ನವದೆಹಲಿ:ಮಹೀಂದ್ರಾ ಗ್ರೂಪ್ನ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಅವರು ಆಗಾಗ್ಗೆ ಸ್ಫೂರ್ತಿದಾಯಕ ವಿಡಿಯೋಗಳನ್ನು ಟ್ವೀಟ್ ಮಾಡುತ್ತಿರುತ್ತಾರೆ. ಇದೇ ರೀತಿಯ ವಿಡಿಯೋವೊಂದನ್ನು ಅವರು ಸೋಮವಾರ ಟ್ವೀಟ್ ಮಾಡಿದ್ದರು.
ಈ ವಿಡಿಯೋದಲ್ಲಿ ಬಾತುಕೋಳಿಯು ಕೆಲವು ಹಸುಗಳನ್ನು ಹೆದರಿಸಲು ಪ್ರಯತ್ನಿಸುತ್ತಿರುವುದನ್ನು ನಾವು ಕಾಣಬಹುದಾಗಿದೆ. ಹೊಲದಲ್ಲಿ ಏಕಾಂಗಿಯಾಗಿರುವ ಬಾತುಕೋಳಿಯನ್ನು ಹಸುಗಳು ಸುತ್ತುವರೆದಿದ್ದು, ಅವು ಅದನ್ನು ಬೆದರಿಸುತ್ತಿವೆ. ಆದ್ರೆ ಅದು ಹಸುಗಳಿಗೆ ಹೆದರದೇ ಅವುಗಳನ್ನೇ ಹೆದರಿಸಲು ಮುಂದಾಗುತ್ತದೆ.