ಹೈದರಾಬಾದ್:ಯಾವುದೇ ಸಣ್ಣ ಕಾಯಿಲೆಗೆ, ಅನೇಕರು ತಾವೇ ಔಷಧಗಳನ್ನು ಖರೀದಿಸುತ್ತಾರೆ. ಕೆಲವರು ಗೂಗಲ್ನಲ್ಲಿ ಸರ್ಚ್ ಮಾಡಿ ಆ ಔಷಧಗಳನ್ನು ಬಳಸುತ್ತಾರೆ. ಇವೆರಡೂ ಅಪಾಯಕಾರಿ. ಇಂತಹದ್ದೇ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಮಗಳ ಅನಾರೋಗ್ಯದ ಬಗ್ಗೆ ಆನ್‌ಲೈನ್‌ನಲ್ಲಿ ಹುಡುಕಾಡಿದ ತಂದೆ ಆಗಾಗ್ಗೆ ವೈದ್ಯರು ಬರೆದುಕೊಟ್ಟ ಔಷಧಗಳನ್ನು ಖರೀದಿ ಮಾಡುತ್ತಿದ್ದರು. ಕೊನೆಗೆ ಆಕೆಯ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ದಾಖಲಿಸಬೇಕಾದ ಪರಿಸ್ಥಿತಿ ಎದುರಾದಾಗ, ವೈದ್ಯರು ತುರ್ತು ಚಿಕಿತ್ಸೆ ನೀಡಿ ಆಕೆಯ ಪ್ರಾಣ ಉಳಿಸಿದ್ದಾರೆ.
ಈ ಕುರಿತು ಶುಕ್ರವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ನೆಫ್ರಾಲಜಿ ಮತ್ತು ಯುರಾಲಜಿಯ (ಎಐಎನ್‌ಯು) ಸಲಹೆಗಾರ ಮೂತ್ರಶಾಸ್ತ್ರಜ್ಞ ಡಾ.ರಾಘವೇಂದ್ರ ಕುಲಕರ್ಣಿ ಅವರು, ನಗರದ ಯುವತಿಯೊಬ್ಬರು ಆರ್ಕಿಟೆಕ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಆಗಾಗ್ಗೆ ಜ್ವರ ಮತ್ತು ಮೂತ್ರದಲ್ಲಿ ಉರಿಯುತ್ತಿದ್ದರಿಂದ ಆಕೆಯನ್ನು ಇತ್ತೀಚೆಗೆ ಎಐಎನ್‌ಯುಗೆ ದಾಖಲಿಸಲಾಯಿತು. ಸಿಟಿ ಸ್ಕ್ಯಾನ್ ಮಾಡಿದ ವೈದ್ಯರು ಆಕೆಯ ಮೂತ್ರಪಿಂಡದಲ್ಲಿ 10ರಿಂದ 13 ಮಿಮೀ ಗಾತ್ರದಲ್ಲಿ ಕೆಲವು ಕಲ್ಲುಗಳನ್ನು ಪತ್ತೆಯಾಗಿವೆ. ಯುವತಿ ಹಾಗೂ ಆಕೆಯ ತಂದೆಯನ್ನು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ'' ಎಂದು ಅವರು ತಿಳಿಸಿದರು.
''ಆಕೆಗೆ ಯಾವುದಾದರೂ ಕಾಯಿಲೆ ಬಂತು ಎಂದರೆ ಮಗಳಿಗೆ ತಂದೆಯೇ ಗೂಗಲ್ನಲ್ಲಿ ಸರ್ಚ್ ಮಾಡಿ ಆ್ಯಂಟಿಬಯೋಟಿಕ್ಸ್ ನೀಡುತ್ತಿದ್ದರು. ಇದು ಮಗಳ ಆರೋಗ್ಯದ ಮೇಲೆ ಭಾರಿ ಅಡ್ಡ ಪರಿಣಾಮ ಬೀರಿದೆ. ಹೀಗೆ ಅವರು ಅನೇಕ ಬಾರಿ ವೈದ್ಯರ ಸಲಹೆಗಳು ಇಲ್ಲದೇ ಅನೇಕ ಮಾತ್ರೆಗಳನ್ನು ಮಗಳಿಗೆ ನೀಡಿದ್ದಾರೆ. ಇದೇ ರೀತಿ ಕಾಯಿಲೆ ಬಂದಾಗಲೆಲ್ಲ ಆ್ಯಂಟಿ ಬಯೋಟಿಕ್ಸ್ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ. ಆದರೆ, ಈ ಔಷಧಗಳ ವಿರುದ್ಧವಾಗಿರುವಂತಹ ಬ್ಯಾಕ್ಟೀರಿಯಾಗಳು ಕೂಡ ರೂಪುಗೊಂಡಿವೆ'' ಎಂದು ಡಾ.ರಾಘವೇಂದ್ರ ಅವರು ಹೇಳಿದ್ದಾರೆ.
ವೈದ್ಯ ಡಾ.ರಾಘವೇಂದ್ರ ನೀಡಿದ ಸಲಹೆ:''ಅತಿಯಾಗಿ ಆ್ಯಂಟಿಬಯೋಟಿಕ್ ಬಳಕೆಯಿಂದ ಪ್ರೋಟೀನ್ಗಳು ಗಟ್ಟಿಯಾಗಿ ಕಿಡ್ನಿಯಲ್ಲಿ ಕಲ್ಲುಗಳಾಗಿ ಮಾರ್ಪಟ್ಟಿವೆ. ಇದರಿಂದ ಮೂತ್ರದ ಸೋಂಕು ಉಂಟಾಗುತ್ತದೆ. ಕಿಡ್ನಿಯಲ್ಲಿರುವ ಕಲ್ಲುಗಳನ್ನು ತೆಗೆಯುವ ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಲಾಯಿತು. ನಂತರ ಆಕೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು. ವೈದ್ಯರ ಸೂಚನೆಯಿಲ್ಲದೇ ಪ್ರತಿ ಸಣ್ಣ ಕಾಯಿಲೆಗೂ ಆ್ಯಂಟಿಬಯೋಟಿಕ್ ಬಳಕೆ ಮಾಡುವುದು ಅಪಾಯಕಾರಿ. ಮನ ಬಂದಂತೆ ಮಾತ್ರೆಗಳನ್ನು ತೆಗೆದುಕೊಂಡರೆ, ಔಷಧಗಳಿಗೆ ವಿರುದ್ಧವಾಗಿ ಬ್ಯಾಕ್ಟೀರಿಯಾಗಳು ಬೆಳೆಯುವ ಅಪಾಯವಿದೆ'' ಎಂದು ಡಾ.ರಾಘವೇಂದ್ರ ಅವರು ಇದೇ ವೇಳೆ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ದೆಹಲಿ- ಭೋಪಾಲ್ ವಂದೇ ಭಾರತ್ ಎಕ್ಸ್ಪ್ರೆಸ್ ಮೇಲೆ 12ನೇ ಸಲ ಕಲ್ಲು ತೂರಾಟ: ಕಿಟಕಿಯ ಗಾಜುಗಳು ಪುಡಿ