ನವದೆಹಲಿ :12ನೇ ತರಗತಿ ಸಿಬಿಎಸ್ಸಿ ಪರೀಕ್ಷೆ ಕುರಿತ ವಿದ್ಯಾರ್ಥಿಗಳ ಹಾಗೂ ಪೋಷಕರ ಗೊಂದಲಕ್ಕೆ ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ಕೊಂಚ ತೆರೆ ಎಳೆದಿದ್ದಾರೆ.
ಈ ಕುರಿತು ಇಂದು ನಡೆದ ಸಚಿವರ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಗಿದ್ದು, ಪರೀಕ್ಷೆ ರದ್ದಾಗುವುದಿಲ್ಲ ಎಂಬ ಸೂಚನೆ ನೀಡಿದ್ದಾರೆ. ಜೊತೆಗೆ ಈ ಕುರಿತು ಜೂನ್ 1ರಂದು ಅಂತಿಮ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದಿದ್ದಾರೆ.
ಅಲ್ಲದೆ ಬೋರ್ಡ್ ಪರೀಕ್ಷೆಯನ್ನು ಶಾರ್ಟ್ ಫಾರ್ಮ್ಯಾಟ್ನಲ್ಲಿ ನಡೆಸಲು ಆಸಕ್ತಿ ತೋರಿದ್ದು, ರಾಜ್ಯ ಮಂಡಳಿಗಳಿಗೆ ತಮ್ಮದೇ ನಿರ್ಧಾರ ಕೈಗೊಳ್ಳುವ ಅವಕಾಶ ನೀಡಲಾಗುವುದು ಎಂಬ ಕುರಿತು ಚರ್ಚೆ ನಡೆದಿವೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಮಂತ್ರಿ ಸಲಹೆಯಂತೆ ಸಭೆ ಅತ್ಯಂತ ಫಲಪ್ರದವಾಯಿಗಿದೆ. ಮೇ 25ರೊಳಗೆ ರಾಜ್ಯ ಸರ್ಕಾರಗಳು ತಮ್ಮ ವಿವರವಾದ ಸಲಹೆಗಳನ್ನು ನಮಗೆ ಕಳುಹಿಸುವಂತೆ ವಿನಂತಿಸಿದ್ದೇನೆ ಶಿಕ್ಷಕರ ಜೊತೆ, ಮಕ್ಕಳ ಆರೋಗ್ಯವು ನಮಗೆ ಮುಖ್ಯ ಎಂದು ರಮೇಶ್ ಪೋಖ್ರಿಯಾಲ್ ಟ್ವೀಟ್ ಮಾಡಿದ್ದಾರೆ.
ಇತ್ತ ಪರೀಕ್ಷೆ ನಡೆಸುವತ್ತ ಸಿಬಿಇ ಮಂಡಳಿ ಎರಡು ಅಂಶಗಳನ್ನ ಪ್ರಸ್ತಾಪಿಸಿದೆ. ಮೊದಲನೆಯದಾಗಿ ಪರೀಕ್ಷೆಗಳ ಅವಧಿಯನ್ನ ಮೂರು ತಿಂಗಳೊಳಗೆ ಮುಗಿಸುವುದು.