ಕರ್ನಾಟಕ

karnataka

ETV Bharat / bharat

ಅತೀ ಶೀಘ್ರವೇ ಯುನೆಸ್ಕೋ ಪಟ್ಟಿಯಲ್ಲಿ ಸೇರಲಿದೆ ಸಾರನಾಥದ ಪುರಾತತ್ವ ಅವಶೇಷಗಳ ಸಂಕೀರ್ಣ!

ಉತ್ತರಪ್ರದೇಶದ ವಾರಾಣಸಿಯಲ್ಲಿರುವ ಭಗವಾನ್ ಬುದ್ಧನ ಧರ್ಮೋಪದೇಶದ ಸ್ಥಳದ ಪುರಾತತ್ವ ಅವಶೇಷಗಳ ಸಂಕೀರ್ಣವು ಶೀಘ್ರದಲ್ಲೇ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ ಎಂದು ಪುರಾತತ್ವ ಇಲಾಖೆ ಹೇಳಿದೆ.

Varanasi  unesco  varanasi news  Archaeological Ruins Complex  Archaeological Ruins Complex in varanasi  ಯುನೆಸ್ಕೋ ಪಟ್ಟಿಯಲ್ಲಿ ಸೇರಲಿದೆ ಸಾರನಾಥದ ಪುರಾತತ್ವ ಅವಶೇಷಗಳ ಸಂಕೀರ್ಣ  ಯುನೆಸ್ಕೋ ಪಟ್ಟಿಯಲ್ಲಿ ಸೇರಲಿದೆ ಸಾರನಾಥದ ಪುರಾತತ್ವ ಅವಶೇಷಗಳ ಸಂಕೀರ್ಣ ಸುದ್ದಿ,  ವಾರಣಾಸಿ ಸುದ್ದಿ
ಯುನೆಸ್ಕೋ ಪಟ್ಟಿಯಲ್ಲಿ ಸೇರಲಿದೆ ಸಾರನಾಥದ ಪುರಾತತ್ವ ಅವಶೇಷಗಳ ಸಂಕೀರ್ಣ

By

Published : Mar 20, 2021, 1:25 PM IST

ವಾರಾಣಸಿ:ಭಗವಾನ್ ಬುದ್ಧನ ಧರ್ಮೋಪದೇಶದ ಸ್ಥಳದ ಪುರಾತತ್ವ ಅವಶೇಷಗಳು ಕಳೆದ 20 ವರ್ಷಗಳಿಂದ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಕಾಯುತ್ತಿದ್ದೇವೆ ಎಂದು ಪುರಾತತ್ವಶಾಸ್ತ್ರ ಇಲಾಖೆ ಹೇಳಿದೆ.

ಈ ಅವಶೇಷಗಳು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸ್ಥಾನ ಪಡೆಯಲು 20 ವರ್ಷಗಳಿಂದ ಸಂಭವನೀಯ ಪಟ್ಟಿಯಲ್ಲಿ ಇರಿಸಲಾಗಿದೆ. ಪ್ರಾಚೀನ ವಸ್ತುಗಳ ವಿನ್ಯಾಸವನ್ನು ಈಗಾಗಲೇ ಸಿದ್ಧಪಡಿಸಿ ದೆಹಲಿಯ ಪುರಾತತ್ವ ಇಲಾಖೆಯ ಪ್ರಧಾನ ಕಚೇರಿಗೆ ಕಳುಹಿಸಲಾಗಿದೆ ಎಂದು ಪುರಾತತ್ವಶಾಸ್ತ್ರ ಇಲಾಖೆ ತಿಳಿಸಿದೆ.

ಯುನೆಸ್ಕೋ ಪಟ್ಟಿಯಲ್ಲಿ ಸಾರನಾಥದಲ್ಲಿರುವ ಪುರಾತತ್ವ ಅವಶೇಷಗಳ ಸಂಕೀರ್ಣವನ್ನು ಸೇರಿಸಲು ಒಂದೆರಡು ತಿಂಗಳಲ್ಲಿ ದೆಹಲಿ ಮಹಾನಿರ್ದೇಶಕರು ಪ್ರಸ್ತಾವನೆ ಕಳುಹಿಸಲಿದ್ದಾರೆ ಎಂದು ಪುರಾತತ್ವಶಾಸ್ತ್ರಜ್ಞ ಡಾ.ನೀರಜ್ ಸಿಂಗ್ ಮಾಹಿತಿ ನೀಡಿದ್ದಾರೆ.

ಅವಶೇಷಗಳ ಸಂಕೀರ್ಣದಲ್ಲಿ ಎರಡೂವರೆ ಸಾವಿರ ವರ್ಷಗಳಿಗಿಂತಲೂ ಹಳೆಯದಾದ ಪ್ರಾಚೀನ ವಸ್ತುಗಳು ಕಂಡು ಬಂದಿವೆ. ಧರ್ಮರಾಜಿಕ, ಪ್ರಾಚೀನ ಮೂಲಗಂಧ ಕುತಿ ಬುದ್ಧ ವಿಹಾರದ ಅವಶೇಷಗಳು ಮತ್ತು ಮೌರ್ಯದಿಂದ ಗಹದ್ವಾಲ್ ಕಾಲದ ಅವಶೇಷಗಳು ಆವರಣದಲ್ಲಿ ಕಂಡುಬಂದಿವೆ ಎಂದು ಡಾ.ನೀರಜ್​ ಸಿಂಗ್​ ಹೇಳಿದರು.

ಸ್ಥಳದಲ್ಲಿ ಏಳು ವಿಹಾರಗಳು ಮತ್ತು ಮುನ್ನೂರು ಮನುತಿ ಸ್ತೂಪಗಳು ಹಾಗೂ ಧಮ್ಮೇಖ್ ಸ್ತೂಪಗಳನ್ನು ಒಂದೇ ಅವಶೇಷಗಳ ಸಂಕೀರ್ಣದಲ್ಲಿ ನಿರ್ಮಿಸಲಾಗಿದೆ ಎಂದು ಪುರಾತತ್ತ್ವಶಾಸ್ತ್ರದ ತಜ್ಞರ ತಿಳಿಸಿದ್ದಾರೆ.

ABOUT THE AUTHOR

...view details