ಕರ್ನಾಟಕ

karnataka

ETV Bharat / bharat

2006 ರ ವಾರಣಾಸಿ ಬಾಂಬ್ ಸ್ಫೋಟ ಪ್ರಕರಣ.. ಉಗ್ರನಿಗೆ ಮರಣದಂಡನೆ ಶಿಕ್ಷೆ ಪ್ರಕಟ

2006 ರ ಮಾರ್ಚ್ 7 ರಂದು ಸಂಕಟ್ ಮೋಚನ್ ದೇವಸ್ಥಾನ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ನಡೆದ ಸ್ಫೋಟದಲ್ಲಿ 20 ಜನರು ಸಾವಿಗೀಡಾಗಿದ್ದರು ಮತ್ತು 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ತಪ್ಪಿತಸ್ಥ ಉಗ್ರನಿಗೆ ಮರಣ ದಂಡನೆ ಶಿಕ್ಷೆ ಪ್ರಕಟವಾಗಿದೆ.

2006 ರ ವಾರಣಾಸಿ ಬಾಂಬ್ ಸ್ಫೋಟದ ಭಯೋತ್ಪಾದಕನಿಗೆ ಮರಣದಂಡನೆ
2006 ರ ವಾರಣಾಸಿ ಬಾಂಬ್ ಸ್ಫೋಟದ ಭಯೋತ್ಪಾದಕನಿಗೆ ಮರಣದಂಡನೆ

By

Published : Jun 6, 2022, 5:34 PM IST

ನವದೆಹಲಿ: 2006 ರ ವಾರಣಾಸಿ ಬಾಂಬ್ ಸ್ಫೋಟದ ಭಯೋತ್ಪಾದಕ ಮತ್ತು ಮಾಸ್ಟರ್ ಮೈಂಡ್ ವಲಿಯುಲ್ಲಾ ಖಾನ್‌ಗೆ ಗಾಜಿಯಾಬಾದ್‌ನ ನ್ಯಾಯಾಲಯವು ಇಂದು ಮರಣದಂಡನೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

2006 ರಲ್ಲಿ ವಾರಣಾಸಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ವಲಿಯುಲ್ಲಾನನ್ನು ಶನಿವಾರ ತಪ್ಪಿತಸ್ಥ ಎಂದು ಘೋಷಿಸಲಾಯಿತು. 2006 ರ ಮಾರ್ಚ್ 7 ರಂದು ಸಂಕಟ್ ಮೋಚನ್ ದೇವಸ್ಥಾನ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ನಡೆದ ಸ್ಫೋಟದಲ್ಲಿ 20 ಜನರು ಸಾವಿಗೀಡಾಗಿದ್ದರು ಮತ್ತು 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಜಿತೇಂದ್ರ ಕುಮಾರ್ ಸಿನ್ಹಾ ಅವರು ವಲಿಯುಲ್ಲಾನನ್ನು ದೋಷಿ ಎಂದು ಘೋಷಿಸಿದ್ದಾರೆ ಎಂದು ಜಿಲ್ಲಾ ಸರ್ಕಾರಿ ವಕೀಲ ರಾಜೇಶ್ ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ: ಹೊಸಪೇಟೆಯಲ್ಲಿ ವೃದ್ಧೆಯ ಮಾಗಲ್ಯ ಸರ ಕಳ್ಳತನ.. ಸ್ಥಳೀಯರಿಂದಲೇ ಕೃತ್ಯ ಶಂಕೆ

ABOUT THE AUTHOR

...view details