ಕರ್ನಾಟಕ

karnataka

ETV Bharat / bharat

ಥಾಣೆ ಪೊಲೀಸ್ ವೆಬ್‌ಸೈಟ್ ಹ್ಯಾಕ್: ಭಾರತ ಸರ್ಕಾರದಿಂದ ಕ್ಷಮೆಯಾಚಿಸುವಂತೆ ಆಗ್ರಹ - ಥಾಣೆ ಪೊಲೀಸ್ ವೆಬ್ ಸೈಟ್ ಹ್ಯಾಕ್

ಥಾಣೆ ಸಿಟಿ ಕಮಿಷನರೇಟ್‌ನ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Thane police web site hacked
ಥಾಣೆ ಸಿಟಿ ಕಮಿಷನರೇಟ್‌ನ ವೆಬ್‌ಸೈಟ್ ಹ್ಯಾಕ್

By

Published : Jun 14, 2022, 1:43 PM IST

ಥಾಣೆ(ಮಹಾರಾಷ್ಟ್ರ): ಇಂದು ಬೆಳಗ್ಗೆ ಥಾಣೆ ಪೊಲೀಸ್ ಕಮಿಷನರೇಟ್​​ ಪೊಲೀಸ್ ವೆಬ್ ಸೈಟ್ ಹ್ಯಾಕ್ ಆಗಿದೆ. ವೆಬ್‌ಸೈಟ್ ಹ್ಯಾಕ್ ಮಾಡಿದ ಬಳಿಕ, ಹ್ಯಾಕರ್‌ಗಳು ಭಾರತ ಸರ್ಕಾರದಿಂದ ಕ್ಷಮೆಯಾಚಿಸಲು ಆಗ್ರಹಿಸಿದ್ದಾರೆ. ವೆಬ್‌ಸೈಟ್ ಹ್ಯಾಕ್ ಆಗಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ

'ನೀವು ಇಸ್ಲಾಂ ಧರ್ಮದ ಬಗ್ಗೆ ಪದೇ ಪದೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದೀರಿ. ನಿಮಗೆ ಸಹಿಷ್ಣುತೆ ತಿಳಿದಿಲ್ಲ. ಶೀಘ್ರದಲ್ಲೇ ಕ್ಷಮೆಯಾಚಿಸಿ. ನಮ್ಮ ಧರ್ಮ ಪ್ರಚಾರಕರನ್ನು ಅವಮಾನಿಸಿದಾಗ ನಾವು ಸುಮ್ಮನಿರುವುದಿಲ್ಲ' ಎಂದು ಹ್ಯಾಕರ್ಸ್​ಗಳು ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮಹಮ್ಮದ್ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ನಂತರ ದೇಶದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಈ ನಡುವೆ ವೆಬ್‌ಸೈಟ್ ಹ್ಯಾಕಿಂಗ್ ಪ್ರಮಾಣ ಗಣನೀಯವಾಗಿ ಹೆಚ್ಚಿದೆ.

ಇದನ್ನೂ ಓದಿ:ನೂಪುರ್ ಶರ್ಮಾ ಬೆಂಬಲಿಸಿ ಕ್ಯಾಂಡಲ್ ಮಾರ್ಚ್: ಹೈದರಾಬಾದಿನಲ್ಲಿ ಉದ್ವಿಗ್ನ ಪರಿಸ್ಥಿತಿ

ABOUT THE AUTHOR

...view details