ಕರ್ನಾಟಕ

karnataka

ETV Bharat / bharat

12ನೇ ದಿನಕ್ಕೆ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಧರಣಿ: ಎಸ್ಎಚ್ಒ ಮೇಲೆ ವಾಹನ ಹರಿಸಿದ ರೈತ - ಮಾಜಿ ಗೃಹ ಸಚಿವ ಸುಖ್‌ಬೀರ್ ಸಿಂಗ್ ಬಾದಲ್

ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಂಜಾಬ್​ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಹಾಗೂ ರೈತರ ಪ್ರತಿಭಟನೆ ಮುಂದುವರಿದಿದೆ. ಡಿ.12ರಂದು ಶಾಸಕರು, ಸಚಿವರ ಮನೆ ಎದುರು ಧರಣಿ ಕೈಗೊಳ್ಳಲು ನಿರ್ಧಾರ ಮಾಡಲಾಗಿದೆ.

Kisan Mazdoor Sangharsh Committee protest
ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಧರಣಿ

By

Published : Dec 7, 2022, 7:15 PM IST

ಮೊಗಾ(ಪಂಜಾಬ್​): ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಂಜಾಬ್​ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಹಾಗೂ ರೈತರು ಡಿಸಿ ಕಚೇರಿ ಎದುರು ಗೇಟ್ ಬಂದ್ ಮಾಡಿ 12ನೇ ದಿನವೂ ಧರಣಿ ಸತ್ಯಾಗ್ರಹ ನಡೆಸಿದರು.

ಎಸ್ಎಚ್ಒಗೆ ಗಾಯ: ಪ್ರತಿಭಟನೆ ವೇಳೆ ರೈತನೊಬ್ಬರು ಎಸ್‌ಎಚ್‌ಒ ಮೇಲೆ ವಾಹನ ಚಲಾಯಿಸಿ ಗಾಯಗೊಳಿಸಿದ್ದು, ಗಾಯಾಳು ಎಸ್‌ಎಚ್‌ಒ ಅವರನ್ನು ಚಿಕಿತ್ಸೆಗಾಗಿ ಮೊಗಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಬಗ್ಗೆ ಡಿಎಸ್‌ಪಿ ಭೂಪಿಂದರ್‌ ಸಿಂಗ್‌ ಮಾತನಾಡಿ, ಧರಣಿ ಸಂದರ್ಭದಲ್ಲಿ ರೈತರು ನಮ್ಮ ಎಸ್‌ಎಚ್‌ಒ ಅವರ ಕಾಲಿನ ಮೇಲೆ ವಾಹನ ಚಲಾಯಿಸಿದ್ದಾರೆ.

ಆ ರೈತ ಮದ್ಯ ಸೇವಿಸಿದ್ದ. ಇದಾದ ಬಳಿಕ ವಾಹನ ಚಲಾಯಿಸುತ್ತಿದ್ದ ರೈತನನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.

ರೈತರ ಬೇಡಿಕೆಗಳೇನು:ಪ್ರತಿಭಟನೆ ಕುರಿತಂತೆ ರೈತ ಮುಖಂಡರೊಬ್ಬರು ಮಾತನಾಡಿ, ಲಖೀಂಪುರ ಖೇರಿ ಆರೋಪಿಗಳಿಗೆ ಶಿಕ್ಷೆ ಆಗಬೇಕು. ಸಚಿವ ಅಜಯ್ ಮಿಶ್ರಾ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು. ಸಂಪೂರ್ಣ ಸಾಲ ಮನ್ನಾ, ಅಂತರ್ಜಲ ಕಲುಷಿತವಾಗದಂತೆ ಸಂರಕ್ಷ ಣೆ ಕ್ರಮ ಕೈಗೊಳ್ಳಬೇಕು.

ನಕಲಿ ಹಾಲು ಪೂರೈಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜಮೀನು ಖಾತೆ ಬದಲಾಯಿಸಿ ಗ್ರಾಮದ ಜಮೀನನ್ನು ಕಾರ್ಪೊರೇಟ್ ಕುಟುಂಬಕ್ಕೆ ನೀಡುವ ಸರ್ಕಾರ ಸರ್ಕಾರ ಸಿದ್ಧತೆ ನಡೆಸಿದ್ದು,ಅದನ್ನೂ ತಡೆಯಬೇಕು. ಕೋಟಕಪುರ ಬೆಹಬಲ್ ಗುಂಡಿನ ದಾಳಿಗೆ ಆದೇಶ ನೀಡಿದ್ದ ಅಂದಿನ ಮಾಜಿ ಗೃಹ ಸಚಿವ ಸುಖ್‌ಬೀರ್ ಸಿಂಗ್ ಬಾದಲ್ ವಿರುದ್ಧ ವರದಿ ಸಲ್ಲಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದ್ದಾರೆ.

ಸರ್ಕಾರ ರೈತರ ಬೇಡಿಕೆಗೆ ಶೀಘ್ರವೇ ಒಪ್ಪಿಗೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಡಿ.12ರಂದು ಶಾಸಕರು, ಸಚಿವರ ಮನೆಗಳಿಗೆ ಮುತ್ತಿಗೆ ಹಾಕಲಾಗುವುದು. 15ರಿಂದ ಎಲ್ಲ ಟೋಲ್‌ ಪ್ಲಾಜಾ ಬಂದ್‌ ಮಾಡಿ ಪ್ರತಿಭಟಿಸಲಾಗುವುದು ಎಂದು ಇದೇ ವೇಳೆ ರೈತರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂಓದಿ:ಯುವತಿಯನ್ನು ಕೊಂದು ನೀರಿಗೆಸೆದು, ಸುಟ್ಟು ಮತ್ತೆ ಹೂಳಿದ ದುರುಳರು: ಲಿವ್ ಇನ್ ದುರಂತ!

ABOUT THE AUTHOR

...view details