ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿಯ ಹಳ್ಳಿಯೊಂದರಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕರ ಅಡಗುತಾಣವನ್ನು ಕಂಡು ಹಿಡಿದಿದ್ದು ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಎರಡು ಮ್ಯಾಗಜೀನ್ ಮತ್ತು 63 ರೌಂಡ್ಸ್ಗಳಿರುವ ಎರಡು ಎಕೆ-47 ಅಸಾಲ್ಟ್ ರೈಫಲ್‌ಗಳು, ಒಂದು 223 ಬೋರ್ ಎಕೆ ಆಕಾರದ ಹ್ಯಾಂಡ್‌ಗ್ರಿಪ್ ಗನ್, ಅದರ ಎರಡು ಮ್ಯಾಗಜೀನ್ ಮತ್ತು 20 ರೌಂಡ್ಸ್ ಮತ್ತು ಮ್ಯಾಗಜೀನ್ ಮತ್ತು ನಾಲ್ಕು ರೌಂಡ್ಸ್ಗಳನ್ನು ಹೊಂದಿದ ಒಂದು ಚೈನೀಸ್ ಪಿಸ್ತೂಲ್ ಜಪ್ತಿ ಮಾಡಲಾಗಿದೆ.
ಭಯೋತ್ಪಾದಕರ ಅಡಗುತಾಣ ಭೇದಿಸಿದ ಭದ್ರತಾ ಪಡೆ: ಅಪಾರ ಶಸ್ತ್ರಾಸ್ತ್ರ, ಮದ್ದುಗುಂಡು ವಶ - ಜಮ್ಮು- ಕಾಶ್ಮೀರದಲ್ಲಿ ಶೋಧ ಕಾರ್ಯಾಚರಣೆ
ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಪತ್ತೆ ಹಚ್ಚಿದ ಉಗ್ರರ ಅಡಗುತಾಣದಿಂದ ಎರಡು ಎಕೆ-47 ಅಸಾಲ್ಟ್ ರೈಫಲ್‌ಗಳು, ಒಂದು 223 ಬೋರ್ ಎಕೆ ಆಕಾರದ ಹ್ಯಾಂಡ್‌ಗ್ರಿಪ್ ಗನ್ ಹಾಗೂ ಒಂದು ಚೈನೀಸ್ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.
ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಅಡಗುತಾಣ ಭೇದಿಸಿದ ಭದ್ರತಾ ಪಡೆ
ನೂರ್ಕೋಟೆ ಗ್ರಾಮದಲ್ಲಿ ಸೇನೆ ಮತ್ತು ಪೊಲೀಸರು ಖಚಿತ ಮಾಹಿತಿಯ ಮೇರೆಗೆ ನಡೆಸಿದ ಈ ಶೋಧ ಕಾರ್ಯಾಚರಣೆಯಲ್ಲಿ ಅಡಗುತಾಣ ಪತ್ತೆಯಾಗಿದೆ. ಆದರೆ ಯಾರನ್ನೂ ಬಂಧಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಶ್ರೀಲಂಕಾದ ತುರ್ತು ಮನವಿಗೆ ಭಾರತ ತ್ವರಿತವಾಗಿ ಸ್ಪಂದಿಸಿದೆ: ಗೋಪಾಲ್ ಬಾಗ್ಲೆ