ಬಾರಾಮುಲ್ಲಾ (ಜಮ್ಮು ಕಾಶ್ಮೀರ): ಭದ್ರತಾ ಪಡೆ ಜೊತೆಗಿನ ಗುಂಡಿನ ಕಾಳಗದಲ್ಲಿ ಉಗ್ರನೋರ್ವ ಹತನಾಗಿದ್ದಾನೆ. ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸಪೋರಾ ಬಳಿ ಈ ಘಟನೆ ನಡೆದಿದೆ.
ಭದ್ರತಾ ಪಡೆಯಿಂದ ಎನ್ಕೌಂಟರ್... ಮನೆಯಲ್ಲಿ ಅಡಗಿದ್ದ ಉಗ್ರ ಹತ - ಉಗ್ರನ ಹತ್ಯೆ
ಎನ್ಕೌಂಟರ್ನಲ್ಲಿ ಉಗ್ರನನ್ನು ಭದ್ರತಾ ಪಡೆ ಹೊಡೆದುರುಳಿಸಿದೆ ಎಂದು ಕಾಶ್ಮೀರ ವಲಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಎನ್ಕೌಂಟರ್
ಎನ್ಕೌಂಟರ್ನಲ್ಲಿ ಉಗ್ರನನ್ನು ಭದ್ರತಾ ಪಡೆ ಹೊಡೆದುರುಳಿಸಿದೆ ಎಂದು ಕಾಶ್ಮೀರ ವಲಯ ಪೊಲೀಸರು ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆ ಮುಂದುವರಿದಿದ್ದು, ಇನ್ನಷ್ಟು ಮಾಹಿತಿ ಸಿಗಲಿದೆ ಎಂದು ತಿಳಿಸಿದ್ದಾರೆ.
ಸಪೋರ್ ಬಳಿಯ ವರಪೋರಾ ಗ್ರಾಮದ ಮನೆಯೊಂದಲ್ಲಿ ಉಗ್ರ ಸಂಘಟಯ ಕಮಾಂಡರ್ ಮತ್ತು ಓರ್ವ ಉಗ್ರ ಬಚ್ಚಿಟ್ಟುಕೊಂಡಿರುವ ಮಾಹಿತಿ ಅರಿತು ಭದ್ರತಾ ಪಡೆ ಕಾರ್ಯಾಚರಣೆಗೆ ಇಳಿದಿತ್ತು. ಈ ವೇಳೆ ಉಗ್ರರು ಗುಂಡಿನ ದಾಳಿ ಮಾಡಿದ್ದರಿಂದ ಪ್ರತ್ಯುತ್ತರವಾಗಿ ಭದ್ರತಾ ಪಡೆ ದಾಳಿ ಮಾಡಿ ಓರ್ವ ಉಗ್ರನನ್ನು ಬೇಟೆಯಾಡಿದೆ.