ನವದೆಹಲಿ:ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಜೈಶ್ ಎ ಮೊಹಮ್ಮದ್ ಭಯೋತ್ಪಾದಕರಿಗೆ ಜೀವಾವಧಿ ಶಿಕ್ಷೆ ಮತ್ತು ಇನ್ನೊಬ್ಬನಿಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಹೊಸದಿಲ್ಲಿಯ ವಿಶೇಷ ಎನ್‌ಐಎ ನ್ಯಾಯಾಲಯವು ಸೋಮವಾರ ತೀರ್ಪು ನೀಡಿದೆ.
2008ರ ಬ್ಯಾಚ್‌ನ ಒಡಿಯಾ ಐಪಿಎಸ್ ಅಧಿಕಾರಿ ಡಾ ಸತ್ಯಜಿತ್ ನಾಯಕ್ ಅವರು ಎನ್‌ಐಎಯ ಪೊಲೀಸ್ ಅಧೀಕ್ಷಕ (ಎಸ್‌ಪಿ) ಆಗಿದ್ದ ಅವಧಿಯಲ್ಲಿ ಮುಖ್ಯ ತನಿಖಾ ಅಧಿಕಾರಿ (ಸಿಐಒ) ಆಗಿ ತನಿಖೆ ನಡೆಸಿದ ಎನ್‌ಐಎಯ ಪ್ರಮುಖ ಪ್ರಕರಣಗಳಲ್ಲಿ ಇದು ಒಂದಾಗಿದೆ.
ಭಾರತದ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ವ್ಯಕ್ತಿಗಳನ್ನು ನೇಮಿಸಿಕೊಳ್ಳಲು ಪಾಕಿಸ್ತಾನ ಮೂಲದ ಮೌಲಾನಾ ಮಸೂದ್ ಅಜರ್‌ನ ಸಹೋದರ ಮುಫ್ತಿ ಅಬ್ದುಲ್ ರೌಫ್ ಅಸ್ಗರ್ ಎಂಬ ಜೈಶ್-ಎ ಮೊಹಮ್ಮದ್ (ಜೆಇಎಂ) ಉಗ್ರಗಾಮಿಯ ಕ್ರಿಮಿನಲ್ ಪಿತೂರಿಯ ಪ್ರಕರಣ ಇದಾಗಿದೆ.
ಪಾಕಿಸ್ತಾನದಲ್ಲಿ ತರಬೇತಿ ಪಡೆದ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ತರಬೇತಿ ನೀಡಬಲ್ಲ ಜೈಶ್ ಎ ಮೊಹಮ್ಮದ್ ಭಯೋತ್ಪಾದಕರು ಭಾರತದ ವಿವಿಧ ರಾಜ್ಯಗಳಲ್ಲಿ ನೆಲೆಸಿರುವ ತಮ್ಮ ಸಹಚರರ ಸಹಾಯದಿಂದ ಗಡಿ ದಾಟಿದ ನಂತರ ಅಕ್ರಮವಾಗಿ ಭಾರತದ ಭೂಪ್ರದೇಶಕ್ಕೆ ನುಸುಳಿದ್ದರು.ೠ
ಐವರಿಗೆ ಜೀವಾವಧಿ ಶಿಕ್ಷೆ ತೀರ್ಪು:ಸಜಾದ್ ಅಹ್ಮದ್ ಖಾನ್ ಉರ್ಫ್ ಸಜ್ಜದ್ ಅಹ್ಮದ್ ಖಾನ್, ಬಿಲಾಲ್ ಅಹ್ಮದ್ ಮೀರ್ ಉರ್ಫ್ ಬಿಲಾಲ್ ಮಿರ್, ಮುಜಾಫರ್ ಅಹ್ಮದ್ ಭಟ್ ಉರ್ಫ್ ಮುಜಾಫರ್ ಭಟ್, ಇಷ್ಫಾಕ್ ಅಹ್ಮದ್ ಭಟ್ ಮತ್ತು ಮೆಹರಾಜ್ ಭಟ್ ಇವರನ್ನು ಸೆಕ್ಷನ್ 121 ಎ, 120 ಬಿ ಐಪಿಸಿ, 18, 38, 39 ಯುಎ (ಪಿ) ಆಕ್ಟ್ ಮತ್ತು ಸ್ಫೋಟಕ ವಸ್ತುಗಳ ಕಾಯಿದೆಯ ಸೆಕ್ಷನ್ 4, 5 ಕಾಯ್ದೆಗಳಡಿ ಅಪರಾಧಿಗಳು ಎಂದು ಘೋಷಿಸಿದ ನ್ಯಾಯಾಲಯ ಇವರೆಲ್ಲರಿಗೂ ಜೀವಾವಧಿ ಶಿಕ್ಷೆ ವಿಧಿಸಿದೆ.