ಬಾಪಟ್ಲಾ(ಆಂಧ್ರಪ್ರದೇಶ):ತುರ್ತು ಸಂದರ್ಭಗಳಲ್ಲಿ ವಿಮಾನಗಳನ್ನು ಇಳಿಸಬೇಕಾದರೆ, ನಿಲ್ದಾಣಗಳನ್ನೇ ಹುಡುಕಿಕೊಂಡು ಹೋಗಬೇಕು. ಕೆಲವೊಮ್ಮೆ ಅನಾಹುತ ತಪ್ಪಿಸಲು ಎಲ್ಲೆಂದರಲ್ಲಿ ವಿಮಾನಗಳನ್ನು ಲ್ಯಾಂಡ್ ಮಾಡಿ ತೊಂದರೆಗೀಡಾಗಿ, ಅವಘಢಗಳು ಸಂಭವಿಸಿದ ಘಟನೆಗಳೂ ನಡೆದಿವೆ. ಇದನ್ನು ತಪ್ಪಿಸಲು ಕೇಂದ್ರ ಸರ್ಕಾರ ಗತಿ ಶಕ್ತಿ ಮಿಷನ್ ಅಡಿಯಲ್ಲಿ ಹೆದ್ದಾರಿಗಳ ಮೇಲೆ ತುರ್ತು ರನ್‌ವೇ ನಿರ್ಮಿಸುತ್ತಿದೆ. ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯಲ್ಲಿ ಹೆದ್ದಾರಿ ಮೇಲೆ ನಿರ್ಮಿಸಿರುವ ರನ್‌ವೇಯನ್ನು ಪರೀಕ್ಷೆ ನಡೆಸಲಾಗಿದೆ
ರಾಜ್ಯದಲ್ಲಿ ಎರಡು ಕಡೆ ತುರ್ತು ರನ್‌ವೇ ನಿರ್ಮಿಸಲಾಗಿದೆ. ಅದರಲ್ಲಿ ಬಾಪಟ್ಲಾ ಜಿಲ್ಲೆಯ ಕೋರಿಶಪದವಿನಿಂದ ರೇಣಿಂಗವರಂವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 5 ಕಿ.ಮೀ ಉದ್ದದ ತುರ್ತು ರನ್‌ವೇ ಕಾಮಗಾರಿ ಪೂರ್ಣಗೊಂಡಿದೆ. ಸಿಮೆಂಟ್ನಿಂದ ಈ ರಸ್ತೆಯನ್ನು ನಿರ್ಮಿಸಲಾಗಿದೆ. ವಿವಿಧ ಹಂತಗಳಲ್ಲಿ ರನ್‌ವೇಯನ್ನು ಪರಿಶೀಲಿಸಿದ ನಂತರವೇ ಲ್ಯಾಂಡಿಂಗ್‌ಗೆ ಅವಕಾಶ ನೀಡಲಾಗುತ್ತದೆ. ಇದನ್ನು ಮುಂದಿನ ವರ್ಷ ಪ್ರಧಾನಿ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ.