ಕರ್ನಾಟಕ

karnataka

ETV Bharat / bharat

ಶೋಪಿಯಾನ್​ನಲ್ಲಿ ಹತರಾದ ಸ್ಥಳೀಯ ಉಗ್ರರಿಗೆ ಎಲ್‌ಇಟಿ ನಂಟು - ಕಾಶ್ಮೀರದ ಶೋಪಿಯಾನ್

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರು ಹತರಾಗಿದ್ದಾರೆ.

ಸೇನಾಧಿಕಾರಿಗಳು
ಸೇನಾಧಿಕಾರಿಗಳು

By

Published : Aug 31, 2022, 10:44 PM IST

ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.

ನಾಗಬಾಲ್ ಪ್ರದೇಶದ ಹುಷಾಂಗ್‌ಪೋರಾ ಗ್ರಾಮದಲ್ಲಿ ಭಯೋತ್ಪಾದಕರು ಅಡಗಿ ಕುಳಿತಿರುವ ಕುರಿತು ಶೋಪಿಯಾನ್ ಪೊಲೀಸರಿಗೆ ಮಾಹಿತಿ ಬಂದಿತ್ತು. ಸಿಆರ್‌ಪಿಎಫ್ ಹಾಗು ಪೊಲೀಸರು ಜಂಟಿಯಾಗಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಈ ವೇಳೆ ಶೋಧ ತಂಡದ ಮೇಲೆ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಭದ್ರತಾ ಸಿಬ್ಬಂದಿ ಮೂವರು ಉಗ್ರನ್ನು ಹೊಡೆದುರುಳಿಸಿದ್ದಾರೆ. ಈ ಪೈಕಿ ಡ್ಯಾನಿಶ್ ಭಟ್ ಎಂಬ ಉಗ್ರ ಹಲವು ಸರಣಿ ಹತ್ಯೆಗಳಲ್ಲಿ ಭಾಗಿಯಾಗಿದ್ದ. ಇನ್ನುಳಿದಂತೆ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾದ ಮೂವರು ಸ್ಥಳೀಯ ಭಯೋತ್ಪಾದಕರನ್ನು ಹೆಡೆಮುರಿ ಕಟ್ಟಲಾಗಿದೆ.

ಹತರಾದ ಭಯೋತ್ಪಾದಕರನ್ನು ಲಾಡಿ ಇಮಾಮ ಸಾಹಿಬ್‌ ನಿವಾಸಿ ಡ್ಯಾನಿಶ್ ಖುರ್ಷಿದ್ ಭಟ್, ಅಮರ್‌ಬಗ್‌ ನಿವಾಸಿ ತನ್ವೀರ್ ಅಹ್ಮದ್ ವಾನಿ ಮತ್ತು ಚೆರ್ಮಾರ್ಗ್‌ನ ನಿವಾಸಿ ತೌಸೀಫ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ. ಈ ಮೂವರು ಪೊಲೀಸರು, ಭದ್ರತಾ ಪಡೆಗಳ ಮೇಲಿನ ದಾಳಿ ಮತ್ತು ನಾಗರಿಕ ದೌರ್ಜನ್ಯ ಸೇರಿದಂತೆ ಹಲವು ಕ್ರೂರ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು ಪ್ರವಾಹ ಕುರಿತು ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಸಿಎಂ: ನಾಳೆ ಖುದ್ದು ಪರಿಶೀಲನೆ

ABOUT THE AUTHOR

...view details