ಗುಜರಾತ್:ವಿಶ್ವಾದ್ಯಂತ ಚಹಾಪ್ರಿಯರಿಗೆ ಕೊರತೆ ಇಲ್ಲ. ಬಹುತೇಕರಿಗೆ ಟೀ ಅಂದರೆ ಅಚ್ಚುಮೆಚ್ಚು. ಇನ್ನೂ ಕೆಲವರಿಗೆ ಚಹಾ ಇಲ್ಲವಾದರೆ ಆಗೋದೇ ಇಲ್ಲ. ಭಾರತದಲ್ಲೂ ಚಹಾಪ್ರಿಯರ ಸಂಖ್ಯೆ ದೊಡ್ಡದಿದೆ. ಇಲ್ಲಿ ವೈವಿಧ್ಯಮಯ ಚಹಾವನ್ನು ನಾವು ಕಾಣಬಹುದು.
ಗುಜರಾತ್ನ ಸೂರತ್‌ನಲ್ಲಿ ಸಹ ಅತಿ ಹೆಚ್ಚು ಸಂಖ್ಯೆಯ ಚಹಾಪ್ರೇಮಿಗಳಿದ್ದಾರೆ. ಆದರೆ ಇಲ್ಲಿ ಸಿಗುವ ವಿಶೇಷ ಚಹಾ ಪೌಡರ್ ಹಾಗು ತಾಜಾ ಚಹಾದ ಬೆಲೆ ಕೇಳಿದರೆ ಅಚ್ಚರಿಯಾಗುತ್ತದೆ. ಕೇವಲ ಒಂದು ಕೆ.ಜಿ ಟೀ ಪೌಡರ್‌ಗೆ 5 ಲಕ್ಷ ರೂಪಾಯಿ ಬೆಲೆ ಇದೆ. ಒಂದು ಕಪ್ ಚಹಾದ ಬೆಲೆ 250 ರೂ. ಇದೆ. ಹಾಗಂತ, ಬೆಲೆ ಜಾಸ್ತಿಯಾದರೂ ಜನರು ಚಹಾ ಕುಡಿಯುವುದನ್ನು ನಿಲ್ಲಿಸುವುದಿಲ್ಲ.