ನವದೆಹಲಿ:ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಶುರುವಾಗಿದೆ. ಇದರ ನಡುವೆ, ಕಾಂಗ್ರೆಸ್ ಹಿರಿಯ ಸಂಸದ ಶಶಿ ತರೂರ್ ಅವರು ಮಹಿಳಾ ಸಂಸದರ ಜೊತೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಟೀಕೆಗೊಳಗಾಗಿದ್ದಾರೆ.
ಮಹಿಳಾ ಸಂಸದರಾದ ಸುಪ್ರಿಯಾ ಸುಳೆ, ಪ್ರಣೀತ್ ಕೌರ್, ತಮಿಳ್ಸಾಚಿ, ಮಿಮಿ ಚಕ್ರವರ್ತಿ, ನುಸ್ರತ್ ಜಹಾನ್, ಜ್ಯೋತಿ ಮಣಿ ಜೊತೆ ಸೆಲ್ಫಿ ತೆಗೆದುಕೊಂಡಿದ್ದ ಶಶಿ ತರೂರ್, ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದರು. ಜೊತೆಗೆ, 'ಕೆಲಸ ಮಾಡುವ ಜಾಗ ಸಂಸತ್ತು ಆಕರ್ಷಕವಲ್ಲ ಎಂದು ಹೇಳಿದವರು ಯಾರು?' ಎಂಬ ಶೀರ್ಷಿಕೆಯನ್ನು ನೀಡಿದ್ದರು. ಹೀಗಾಗಿ, ನೆಟ್ಟಿಗರು ಸೇರಿದಂತೆ ಹಲವರಿಂದ ಆಕ್ರೋಶ ವ್ಯಕ್ತವಾಗಿತ್ತು.