ಹೈದರಾಬಾದ್: ಇಡೀ ವಿಶ್ವದಲ್ಲಿ ಅನೇಕ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲು ಕಾರಣವಾಗಿದ್ದು, ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಮಾಡಿದೆ ಕಣ್ಣಿಗೆ ಕಾಣದ ಕೊರೊನಾ ವೈರಸ್. ಒಂದು ವರ್ಷದ ಅವಧಿಯಲ್ಲಿ ವಿಶ್ವದಾದ್ಯಂತ 7 ಕೋಟಿಗೂ ಹೆಚ್ಚು (7,07,45,886) ಜನರನ್ನು ತನ್ನ ಬಲೆಯಲ್ಲಿ ಸಿಲುಕಿಸಿಕೊಂಡಿದೆ. ಇವರಲ್ಲಿ 15,88,911 ಸೋಂಕಿತರು ಮಹಾಮಾರಿಗೆ ಬಲಿಯಾಗಿದ್ದು, 4,91,72,205 ಮಂದಿ ಗುಣಮುಖರಾಗಿದ್ದಾರೆ.
ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 1,60,39,393 ಇದ್ದು, ಮೃತರ ಸಂಖ್ಯೆ 2,99,692ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ:'ಫೈಜರ್'ಗೆ ಅಸ್ತು ಎಂದ ಸೌದಿ; ಉಚಿತ ಲಸಿಕೆ ನೀಡಲು ಬಹ್ರೇನ್ ರೆಡಿ
ಕೇಸ್ಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಈವರೆಗೆ 97,96,992 ಕೇಸ್ಗಳು ಪತ್ತೆಯಾಗಿದ್ದು, 1,42,222 ಜನರು ವೈರಸ್ಗೆ ಬಲಿಯಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್ನಲ್ಲಿ 67,83,543 ಪ್ರಕರಣಗಳು ಹಾಗೂ 1,79,801 ಸಾವುಗಳು ವರದಿಯಾಗಿವೆ. 4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 25,69,126 ಕೇಸ್ಗಳಿದ್ದು, 45,280 ಜನರು ಸಾವನ್ನಪ್ಪಿದ್ದಾರೆ.
ಅಮೆರಿಕ, ಬ್ರೆಜಿಲ್, ಭಾರತದ ಬಳಿಕ ಸಾವಿನ ಸಂಖ್ಯೆಯಲ್ಲಿ ಮೆಕ್ಸಿಕೋ, ಇಂಗ್ಲೆಂಡ್ ಹಾಗೂ ಇಟಲಿ ಕ್ರಮವಾಗಿ 4, 5 ಹಾಗೂ 6ನೇ ಸ್ಥಾನದಲ್ಲಿವೆ. ಒಟ್ಟು 218 ರಾಷ್ಟ್ರಗಳು ಕೋವಿಡ್ ಹೊಡೆತಕ್ಕೆ ಸಿಲುಕಿದ್ದು, ಕೊರೊನಾ ಪೀಡಿತ ವಿಶ್ವದ ಟಾಪ್ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.
ಗ್ಲೋಬಲ್ ಕೋವಿಡ್-19 ಟ್ರ್ಯಾಕರ್ ಕೋವಿಡ್ ಮೊಟ್ಟಮೊದಲು ಕಾಣಿಸಿಕೊಂಡು ಅದರಿಂದ ಚೇತರಿಸಿಕೊಂಡಿದ್ದ ಚೀನಾದಲ್ಲಿ ಬೆರಳೆಣಿಕೆಯಷ್ಟು ಕೇಸ್ಗಳು ಪತ್ತೆಯಾಗುತ್ತಿವೆ. 2019ರ ಡಿಸೆಂಬರ್ನಿಂದ ಈವರೆಗೆ ಚೀನಾದಲ್ಲಿ 86,688 ಪ್ರಕರಣಗಳು ಹಾಗೂ 4,634 ಸಾವುಗಳು ವರದಿಯಾಗಿವೆ.