ದೇಶವೊಂದರ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕವು ಆ ದೇಶದ ಸರ್ಕಾರವು 12 ಕ್ಷೇತ್ರಗಳಲ್ಲಿ ಸಾಧಿಸಿದ ಪ್ರಗತಿಯ ಬಿಂಬವಾಗಿದ್ದು, ಇದು ದೇಶದ ಆರ್ಥಿಕ ಅಭಿವೃದ್ಧಿ ಮತ್ತು ಸಮೃದ್ಧತೆಯ ಮೇಲೆ ಅಗಾಧ ಪರಿಣಾಮ ಬೀರುವಂಥದ್ದಾಗಿರುತ್ತದೆ.
ವ್ಯಕ್ತಿಯ ತಲಾ ಆದಾಯದ ಮೇಲೆ ನಿರ್ಧರಿತವಾಗುವ ಜೀವನ ಮಟ್ಟದ ಪ್ರಮಾಣವು ಆರ್ಥಿಕ ಸ್ವಾತಂತ್ರ್ಯವಿರುವ ದೇಶಗಳಲ್ಲಿ ಗಮನಾರ್ಹವಾಗಿ ಹೆಚ್ಚಾಗಿರುತ್ತದೆ.
ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕದ ಪ್ರಕಾರ "ಸ್ವತಂತ್ರ" ಅಥವಾ "ಬಹುತೇಕ ಸ್ವತಂತ್ರ" ಎಂದು 2021ರಲ್ಲಿ ಗುರುತಿಸಲ್ಪಟ್ಟ ದೇಶಗಳ ಒಟ್ಟು ಆದಾಯವು ಇತರ ದೇಶಗಳಿಗಿಂತ ದುಪ್ಪಟ್ಟಾಗಿರುತ್ತದೆ ಹಾಗೂ ಅತಿ ಹಿಂದುಳಿದ ದೇಶಗಳಿಗಿಂತ 6 ಪಟ್ಟು ಹೆಚ್ಚಾಗಿರುತ್ತದೆ.
2021ನೇ ಸಾಲಿನಲ್ಲಿ ವಿಶ್ವದ 178 ದೇಶಗಳ ಪೈಕಿ 89 ದೇಶಗಳ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ ಏರಿಕೆಯಾಗಿದೆ. ಇನ್ನುಳಿದ ಪೈಕಿ 80 ದೇಶಗಳ ಸೂಚ್ಯಂಕ ಕುಸಿದಿದ್ದು, 9 ದೇಶಗಳ ಸೂಚ್ಯಂಕ ಸ್ಥಿರವಾಗಿದೆ.
ವಿಶ್ವದ 5 ದೇಶಗಳಾದ ಸಿಂಗಾಪುರ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಸ್ವಿಟ್ಜರಲೆಂಡ್ ಮತ್ತು ಐರ್ಲೆಂಡ್ಗಳು 80 ಅಥವಾ ಅದಕ್ಕೂ ಹೆಚ್ಚು ಆರ್ಥಿಕ ಸೂಚ್ಯಂಕದ ಅಂಕಗಳನ್ನು ಪಡೆದು, ವಿಶ್ವದ ಅತಿ ಹೆಚ್ಚು ಆರ್ಥಿಕ ಸ್ವಾತಂತ್ರ್ಯದ ದೇಶಗಳಾಗಿ ಹೊರಹೊಮ್ಮಿವೆ.
ಇನ್ನು 70 ರಿಂದ 79.9 ಅಂಕಗಳನ್ನು ಗಳಿಸಿರುವ 33 ದೇಶಗಳು "ಬಹುತೇಕ ಸ್ವಾತಂತ್ರ್ಯ" ದ ಪಟ್ಟಿಯಲ್ಲಿವೆ. ಹಾಗೆಯೇ 59 ದೇಶಗಳು 60 ರಿಂದ 69.9 ಅಂಕಗಳನ್ನು ಪಡೆದು "ಮಧ್ಯಮ ಮಟ್ಟದ ಸ್ವತಂತ್ರ" ದೇಶಗಳಾಗಿ ಗುರುತಿಸಿಕೊಂಡಿವೆ.
2021ರ ಸೂಚ್ಯಂಕದಲ್ಲಿ ಮಾಪನ ಮಾಡಲಾದ ಒಟ್ಟಾರೆ 97 ದೇಶಗಳು ಅಥವಾ ಎಲ್ಲ ದೇಶಗಳ ಪೈಕಿ ಶೇ 54 ರಷ್ಟು ದೇಶಗಳು ಮತ್ತು ಪ್ರಾಂತಗಳು ಸಾಂಸ್ಥಿಕ ವಾತಾವರಣ ಹೊಂದಿದ್ದು, ಖಾಸಗಿ ವ್ಯವಹಾರಸ್ಥರು ಹಾಗೂ ವ್ಯಕ್ತಿಗಳಿಗೆ ಕನಿಷ್ಠ ಮಧ್ಯಮ ಮಟ್ಟದ ಆರ್ಥಿಕಾಭಿವೃದ್ಧಿ ಮತ್ತು ಸಮೃದ್ಧತೆಯ ಬೆಳವಣಿಗೆಗೆ ಪೂರಕವಾಗಿವೆ.
ಆರ್ಥಿಕ ಸ್ವಾತಂತ್ರ್ಯದ ಟಾಪ್-5 ದೇಶಗಳು: ಸಿಂಗಾಪುರ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಸ್ವಿಟ್ಜರಲೆಂಡ್ ಮತ್ತು ಐರ್ಲೆಂಡ್
ಪ್ರಾದೇಶಿಕ ಮಟ್ಟದಲ್ಲಿ ಮುಂಚೂಣಿಯ ಆರ್ಥಿಕ ಸ್ವಾತಂತ್ರ್ಯದ ರಾಷ್ಟ್ರಗಳು
ವಲಯ | ರಾಷ್ಟ್ರ |
ಏಷ್ಯಾ ಪೆಸಿಫಿಕ್ | ಸಿಂಗಾಪುರ |
ಮಧ್ಯ ಪ್ರಾಚ್ಯ/ ಉತ್ತರ ಆಫ್ರಿಕಾ | ಯುನೈಟೆಡ್ ಅರಬ್ ಎಮಿರೇಟ್ಸ್ |
ಉಪ-ಸಹಾರಾ ಆಫ್ರಿಕಾ | ಮಾರಿಷಸ್ |
ಯುರೋಪ್ | ಸ್ವಿಟ್ಜರಲೆಂಡ್ |
ಅಮೆರಿಕಾಸ್ | ಕೆನಡಾ |
ಪ್ರತಿ ಆರ್ಥಿಕ ಸ್ವಾತಂತ್ರ್ಯ ವಲಯದಲ್ಲಿ ಸ್ಥಾನ ಪಡೆದ ದೇಶಗಳು
ದೇಶಗಳ ಸಂಖ್ಯೆ | |
ಸ್ವತಂತ್ರ | 5 |
ಬಹುತೇಕ ಸ್ವತಂತ್ರ | 33 |
ಮಧ್ಯಮ ಸ್ವತಂತ್ರ | 59 |
ಕಡಿಮೆ ಸ್ವತಂತ್ರ | 63 |
ಅತಿ ಕಡಿಮೆ ಸ್ವತಂತ್ರ | 18 |
ತಲಾ ಆದಾಯ ಜಿಡಿಪಿಯ ಸರಾಸರಿ ವಾರ್ಷಿಕ ಆರ್ಥಿಕ ಬೆಳವಣಿಗೆ
ಕಳೆದ 25 ವರ್ಷಗಳಲ್ಲಿ | ಕಳೆದ 15 ವರ್ಷಗಳಲ್ಲಿ | ಕಳೆದ 5 ವರ್ಷಗಳಲ್ಲಿ | |
ಆರ್ಥಿಕ ಸ್ವಾತಂತ್ರ್ಯ ಹೆಚ್ಚಿಸಿಕೊಳ್ಳುತ್ತಿರುವ ದೇಶಗಳು | 2.6% | 2.6% | 1.9% |
ಆರ್ಥಿಕ ಸ್ವಾತಂತ್ರ್ಯ ಕಡಿಮೆಯಾಗುತ್ತಿರುವ ದೇಶಗಳು | 1.7% | 1.5% | 1.5% |
ಆರ್ಥಿಕ ಸ್ವಾತಂತ್ರ್ಯದ ವಿಭಾಗವಾರು ತಲಾ ಆದಾಯದ ಸರಾಸರಿ ಜಿಡಿಪಿ
ವಿಭಾಗ | ತಲಾ ಆದಾಯದ ಸರಾಸರಿ ಜಿಡಿಪಿ (PPP) |
ಸ್ವತಂತ್ರ | $ 71,756 |
ಬಹುತೇಕ ಸ್ವತಂತ್ರ | $47,706 |
ಮಧ್ಯಮ ಸ್ವತಂತ್ರ | $22,005 |
ಕಡಿಮೆ ಸ್ವತಂತ್ರ | $6,834 |
ಅತಿ ಕಡಿಮೆ ಸ್ವತಂತ್ರ | $7,163 |