ಚೆನ್ನೈ:ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಮತ್ತೆ ಚಂಡಮಾರುತ ಸಂಭವಿಸುವ ಸಾಧ್ಯತೆಯಿದೆ ಎಂದು ತಮಿಳುನಾಡಿನ ಪ್ರಾದೇಶಿಕ ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ.
ಎಚ್ಚರ.. ಎಚ್ಚರ..! 24 ಗಂಟೆಗಳಲ್ಲಿ ಮತ್ತೆ ಚಂಡಮಾರುತ ಸಾಧ್ಯತೆ
ನಿವಾರ್ ಸೈಕ್ಲೋನ್ ಅಬ್ಬರ ತಣ್ಣಗಾಗಿದೆ. ಆದರೆ ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಮತ್ತೆ ಚಂಡಮಾರುತ ಸಂಭವಿಸುವ ಸಾಧ್ಯತೆಯಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ
ನವೆಂಬರ್ 30ರಿಂದ ಡಿಸೆಂಬರ್ 1ರವರೆಗೆ ಬಂಗಾಳ ಕೊಲ್ಲಿಯ ಆಗ್ನೇಯ ಭಾಗಕ್ಕೆ, ಡಿ. 1ರಿಂದ 3ರವರೆಗೆ ನೈರುತ್ಯ ಭಾಗ ಮತ್ತು ಶ್ರೀಲಂಕಾದ ಪೂರ್ವ ಭಾಗದ ಕರಾವಳಿ ಹಾಗೂ ಡಿ. 2ರಿಂದ 4ರವರೆಗೆ ದಕ್ಷಿಣ ತಮಿಳುನಾಡು-ಕೇರಳ ಕರಾವಳಿಯಲ್ಲಿ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಸೂಚಿಸಲಾಗಿದೆ.
ಕಳೆದ ವಾರ ಬಂಗಾಳ ಕೊಲ್ಲಿಯ ಪಶ್ಚಿಮ ಭಾಗದಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾಗಿದ್ದ 'ನಿವಾರ್' ಚಂಡಮಾರುತ ತಮಿಳುನಾಡು, ಪುದುಚೆರಿ ಹಾಗೂ ಆಂಧ್ರ ಪ್ರದೇಶಗಳಲ್ಲಿ ತನ್ನ ಪರಿಣಾಮ ಬೀರಿತ್ತು.