ಕೋರ್ಬಾ: ಆಗ್ನೇಯ ಮಧ್ಯ ರೈಲ್ವೆ ಐದು ಸರಕು ರೈಲುಗಳನ್ನು ಒಟ್ಟಿಗೆ ಜೋಡಿಸುವ ಮೂಲಕ ದಾಖಲೆ ನಿರ್ಮಾಣ ಮಾಡಿ 3.5 ಕಿ.ಮೀ ಉದ್ದದ ದೇಶದ ಅತಿ ಉದ್ದದ ರೈಲು 'ವಾಸುಕಿ' ಅನ್ನು ಯಶಸ್ವಿಯಾಗಿ ಓಡಿಸಿದೆ.
3.5 ಕಿ.ಮೀ ಉದ್ದದ ಸರಕು ಸಾಗಣೆ ರೈಲು 'ವಾಸುಕಿ' ಈ ಸರಕು ರೈಲನ್ನು ಕಲ್ಲಿದ್ದಲು ಸಾಗಣೆಗೆ ಬಳಸಲಾಗುವುದು. ಈ ರೈಲು ಛತ್ತಿಘಡದ ಭಿಲೈ ನಿಂದ 224 ಕಿ.ಮೀ ದೂರದ ಕೋರ್ಬಾ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದೆ. ಈ ವಾಸುಕಿಯ ಕಾರ್ಯಾಚರಣೆಗಳು ಸಮಯ ಮತ್ತು ಸಿಬ್ಬಂದಿಯನ್ನು ಉಳಿಸುತ್ತದೆ. ಗ್ರಾಹಕರಿಗೆ ತ್ವರಿತ ವಿತರಣಾ ಸೌಲಭ್ಯ ಸಿಗಲಿದೆ. ಭಾರತೀಯ ರೈಲ್ವೆ ಇತಿಹಾಸದಲ್ಲಿ ಮೊದಲ ಬಾರಿಗೆ ಆಗ್ನೇಯ ಮಧ್ಯ ರೈಲ್ವೆ 5 ಸರಕು ರೈಲುಗಳನ್ನು ಒಟ್ಟಿಗೆ ಜೋಡಿಸುವ ಮೂಲಕ ದಾಖಲೆ ಬರೆದಿದೆ.
ಸರಕು ಸಾಗಣೆ ರೈಲುಗಳ ಕಾರ್ಯಾಚರಣೆಯ ಸಮಯವನ್ನು ಕಡಿಮೆ ಮಾಡಲು, ಸಿಬ್ಬಂದಿಯನ್ನು ಉಳಿಸಲು ಮತ್ತು ಗ್ರಾಹಕರಿಗೆ ತ್ವರಿತವಾಗಿ ತಲುಪಿಸಲು ದೀರ್ಘ ಸರಕು ರೈಲುಗಳನ್ನು ನಡೆಸಲಾಗುತ್ತಿದೆ. 29 ಜೂನ್ 2020 ರಂದು, ಮೂರು ಲೋಡ್ ಸರಕು ರೈಲುಗಳನ್ನು ಒಟ್ಟಿಗೆ ಜೋಡಿಸುವ ಮೂಲಕ ಲಾಂಗ್ ಹಾಲ್ ಸೂಪರ್ ಅನಕೊಂಡ (ಶೆಷನಾಗ್) ರೈಲನ್ನು ನಡೆಸಲಾಗಿತ್ತು.
ಜನವರಿ 22, 2021 ರಂದು, ವಾಸುಕಿ ಭಿಲೈ ನಿಂದ ರಾಯ್‌ಪುರ ರೈಲ್ವೆ ವಿಭಾಗದ ಕೊರ್ಬಾವರೆಗೆ ನಡೆಸಲಾಯಿತು. ಈ ಸರಕು ರೈಲಿಗೆ 300 ವ್ಯಾಗನ್‌ಗಳನ್ನು ಸೇರಿಸುವ ಮೂಲಕ ಲಾಂಗ್ ಹಾಲ್ ರ್ಯಾಕ್ ಅನ್ನು ಸೇರಿಸಲಾಯಿತು. ಈ ರೈಲು ಭಿಲೈ ನಿಂದ ಕೋರ್ಬಾ ನಿಲ್ದಾಣ ತಲುಪಲು 7 ಗಂಟೆ ಸಮಯ ತೆಗೆದುಕೊಂಡಿದೆ.