ಗೊಂಡಿಯಾ(ಮಹಾರಾಷ್ಟ್ರ):18ರಿಂದ 19 ವರ್ಷದೊಳಗಿನ ಯುವತಿಯೋರ್ವಳ ಅರಬೆತ್ತಲೆ ಮೃತದೇಹ ಕಾಡಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಮಹಾರಾಷ್ಟ್ರದ ಅಮಗಾಂವ್ ತಾಲೂಕಿನ ಕುಂಬಾರ್ ತೋಲಾ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಆರೋಪಿಗಳು ಯುವತಿಯ ಗುರುತು ಸಿಗದ ರೀತಿಯಲ್ಲಿ ಮಾಡುವ ಉದ್ದೇಶದಿಂದ ಆಕೆಯ ಮುಖ ಸುಟ್ಟು ಹಾಕುವ ಪ್ರಯತ್ನ ಮಾಡಿದ್ದಾರೆ. ಇದೇ ಕಾರಣಕ್ಕಾಗಿ ಆಕೆಯ ಗುರುತು ಪತ್ತೆಯಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಪೊಲೀಸರು ಸಹ ಹಿಂದೇಟು ಹಾಕಿದ್ದಾರೆ.