ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):ಪೊಲೀಸ್ ಕಾನ್ಸ್ಟೇಬಲ್ ನಿವಾಸದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿರುವ ಘಟನೆ ಪುಲ್ವಾಮಾದ ಗಡೂರ ಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ರಿಯಾಜ್ ಅಹ್ಮದ್ ಥೋಕರ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪುಲ್ವಾಮಾದಲ್ಲಿ ಉಗ್ರರರಿಂದ ಗುಂಡಿನ ದಾಳಿ: ಪೊಲೀಸ್ ಕಾನ್ಸ್ಟೇಬಲ್ ಹುತಾತ್ಮ - ಉಗ್ರರಿಂದ ಗುಂಡಿನ ದಾಳಿ
ಉಗ್ರರ ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ಪೊಲೀಸ್ ಕಾನ್ಸ್ಟೇಬಲ್ ರಿಯಾಜ್ ಅಹ್ಮದ್ ಥೋಕರ್ ಮೃತಪಟ್ಟಿದ್ದಾರೆ.
ಸಾಂದರ್ಭಿಕ ಚಿತ್ರ
'ಕಾನ್ಸ್ಟೇಬಲ್ ರಿಯಾಜ್ ಅಹ್ಮದ್ ಥೋಕರ್ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತ ಪಟ್ಟಿದ್ದಾರೆ' ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಕಪ್ಪು ಗಾಜಿನ ಕಾರೊಳಗೆ ಯುವತಿ ಮೇಲೆ ಗ್ಯಾಂಗ್‌ರೇಪ್; ಮಹಿಳಾ ಡಿಎಸ್ಪಿ ಕೈಗೆ ಸಿಕ್ಕಿಬಿದ್ದ ವಿದ್ಯಾವಂತರು!
Last Updated : May 13, 2022, 11:09 AM IST
TAGGED:
pulwama latest news