ನಾರಾಯಣಪೇಟೆ(ತೆಲಂಗಾಣ): ಪ್ರೀತಿಯ ಹೆಸರಿನಲ್ಲಿ ಯುವಕನಿಂದ ಕಿರುಕುಳಕ್ಕೊಳಗಾಗಿರುವ ಯುವತಿಯೊಬ್ಬಳು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ತೆಲಂಗಾಣದ ನಾರಾಯಣಪೇಟೆಯಲ್ಲಿ ಈ ಘಟನೆ ನಡೆದಿದೆ. ಘಟನೆ ಬೆನ್ನಲ್ಲೇ ಯುವಕ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ.
ನಾರಾಯಣಪೇಟೆಯ ಮುಕ್ತಲ್ ಪುರಸಭೆ ವ್ಯಾಪ್ತಿಯ ಚಂದಾಪುರದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಪದ್ಮಮ್ಮ ಮತ್ತು ವೆಂಕಟಯ್ಯ ದಂಪತಿಯ ಎರಡನೇ ಪುತ್ರಿ ಭೀಮೇಶ್ವರಿ(19) ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿ. ಕಳೆದ 10 ದಿನಗಳ ಹಿಂದೆ ಇದೇ ಗ್ರಾಮದ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಲಾಗಿತ್ತು. ಅಂದುಕೊಂಡಂತೆ ಎಲ್ಲವೂ ಆಗಿದ್ದರೆ ಇಂದು ಸಪ್ತಪದಿ ತುಳಿದು, ಹತ್ತಾರು ಭರವಸೆಗಳೊಂದಿಗೆ ಹೊಸ ಜೀವನ ಸಹ ಆರಂಭವಾಗಬೇಕಾಗಿತ್ತು.