ಕರ್ನಾಟಕ

karnataka

ETV Bharat / bharat

ಬಾಲಪರಾಧಿಗಳನ್ನು ವಯಸ್ಕರರಂತೆ ಪರಿಗಣಿಸುವಂತೆ  ಕೋರ್ಟ್​​ಗೆ ಮನವಿ ಸಲ್ಲಿಸಲು ಪೊಲೀಸರ ಚಿಂತನೆ - ಬಾಲ ನ್ಯಾಯ ಮಂಡಳಿ

ಜುಬಿಲಿ ಹಿಲ್ಸ್ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಬಾಲಾಪರಾಧಿಗಳನ್ನು ವಯಸ್ಕರರಂತೆ ಪರಿಗಣಿಸಬೇಕೆಂದು ಬಾಲ ನ್ಯಾಯ ಮಂಡಳಿಗೆ ಪೊಲೀಸರು ಮನವಿ ಮಾಡಬೇಕು ಎಂಬ ಚಿಂತನೆ ನಡೆಸಿದ್ದಾರೆ.

Telangana gangrape case, Cops to appeal to JJB to try juveniles as adults, Juvenile Justice Board, jubilee hills rape case, ತೆಲಂಗಾಣ ಸಾಮೂಹಿಕ ಅತ್ಯಾಚಾರ ಪ್ರಕರಣ, ಬಾಲಾಪರಾಧಿಗಳನ್ನು ವಯಸ್ಕರಂತೆ ಶಿಕ್ಷೆಗೊಳಪಡಿಸುವಂತೆ ಪೊಲೀಸರಿಂದ ಮನವಿ, ಬಾಲ ನ್ಯಾಯ ಮಂಡಳಿ, ಜುಬಿಲಿ ಹಿಲ್ಸ್ ಅತ್ಯಾಚಾರ ಪ್ರಕರಣ,
ಬಾಲಾಪರಾಧಿಗಳನ್ನು ವಯಸ್ಕರಂತೆ ಶಿಕ್ಷೆಗೊಳಪಡಿಸುವಂತೆ ಪೊಲೀಸರಿಂದ ಮನವಿ

By

Published : Jun 10, 2022, 11:13 AM IST

ಹೈದರಾಬಾದ್: ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಐವರು ಬಾಲಾಪರಾಧಿಗಳನ್ನು ವಯಸ್ಕರಂತೆ ಪರಿಗಣಿಸಬೇಕಾಗಿದೆ ಎಂದು ತೆಲಂಗಾಣ ಪೊಲೀಸರು ಬಾಲಾಪರಾಧ ನ್ಯಾಯ ಮಂಡಳಿಗೆ ಅರ್ಜಿ ಸಲ್ಲಿಸಲು ಚಿಂತಿಸುತ್ತಿದ್ದಾರೆ.

ಮೇ 28 ರಂದು 17 ವರ್ಷದ ಬಾಲಕಿಯ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಐವರು ಬಾಲಾಪರಾಧಿಗಳು ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ. ಒಬ್ಬ ಬಾಲಾಪರಾಧಿ ಸಂತ್ರಸ್ತೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಆದರೆ ಅಪರಾಧದಲ್ಲಿ ಭಾಗಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಹೈದರಾಬಾದ್ ಪೊಲೀಸ್ ಕಮಿಷನರ್ ಸಿ ವಿ ಆನಂದ್ ಮಾತನಾಡಿ, ಅವರು ಗರಿಷ್ಠ ಶಿಕ್ಷೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಐವರನ್ನು ವಯಸ್ಕರಂತೆ ಪರಿಗಣಿಸಲು ಮಂಡಳಿಯ ಮುಂದೆ ಮನವಿ ಸಲ್ಲಿಸಲು ಪರಿಗಣಿಸುತ್ತಿದ್ದೇವೆ. ಘೋರ ಅಪರಾಧದಲ್ಲಿ ಭಾಗಿಯಾದವರ ವಿರುದ್ಧ ಕಾನೂನಿನ ಕಠಿಣ ಸೆಕ್ಷನ್‌ಗಳನ್ನು ಅನ್ವಯಿಸಲಾಗಿದೆ ಮತ್ತು ಸೆಕ್ಷನ್‌ಗಳ ಅಡಿ ಸಾವನ್ನಪ್ಪುವರೆಗೂ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆಯಾಗಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ.

ಓದಿ:ಜುಬಿಲಿ ಹಿಲ್ಸ್‌ ಅತ್ಯಾಚಾರ ಪ್ರಕರಣ: ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ಪೊಲೀಸರು!

ಪ್ರಕರಣವು ಈಗ ತನಿಖೆಯಲ್ಲಿದೆ ಮತ್ತು ಚಾರ್ಜ್‌ಶೀಟ್ ಸಲ್ಲಿಸಿದ ನಂತರ ಐದು ಬಾಲಾಪರಾಧಿಗಳು ವಯಸ್ಕರಂತೆ ವಿಚಾರಣೆಗೆ ಒಳಪಡಿಸುವಂತೆ ಶಿಫಾರಸು ಮಾಡಲು ಬಾಲ ನ್ಯಾಯ ಮಂಡಳಿಗೆ (ಜೆಜೆಬಿ) ವಿನಂತಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇಲ್ಲದಿದ್ದರೆ ಅವರು ಬಾಲಾಪರಾಧಿಗಳಾಗಿ ಕೇವಲ 3 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಾರೆ ಎಂದರು.

ಟ್ವೀಟ್‌ನಲ್ಲಿ, ಟಿಆರ್‌ಎಸ್ ಕಾರ್ಯಾಧ್ಯಕ್ಷ ಕೆ ಟಿ ರಾಮರಾವ್, ನಾನು ತೆಲಂಗಾಣ ಸಿಒಪಿಗಳ ನಿಲುವನ್ನು ಸ್ವಾಗತಿಸುತ್ತೇನೆ ಮತ್ತು ಬೆಂಬಲಿಸುತ್ತೇನೆ. ಅವರು ಅತ್ಯಾಚಾರದಂತಹ ಘೋರ ಅಪರಾಧವನ್ನು ಮಾಡುವಷ್ಟು ವಯಸ್ಕರಾಗಿದ್ದರೆ ಬಾಲಾಪರಾಧಿಯಾಗಿ ಅಲ್ಲ ವಯಸ್ಕರಂತೆ ಎಲ್ಲರೂ ಶಿಕ್ಷಿಸಬೇಕು ಎಂದು ಟ್ವೀಟ್​ ಮಾಡಿದ್ದಾರೆ.

ಪಾರ್ಟಿಗಾಗಿ ಮೇ 28 ರಂದು ಇಲ್ಲಿನ ಪಬ್‌ಗೆ ಭೇಟಿ ನೀಡಿದ್ದ ಹದಿಹರೆಯದ ಹುಡುಗಿಯ ಮೇಲೆ ನಾಲ್ವರು ಅಪ್ರಾಪ್ತ ವಯಸ್ಕರು ಸೇರಿದಂತೆ ಐವರು ಅತ್ಯಾಚಾರ ಎಸೆಗಿದ್ದಾರೆ ಎಂದು ಪೊಲೀಸರು ಈ ಹಿಂದೆ ತಿಳಿಸಿದ್ದರು.

ABOUT THE AUTHOR

...view details