ಆಂಧ್ರಪ್ರದೇಶ :ಖಮ್ಮಂ ಜಿಲ್ಲೆಯ ಕಾಕಿನಾಡದಲ್ಲಿ ಲಾರಿ ಚಾಲಕ ಕ್ಲೀನರ್ ರಾಜು ಎಂಬಾತನನ್ನು ಕಬ್ಬಿಣದ ರಾಡ್ನಿಂದ ಹೊಡೆದು, ಚಾಕುವಿನಿಂದ ಇರಿದು ಕೊಂದಿರುವ ಘಟನೆ ನಡೆದಿದೆ.
ಅಕ್ಕಿಯನ್ನು ತುಂಬಿಕೊಂಡು ಹೋಗಲು ಇಬ್ಬರು ಕರೀಂನಗರಕ್ಕೆ ಬರುತ್ತಿದ್ದರು. ಕಾಕಿನಾಡದಿಂದ ಕರೀಂನಗರಕ್ಕೆ ಬರುವಾಗ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಈ ಜಗಳ ವಿಕೋಪಕ್ಕೆ ತಿರುಗಿ ಲಾರಿ ಚಾಲಕ ಕ್ಲೀನರ್ ರಾಜುನನ್ನು ಕೊಲೆಗೈದಿದ್ದಾನೆ.
ಬಳಿಕ ಆತನ ಮೃತದೇಹವನ್ನು ಲಾರಿಯಲ್ಲೇ ಇಟ್ಟುಕೊಂಡು ಪ್ರಯಾಣಿಸಿದ್ದಾನೆ. ಬಳಿಕ ಮಾರ್ಗ ಮಧ್ಯದಲ್ಲಿ ಸಿಕ್ಕ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಖಮ್ಮಂ ಜಿಲ್ಲೆಯ ಕೊನಿಜೆರ್ಲಾ ಪೊಲೀಸ್ ಠಾಣೆಗೆ ಚಾಲಕ ಶರಣಾಗಿದ್ದಾನೆ.
ಈ ಘಟನೆಯಿಂದ ಪೊಲೀಸರು ಆಘಾತಕ್ಕೊಳಗಾಗಿದ್ದಾರೆ. ಚಾಲಕ ಪೊಲೀಸರ ಬಳಿ ನನ್ನ ರಕ್ಷಣೆಗಾಗಿ ನಾನು ಆತನನ್ನು ಕೊಂದೆ ಎಂದು ಹೇಳಿಕೊಂಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡರು, ತನಿಖೆ ಆರಂಭಿಸಿದ್ದಾರೆ.