ಗುವಾಹಟಿ(ಅಸ್ಸೋಂ): ಚಿಕಿತ್ಸೆ ಫಲಿಸದೇ ನವಜಾತ ಶಿಶು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಿಸಿದ ಬಳಿಕ ಅಂತ್ಯ ಸಂಸ್ಕಾರ ನಡೆಸುವ ವೇಳೆ ಮಗು ಬದುಕಿರುವ ಘಟನೆ ಅಸ್ಸೋಂನ ಸಿಲ್ಚರ್ ಟೌನ್ನಲ್ಲಿ ನಡೆದಿದೆ. ರತನ್ ದಾಸ್ (29) ಎಂಬುವರ ಮಗು ಅದೃಷ್ಟವಶಾತ್ ಅಂತ್ಯ ಸಂಸ್ಕಾರದ ವೇಳೆ ಜೀವಂತ ಇರುವುದು ಗೊತ್ತಾಗಿದೆ.
ಏನಿದು ಘಟನೆ: ರತನ್ ದಾಸ್ ಅವರ ಆರು ತಿಂಗಳ ಗರ್ಭಿಣಿ ಹೆಂಡತಿ ಗರ್ಭಾವಸ್ಥೆಯಲ್ಲಿ ಉಂಟಾದ ತೊಂದರೆಯಿಂದಾಗಿ ಸಿಲ್ಚರ್ನ ಖಾಸಗಿ ಆಸ್ಪತ್ರೆಗೆ ಮಂಗಳವಾರ ರಾತ್ರಿ ದಾಖಲಾಗಿದ್ದರು. ಈ ವೇಳೆ ಗರ್ಭಿಣಿಯ ಆರೋಗ್ಯದಲ್ಲಿ ತೊಂದರೆಯಾದ ಹಿನ್ನೆಲೆ ವೈದ್ಯರು ತಾಯಿ ಅಥವಾ ಮಗುವನ್ನು ಮಾತ್ರ ಬದುಕಿಸಲು ಸಾಧ್ಯ ಎಂದು ತಿಳಿಸಿದ್ದರು.
ಈ ವೇಳೆ ದಾಸ್ ಮಗುವನ್ನು ಬದುಕಿಸುವಂತೆ ಅನುಮತಿ ನೀಡಿದ್ದಾರೆ. ಈ ವೇಳೆ ಅಕಾಲಿಕ ಮಗುವಿನ ಜನನ ನಡೆಸಲಾಗಿದೆ. ಆದರೆ, ಅವಧಿ ಪೂರ್ವವಾಗಿ ಮಗು ಹುಟ್ಟಿದ ಪರಿಣಾಮ ಮಗು ಚಿಕಿತ್ಸೆಯು ಫಲಕಾರಿಯಾಗದೇ, ಬುಧವಾರ ಬೆಳಗ್ಗೆ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೇ, ಆಸ್ಪತ್ರೆಯ ಸಿಬ್ಬಂದಿ ಮಗುವಿನ ದೇಹ ಮತ್ತು ಮರಣ ಪ್ರಮಾಣ ಪತ್ರವನ್ನು ಕೂಡ ನೀಡಿದ್ದರು.
ಸಾವನ್ನಪ್ಪಿದ ಮಗುವಿನ ದೇಹದ ಪಾರ್ಸೆಲ್ ಅನ್ನು ನೀಡಿದ ಬಳಿಕ ಕುಟುಂಬಸ್ಥರು ಸಿಲ್ಚಾರ್ನ ಶವಾಗಾರದಲ್ಲಿ ಅಂತ್ಯ ಸಂಸ್ಕಾರಕ್ಕೆ ಮುಂದಾಗಿದ್ದಾರೆ. ಈ ವೇಳೆ ಮಗು ದೇಹವನ್ನು ಅಲುಗಾಡಿಸಿದ್ದು, ಉಸಿರಾಡಿದೆ. ತಕ್ಷಣಕ್ಕೆ ಮಗುವನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಯಿತು ಎಂದು ದಾಸ್ ವಿವರಣೆ ನೀಡಿದ್ದಾರೆ.