ಕರ್ನಾಟಕ

karnataka

ETV Bharat / bharat

ಕಾಶ್ಮೀರದಲ್ಲಿ ಮತ್ತೆ ಹೊರಗಿನ ಕಾರ್ಮಿಕರ ಮೇಲೆ ಗುಂಡಿನ ದಾಳಿ.. ಇಬ್ಬರಿಗೆ ಗಾಯ ಆಸ್ಪತ್ರೆಗೆ ದಾಖಲು - ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡು ದಾಳಿ

ಇದು ಮೊದಲ ಬಾರಿಯೇನು ಅಲ್ಲ. ಹೊರ ರಾಜ್ಯಗಳ ಕಾರ್ಮಿಕರು ಮತ್ತು ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರೆಯುತ್ತಲೇ ಇದೆ. ಅಕ್ಟೋಬರ್​ ತಿಂಗಳಲ್ಲಿ ಇಬ್ಬರು ವಲಸೆ ಕಾರ್ಮಿಕರ ಹತ್ಯೆ ಮಾಡಲಾಗಿತ್ತು.

Terrorist fired upon two outside labourers
ಕಾಶ್ಮೀರದಲ್ಲಿ ಮತ್ತೆ ಹೊರಗಿನ ಕಾರ್ಮಿಕರ ಮೇಲೆ ಗುಂಡಿನ ದಾಳಿ

By

Published : Nov 3, 2022, 8:27 PM IST

ಶ್ರೀನಗರ: ಅನಂತನಾಗ್ ಜಿಲ್ಲೆಯ ಬೊಂಡಿಯಾಲ್ಗಾಮ್‌ನಲ್ಲಿರುವ ಖಾಸಗಿ ಎಸ್‌ಎಪಿಎಸ್ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಹೊರಗಿನ ರಾಜ್ಯದ ಕಾರ್ಮಿಕರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ.

ಘಟನೆಯಲ್ಲಿ ಗುಂಡಿನೇಟು ತಿಂದಿರುವ ಕಾರ್ಮಿಕರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡಿರುವ ಕಾರ್ಮಿಕರನ್ನು ಬಿಹಾರ ಹಾಗೂ ನೇಪಾಳದ ಮೂಲದವರು ಎಂದು ಗುರುತಿಸಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಇದು ಮೊದಲ ಬಾರಿಯೇನು ಅಲ್ಲ. ಹೊರ ರಾಜ್ಯಗಳ ಕಾರ್ಮಿಕರು ಮತ್ತು ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರೆಯುತ್ತಲೇ ಇದೆ. ಅಕ್ಟೋಬರ್​ ತಿಂಗಳಲ್ಲಿ ಇಬ್ಬರು ವಲಸೆ ಕಾರ್ಮಿಕರ ಹತ್ಯೆ ಮಾಡಲಾಗಿತ್ತು. ಇದಕ್ಕೂ ಒಂದು ದಿನ ಮುಂಚೆ ಶೋಪಿಯಾನ್​​ನಲ್ಲಿ ಕಾಶ್ಮೀರಿ ಪಂಡಿತ ಪೋರಣ್​ ಕ್ರಿಶನ್​ ಭಟ್​ ಎಂಬಾತನನ್ನು ಉಗ್ರರು ಕೊಂದಿದ್ದರು. ಹಾಗೇ ಸೆ.2ರಂದು ಪುಲ್ವಾಮಾದಲ್ಲಿ, ಪಶ್ಚಿಮ ಬಂಗಾಳ ಮೂಲದ ವಲಸೆ ಕಾರ್ಮಿಕ ಮುನೀರ್​ ಉಲ್​​ ಇಸ್ಲಾಮ್​ ಎಂಬಾತನನ್ನು ಕೊಂದಿದ್ದರು.

ಇದನ್ನು ಓದಿ:ಹತ್ಯೆ ಆರೋಪಿ ಭಾರತೀಯನ ತಲೆಗೆ ₹5.25 ಕೋಟಿ ಕಟ್ಟಿದ ಆಸ್ಟ್ರೇಲಿಯಾ ಪೊಲೀಸ್​!

ABOUT THE AUTHOR

...view details