ಹೈದರಾಬಾದ್:ವರ್ಷದ ಮೊದಲ ಸೂರ್ಯ ಗ್ರಹಣ ಪ್ರಕ್ರಿಯೆ ಆರಂಭಗೊಂಡಿದ್ದು, ಭಾರತದ ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶದಲ್ಲಿ ಭಾಗಶಃ ಸೂರ್ಯಗ್ರಹಣ ಗೋಚರವಾಗಿದೆ. ಉತ್ತರ ಅಮೆರಿಕ, ಕೆನಡಾ, ಯುರೋಪ್ ಮತ್ತು ರಷ್ಯಾಗಳಲ್ಲಿ ಪೂರ್ಣ ಗ್ರಹಣವು ಗೋಚರವಾಗುತ್ತಿದೆ. ರಿಂಗ್ ಆಫ್ ಫೈರ್ ಎಂದೂ ಕರೆಯಲ್ಪಡುವ ಈ ವಿದ್ಯಮಾನವು ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬಂದಾಗ ಸಂಭವಿಸುತ್ತದೆ.
ಸೂರ್ಯ ಗ್ರಹಣ: ಈಶಾನ್ಯ ಭಾರತದಲ್ಲಿ ‘ರಿಂಗ್ ಆಫ್ ಫೈರ್’ ಭಾಗಶಃ ಗೋಚರ - ಚಂದ್ರ ಗ್ರಹಣ
ಚಂದ್ರನು ಭೂಮಿಯಿಂದ ದೂರದಲ್ಲಿದ್ದಾಗ ವಾರ್ಷಿಕ ಸೂರ್ಯಗ್ರಹಣ ಸಂಭವಿಸುತ್ತದೆ. ಗ್ರಹದಿಂದ ದೂರವಿರುವುದರಿಂದ ಚಂದ್ರನಿಗೆ ಸೂರ್ಯನ ಬೆಳಕನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗುವುದಿಲ್ಲ.
ಭಾರತದಲ್ಲಿ ಪೂರ್ಣ ಗೋಚರವಾಗದ ವರ್ಷದ ಮೊದಲ ಸೂರ್ಯ ಗ್ರಹಣ
ಚಂದ್ರನು ಭೂಮಿಯಿಂದ ದೂರದಲ್ಲಿದ್ದಾಗ ವಾರ್ಷಿಕ ಸೂರ್ಯಗ್ರಹಣ ಸಂಭವಿಸುತ್ತದೆ. ಗ್ರಹದಿಂದ ದೂರವಿರುವುದರಿಂದ ಚಂದ್ರನಿಗೆ ಸೂರ್ಯನ ಬೆಳಕನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗುವುದಿಲ್ಲ. ಈ ವೇಳೆ ಆಗಸದಲ್ಲಿ ನೆರಳು ಬೆಳಕಿನ ಆಟ ಕಂಡು ಬರುತ್ತದೆ. ಭಾರತದಲ್ಲಿ ಮಧ್ಯಾಹ್ನ 1:42ರಿಂದ ಸಂಜೆ 6:41ರ ವರೆಗೆ ಭಾಗಶಃ ಗೋಚರವಾಯಿತು.
ಓದಿ:ಮುಂಬೈ ಕಟ್ಟಡ ದುರಂತ; 8 ಮಕ್ಕಳು ಸೇರಿ 11 ಮಂದಿ ಬಲಿ, ಪರಿಹಾರ ಘೋಷಣೆ