ಕರ್ನಾಟಕ

karnataka

By

Published : Apr 19, 2022, 10:24 PM IST

Updated : Apr 19, 2022, 10:44 PM IST

ETV Bharat / bharat

ಪೊಲೀಸ್​ ಠಾಣೆ ಮೇಲೆ ಗ್ರೆನೇಡ್ ಎಸೆತ: ಹಲವು ಸುತ್ತು ಗುಂಡು ಹಾರಿಸಿದ ಉಗ್ರರು

ಕಣಿವೆ ನಾಡಿನಲ್ಲಿ ಉಗ್ರರು ಮತ್ತೊಮ್ಮೆ ಬಾಲ ಬಿಚ್ಚಿದ್ದು, ಪೊಲೀಸ್ ಠಾಣೆ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದು, ಅನೇಕ ಸುತ್ತು ಗುಂಡು ಹಾರಿಸಿದ್ದಾರೆ.

Terrorists lobbed grenade
Terrorists lobbed grenade

ಬುದ್ಗಾಮ್​(ಜಮ್ಮು-ಕಾಶ್ಮೀರ):ನಿನ್ನೆಯಷ್ಟೇ ಪುಲ್ವಾಮಾದ ಕಾಕಪೋರಾ ರೈಲ್ವೆ ನಿಲ್ದಾಣದಲ್ಲಿ ಉಗ್ರರು ಕರ್ತವ್ಯನಿರತ ಆರ್​ಪಿಎಫ್​ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ, ಓರ್ವನ ಹತ್ಯೆಗೆ ಕಾರಣವಾಗಿದ್ದರು. ಇದರ ಬೆನ್ನಲ್ಲೇ ಇದೀಗ ಬುದ್ಗಾಮ್​ನಲ್ಲಿರುವ ಪೊಲೀಸ್ ಠಾಣೆ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದಾರೆ.

ಇಂದು ಸಂಜೆ ಬುದ್ಗಾಮ್​ನ ಪೊಲೀಸ್ ಠಾಣೆಯ ಮೇಲೆ ಗ್ರೆನೇಡ್ ದಾಳಿ ನಡೆಸಲಾಗಿದ್ದು, ಪೊಲೀಸ್ ಠಾಣೆ ಮೇಲೆ ಅನೇಕ ಸುತ್ತು ಗುಂಡು ಹಾರಿಸಿದ್ದಾರೆ. ಇದರ ಬೆನ್ನಲ್ಲೇ ಉಗ್ರರು ಸ್ಥಳದಿಂದ ಪರಾರಿಯಾಗಿದ್ದಾರೆ. ಉಗ್ರರ ಹಿಡಿಯಲು ಭದ್ರತಾ ಪಡೆಗಳು ಈಗಾಗಲೇ ಪ್ರದೇಶದಲ್ಲಿ ಶೋಧಕಾರ್ಯ ಆರಂಭಿಸಿದೆ. ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.

Last Updated : Apr 19, 2022, 10:44 PM IST

ABOUT THE AUTHOR

...view details