ಹೈದರಾಬಾದ್: ಜುಬಿಲಿ ಹಿಲ್ಸ್‌ನಲ್ಲಿ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಕುತೂಹಲಕಾರಿ ಸಂಗತಿಗಳು ಹೊರಬಿದ್ದಿವೆ. ಆರೋಪಿಗಳು ಸಂತ್ರಸ್ತೆಗೆ ದಿಗ್ಬಂಧನ ಹಾಕಲು ಪೂರ್ವಯೋಜಿತ ಯೋಜನೆ ರೂಪಿಸಿದ್ದರು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಬಾಲಕಿ ಹೇಳಿದ್ದೇನು?:ಮೇ 28 ರಂದು ಬಾಲಕಿಯ ಮೇಲೆ ಅತ್ಯಾಚಾರ ನಡೆದ ನಂತರ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಸಂತ್ರಸ್ತೆಯೊಂದಿಗೆ ಜೂನ್ 2 ರಂದು ಭರೋಸಾ ಕೇಂದ್ರದಲ್ಲಿ ಹೇಳಿಕೆ ಪಡೆದಿದ್ದಾರೆ. 'ಆರೋಪಿ ಯಾರು ಅಂತ ನನಗೆ ಗೊತ್ತಿಲ್ಲ. ನಾವು ಮನೆಗೆ ಹೋಗೋಣ ಎಂದು ನನ್ನ ಸ್ನೇಹಿತ ಹೇಳಿದಾಗ ನಾನು ಹೊರಗೆ ಬಂದೆ. ಆಕೆ ಕ್ಯಾಬ್‌ನಲ್ಲಿ ತನ್ನ ಮನೆಗೆ ಹೋದಳು. ನನ್ನ ಜೊತೆ ಬಂದಿದ್ದ ನನ್ನ ಗೆಳೆಯನಿಗೆ ಫೋನ್ ಮಾಡಿ ಸ್ವಲ್ಪ ಹೊತ್ತಿನ ನಂತರ ಹೊರಗೆ ಹೋದೆ. ಆದರೆ, ಅವನು ಫೋನ್ ಪಿಕ್ ಮಾಡಲಿಲ್ಲ. ಹೀಗಾಗಿ ನಾನು ಮತ್ತೆ ಪಬ್ಗೆ ಹೋದೆ. ಆದರೆ ಟ್ಯಾಗ್ ಇರದ ಕಾರಣ ಪಬ್ ಭದ್ರತೆ ಪಡೆ ನನ್ನನ್ನು ಒಳಗೆ ಬಿಡಲಿಲ್ಲ ಎಂದು ಸಂತ್ರಸ್ತೆ ಅಧಿಕಾರಿಗೆ ತಿಳಿಸಿದ್ದಾರೆ.
ಪೊಲೀಸರ ವಿಚಾರಣೆ ಪ್ರಕಾರ: ಬಾಲಕಿ ಪಬ್ ಹೊರಗೆ ತನ್ನ ಗೆಳೆಯನಿಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಅಲ್ಲಿದ್ದ ಆರೋಪಿಗಳು ಆಕೆಗೆ ಕ್ಯಾಬ್ ಬುಕ್ ಮಾಡುವುದಾಗಿ ಹೇಳಿ ಮೊಬೈಲ್ ಕಿತ್ತುಕೊಂಡಿದ್ದಾರೆ. ನಂತರ ಅವರು ಸರಿಯಾದ ನೆಟ್‌ವರ್ಕ್ ಇಲ್ಲ ಎಂದು ಹೇಳಿದ್ದಾರೆ. ಬಳಿಕ ಆರೋಪಿಗಳು ನಿನ್ನ ಮನೆಗೆ ಡ್ರಾಪ್ ಮಾಡುವುದಾಗಿ ಹೇಳಿ ಬಾಲಕಿಗೆ ಹೇಳಿದ್ದಾರೆ. ಆಕೆ ಆರೋಪಿಯೊಂದಿಗೆ ಬೆಂಜ್ ಕಾರು ಹತ್ತಿದ್ದಾಳೆ.
ಓದಿ:ಮತ್ತೊಂದು ದಾರುಣ... ಬರ್ತ್ ಡೇ ಪಾರ್ಟಿ ಬಳಿಕ ಅಪ್ತಾಪ್ತೆ ಮೇಲೆ ರೇಪ್
ಬಂಜಾರ ಹಿಲ್ಸ್ಗೆ ಹೋಗುತ್ತಿದ್ದಾಗ ಆರೋಪಿಗಳು ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಕಾನ್ಸು ಬೇಕರಿಗೆ ಹೋದ ನಂತರ ಅವರು ಅವಳಿಗೆ ಕಾರು ಸರಿಯಿಲ್ಲ ಎಂದು ಹೇಳಿದ್ದಾರೆ. ಬೇರೆ ಕಾರಿನಲ್ಲಿ ನಿನಗೆ ಡ್ರಾಪ್ ನೀಡುತ್ತೇವೆ ಎಂದು ಹೇಳಿದ್ದಾರೆ. ಈ ವೇಳೆ, ಬಾಲಕಿ ನಿರಾಕರಿಸಿದ್ದಾಳೆ. ಆದರೆ, ಆರೋಪಿಗಳು ಬ್ಯಾಗ್, ಕನ್ನಡಕ ಮತ್ತು ಮೊಬೈಲ್ ಬೇಕಾದರೆ ಈ ಕಾರು ಹತ್ತುವಂತೆ ಹೇಳಿದ್ದಾರೆ. ಬಳಿಕ ಆರೋಪಿಗಳು ಆಕೆಯನ್ನು ಬೆದರಿಸಿ ಮತ್ತೊಂದು ಕಾರಿನಲ್ಲಿ ಕರೆದೊಯ್ದಿದ್ದಾರೆ.
ಬೆಂಜ್ ಕಾರಿನಿಂದ ಇನ್ನೋವಾ ಕಾರಿಗೆ ಬದಲಾಯಿಸಲು 15 ನಿಮಿಷಗಳ ಅಂತರವಿತ್ತು. ನೀವು ಯಾರೊಬ್ಬರ ಸಹಾಯವನ್ನು ಕೇಳಬಹುದು ಅಥವಾ ಈ ಮಧ್ಯೆ ನೀವು ಪೊಲೀಸರಿಗೆ ಕರೆ ಮಾಡಬಹುದಾಗಿತ್ತು. ಆದರೆ, ನೀವು ಆ ರೀತಿ ಮಾಡಲಿಲ್ಲ ಏಕೆ ಎಂದು ಅಧಿಕಾರಿ ಬಾಲಕಿಗೆ ಪ್ರಶ್ನಿಸಿದ್ದಾರೆ. ನನಗೆ ಆ ಸ್ಥಳ ಅಪರಿಚಿತವಾಗಿತ್ತು. ಅದು ನನ್ನ ವಸ್ತುಗಳೆಲ್ಲವೂ ಅವರ ಬಳಿ ಇದ್ದವು ಎಂದು ಸಂತ್ರಸ್ತೆ ಅಧಿಕಾರಿಗೆ ತಿಳಿಸಿದರು.
ಸಿಕ್ಕಿಬಿದ್ದ ಆರೋಪಿಗಳಲ್ಲಿ ಅಪ್ರಾಪ್ತ ವಯಸ್ಕರಲ್ಲಿ ಒಬ್ಬ (16) ಬೆಂಜ್ ಕಾರನ್ನು ಪಬ್‌ನಿಂದ ಬಂಜಾರಾ ಹಿಲ್ಸ್‌ನಲ್ಲಿರುವ ಕಾನ್ಸು ಬೇಕರಿಯತ್ತ ತೆರಳಿದ್ದಾರೆ. ಕಾರು ಚಲಾಯಿಸಿದ್ದಕ್ಕಾಗಿ ಮತ್ತು ಅಪ್ರಾಪ್ತ ವಯಸ್ಕನಿಗೆ ಕುಟುಂಬಸ್ಥರು ಕಾರು ನೀಡಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾರು ಅಪ್ರಾಪ್ತರ ತಾಯಿಯ ಹೆಸರಿನಲ್ಲಿದೆ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ.
ಬೇಕರಿಯಿಂದ ಹೊರಡುವಾಗ ಸಾರ್ವಜನಿಕ ವಲಯದ ಸಂಸ್ಥೆಯೊಂದರ ಅಧ್ಯಕ್ಷರ ಪುತ್ರ ಇನ್ನೋವಾ ಕಾರು ಚಲಾಯಿಸಿಕೊಂಡು ಬಂದಿರುವ ಶಂಕೆ ವ್ಯಕ್ತವಾಗಿದೆ. ಇನ್ನೋವಾದಲ್ಲಿ 2019 ರಲ್ಲಿ ಸನತ್ ನಗರದ ಮಹಿಳೆಯ ಹೆಸರಿನಲ್ಲಿ ಖರೀದಿಸಲಾಗಿದೆ. ಇನ್ನೋವಾ ಕಾರು ಮೂರು ವರ್ಷಗಳಿಂದ ತಾತ್ಕಾಲಿಕ (ಟಿಆರ್) ಸಂಖ್ಯೆಯನ್ನು ಹೊಂದಿದೆ. ಸಾರ್ವಜನಿಕ ವಲಯದ ಸಂಸ್ಥೆಯ ಅಧ್ಯಕ್ಷರು ಅಧ್ಯಕ್ಷರಾಗುವ ಮೊದಲು ಈ ಕಾರನ್ನು ಬಳಸುತ್ತಿದ್ದರು ಎಂದು ತೋರುತ್ತದೆ. ನಂತರ ಕಾರನ್ನು 'ಸರ್ಕಾರಿ ವಾಹನ' ಎಂಬ ಸ್ಟಿಕ್ಕರ್‌ನೊಂದಿಗೆ ಬಳಸಲಾಗುತ್ತಿತ್ತು ಎಂದು ವರದಿಯಾಗಿದೆ.