಬ್ರಿಟಿಷ್ ಗುಲಾಮಗಿರಿ ಮೊದಲ ಅಧ್ಯಾಯವು ಅಜ್ಮೀರ್ ಕೋಟೆಯಿಂದ ಆರಂಭವಾಯಿತು.

1616 ರಲ್ಲಿ, ಇಂಗ್ಲೆಂಡಿನ ರಾಜ ಜೇಮ್ಸ್ (I) (ಒಂದನೇ ಜೇಮ್ಸ್) ಸೂಚನೆ ಮೇರೆಗೆ, ಥಾಮಸ್ ರೋ ಈ ಕೋಟೆಯಲ್ಲಿ ಮೊಘಲ್ ಚಕ್ರವರ್ತಿ ಜಹಾಂಗೀರ್ ಅವರನ್ನು ಭೇಟಿಯಾದರು. ಈ ಸಭೆಯ ಉದ್ದೇಶ ವಾಣಿಜ್ಯ ಒಪ್ಪಂದಕ್ಕೆ ಅನುಮತಿ ಪಡೆಯುವುದಾಗಿತ್ತು.

ಬ್ರಿಟಿಷ್ ಅಧ್ಯಾಯದ ಮೊದಲ ಪುಟ 'ಅಜ್ಮೀರ್'

ಈಸ್ಟ್ ಇಂಡಿಯಾ ಕಂಪನಿ ಸೂರತ್ ಮತ್ತು ಭಾರತದ ಇತರ ಭಾಗಗಳಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಲು ವಿಶೇಷ ಹಕ್ಕುಗಳನ್ನು ಬಯಸಿತ್ತು. ಹಲವು ಸಭೆಗಳ ನಂತರ, ಜಹಾಂಗೀರ್ ಪ್ರಸ್ತಾವನೆ ಒಪ್ಪಿಕೊಂಡರು. ಈ ಒಪ್ಪಂದವು ಭಾರತದ ಇತಿಹಾಸವನ್ನು ಶಾಶ್ವತವಾಗಿ ಬದಲಾಯಿಸಿತು.

ಆ ಸಮಯದಲ್ಲಿ ವ್ಯಾಪಾರ ಮತ್ತು ಕಾರ್ಖಾನೆಗಳನ್ನು ಸ್ಥಾಪಿಸಲು ಬಂದ ಈಸ್ಟ್ ಇಂಡಿಯಾ ಕಂಪನಿ ತನ್ನ ಸಾಮ್ರಾಜ್ಯವನ್ನು ಇಡೀ ದೇಶದಲ್ಲಿ ಸ್ಥಾಪಿಸುತ್ತದೆ ಎಂದು ಯಾರೊಬ್ಬರೂ ಅಂದಾಜಿಸಿರಲಿಲ್ಲ. ಕ್ರಮೇಣ ಈಸ್ಟ್ ಇಂಡಿಯಾ ಕಂಪನಿ ತನ್ನ ಜಾಲವನ್ನು ದೇಶದಾದ್ಯಂತ ವ್ಯಾಪಿಸುವಂತೆ ಮಾಡಿತಲ್ಲದೇ ಬ್ರಿಟೀಷರ ಆಳ್ವಿಕೆ ಭಾರತದಲ್ಲಿ ಆರಂಭವಾಯಿತು.

ಅಜ್ಮೀರ್‌ನಲ್ಲಿ ಚೌಹಾಣ್​ ರಾಜವಂಶದ ಬಳಿಕ ರಜಪೂತ, ಮೊಘಲ್, ಮರಾಠರ ನಂತರ ಪೃಥ್ವಿರಾಜ್ ಚೌಹಾಣ್​ ಆಸ್ಥಾನವಾಗಿದ್ದ ಅಜ್ಮೀರವನ್ನು ಕೊನೆಗೆ ಬ್ರಿಟಿಷರೂ ಆಳಿದರು. ಈ ಕೋಟೆಯು ಅನೇಕ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಅಕ್ಬರ್ ಹಲ್ದಿಘಾಟ್​ ಯುದ್ಧವನ್ನು ಈ ಕೋಟೆಯಿಂದ ಮೇಲ್ವಿಚಾರಣೆ ಮಾಡುತ್ತಿದ್ದನು ಮತ್ತು ಮಾನ್​​​ಸಿಂಗ್​ನನ್ನು ಯುದ್ಧಕ್ಕೆ ಕಳುಹಿಸಿದ್ದನು.

ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಸ್ವತಂತ್ರ ಭಾರತದ ಆಚರಣೆಗೆ ಈ ಅಜ್ಮೀರ್ ಕೋಟೆಯು ಸಾಕ್ಷಿಯಾಯಿತು. ಆಗಸ್ಟ್ 14, 1947 ರಂದು, ಮಧ್ಯರಾತ್ರಿ 12 ಗಂಟೆಗೆ ಸ್ವಾತಂತ್ರ್ಯ ಘೋಷಿಸಲಾಯಿತು. ನಂತರ ಕಾಂಗ್ರೆಸ್ ಅಧ್ಯಕ್ಷ ಜಿತ್ಮಾಲ್ ಲುನಿಯಾ ನೂರಾರು ಜನರ ಸಮ್ಮುಖದಲ್ಲಿ ಈ ಕೋಟೆಯ ಮೇಲೆ ಬ್ರಿಟಿಷರ ಧ್ವಜವನ್ನು ಕೆಳಗಿಳಿಸುವ ಮೂಲಕ ತಿರಂಗಾ ಏರಿಸಿದರು.

ರಾಜಸ್ಥಾನದ ಅಜ್ಮೀರ್ ಕೋಟೆ ದೇಶದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ಇದು ರಜಪೂತರ ಸಾಮ್ರಾಜ್ಯವಾಗಿತ್ತು. ಮೊಘಲರು ಮಾತ್ರವಲ್ಲ ಬ್ರಿಟಿಷರ ಮೊದಲ ಆಯ್ಕೆಯೂ ಅಜ್ಮೀರ್ ಆಗಿತ್ತು ಎಂಬುದು ಇಲ್ಲಿ ಗಮನಾರ್ಹವಾದ ವಿಷಯವಾಗಿದೆ. ಅಜ್ಮೀರ್ ಸ್ವಾತಂತ್ರ್ಯ ಚಳವಳಿಯಲ್ಲಿ ಕ್ರಾಂತಿಕಾರಿಗಳ ಭದ್ರಕೋಟೆಯೂ ಆಗಿತ್ತು. ಹೀಗೆ ಅನೇಕ ವಿಶೇಷತೆಗಳೊಂದಿಗೆ ಅಜ್ಮೀರ್​ ಇತಿಹಾಸದ ಪುಟಗಳಲ್ಲಿ ತನ್ನದೇ ಸ್ಥಾನ ಪಡೆದಿದೆ. ​​

ABOUT THE AUTHOR

...view details