ಕರ್ನಾಟಕ

karnataka

ETV Bharat / bharat

ಅಸ್ಸೋಂ - ಮೇಘಾಲಯ ಗಡಿಯಲ್ಲಿ ಘರ್ಷಣೆ, ಗುಂಡಿನ ದಾಳಿ: ಅರಣ್ಯ ಸಿಬ್ಬಂದಿ ಸೇರಿ ಆರು ಜನರ ಸಾವು - ಉದ್ವಿಗ್ನ ವಾತಾವರಣ

ಅಸ್ಸೋಂ ಮತ್ತು ಮೇಘಾಲಯ ಗಡಿಯಲ್ಲಿ ಮರ ಸಾಗಣೆ ಸಂಬಂಧ ಅಸ್ಸೋಂ ಅರಣ್ಯಾಧಿಕಾರಿಗಳು ಮತ್ತು ಪೊಲೀಸರು ಹಾಗೂ ಸ್ಥಳೀಯರ ನಡುವೆ ಘರ್ಷಣೆ ಉಂಟಾಗಿದೆ. ಅರಣ್ಯ ಸಿಬ್ಬಂದಿ ಸೇರಿ ಆರು ಜನರು ಮೃತಪಟ್ಟಿದ್ದಾರೆ.

tension-in-assam-meghalaya-border-after-six-people-shot-dead-in-mokru
ಅಸ್ಸೋಂ - ಮೇಘಾಲಯ ಗಡಿಯಲ್ಲಿ ಘರ್ಷಣೆ, ಗುಂಡಿನ ದಾಳಿ: ಅರಣ್ಯ ಸಿಬ್ಬಂದಿ ಸೇರಿ ಆರು ಜನರ ಸಾವು

By

Published : Nov 22, 2022, 7:45 PM IST

ಪಶ್ಚಿಮ ಕರ್ಬಿ ಆಂಗ್ಲಾಂಗ್ (ಅಸ್ಸೋಂ):ಅಸ್ಸೋಂ ಮತ್ತು ಮೇಘಾಲಯ ಗಡಿಯ ಪಶ್ಚಿಮ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ. ಇದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಮೇಘಾಲಯ ಸರ್ಕಾರವು ರಾಜ್ಯದ ಏಳು ಜಿಲ್ಲೆಗಳಲ್ಲಿ ಇಂಟರ್​ನೆಟ್ ಸೇವೆ ಸ್ಥಗಿತಗೊಳಿಸಿದೆ.

ಇಲ್ಲಿನ ಮುಕ್ರೋ ಪ್ರದೇಶದಲ್ಲಿ ಟ್ರಕ್​ನಲ್ಲಿ ಮರದ ತುಂಡುಗಳಳನ್ನು ಸಾಗಿಸಲಾಗಿತ್ತು. ಈ ವೇಳೆ ಅಸ್ಸೋಂ ಅರಣ್ಯಾಧಿಕಾರಿಗಳು ಪೊಲೀಸರ ತಂಡದ ಸಹಾಯದಿಂದ ಟ್ರಕ್​ಅನ್ನು ತಡೆಯಲು ಪ್ರಯತ್ನಿಸಿದ್ದರು. ಆದರೆ, ಟ್ರಕ್​ ಚಾಲಕ ಪೊಲೀಸರು ಮತ್ತು ಅರಣ್ಯಾಧಿಕಾರಿಗಳ ಸೂಚನೆಗೂ ಕಿವಿಗೊಡದೇ ಹಾಗೆ ಚಲಾಯಿಸಲು ಮುಂದಾಗಿದ್ದ. ಆಗ ಟೈರ್​ಗೆ ಅಧಿಕಾರಿಗಳು ಗುಂಡು ಹಾರಿಸಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ರಜೌರಿ ಪೂಂಚ್ ಪ್ರದೇಶ ಸೇರಿದಂತೆ ಕಾಶ್ಮೀರದಲ್ಲಿ 305 ಉಗ್ರರು ಸಕ್ರಿಯ: ಲೆಫ್ಟಿನೆಂಟ್ ಜನರಲ್

ಇತ್ತ, ಇದೇ ವೇಳೆ ಟ್ರಕ್ ಚಾಲಕ ಸ್ಥಳೀಯ ಜನರನ್ನು ಕರೆದಿದ್ದಾನೆ. ಇದರಿಂದ ಸ್ಥಳಕ್ಕೆ ಸುಮಾರು 300ಕ್ಕೂ ಹೆಚ್ಚು ಜನರ ಗುಂಪು ಸ್ಥಳಕ್ಕೆ ಆಗಮಿಸಿದ್ದರು. ಅಲ್ಲದೇ, ಹರಿತವಾದ ಆಯುಧಗಳಿಂದ ಅರಣ್ಯಾಧಿಕಾರಿಗಳು ಮತ್ತು ಪೊಲೀಸರು ಹಲ್ಲೆಗೂ ಯತ್ನಿಸಿದರು. ಆಗ ಅರಣ್ಯ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಉದ್ರಿಕ್ತ ಗುಂಪಿನ ಮೇಲೆ ಗುಂಡು ಹಾರಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ, ಅಸ್ಸೋಂನ ಅರಣ್ಯ ಸಿಬ್ಬಂದಿಯೊಬ್ಬರನ್ನೂ ಆಕ್ರೋಶಿತ ಜನರು ಹೊಡೆದು ಕೊಂದಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆಯಲ್ಲಿ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಘೋಷಿಸಿದ್ದಾರೆ. ಜೊತೆಗೆ ಅಸ್ಸೋಂ ಪೊಲೀಸರ ಗುಂಡಿನ ದಾಳಿಯನ್ನು ಖಂಡಿಸಿದ ಸಂಗ್ಮಾ, ಅಸ್ಸೋಂನ ಪೊಲೀಸರು ಮತ್ತು ಅರಣ್ಯಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಮೇಘಾಲಯ ಪೊಲೀಸರಿಗೆ ಸೂಚಿಸಿದ್ದಾರೆ.

ಇನ್ನು, ಮುಂದಿನ ಕೆಲವು ದಿನಗಳವರೆಗೆ ನೆರೆಯ ರಾಜ್ಯಕ್ಕೆ ಭೇಟಿ ನೀಡದಂತೆ ರಾಜ್ಯದ ಜನರಿಗೆ ಅಸ್ಸೋಂ ಸರ್ಕಾರ ಸಹ ಸೂಚನೆ ನೀಡಿದೆ. ಅಲ್ಲದೇ, ಈ ಪ್ರಕರಣದ ತನಿಖೆಗಾಗಿ ನ್ಯಾಯಾಂಗ ಆಯೋಗವನ್ನು ರಚಿಸಿ ಆದೇಶಿಸಲಾಗಿದೆ.

ಇದನ್ನೂ ಓದಿ:ಸಿಕ್ಕಿಂನಲ್ಲಿ ತರಬೇತಿ ಸಮಯದಲ್ಲಿ ಪ್ಯಾರಾ ಟ್ರೂಪರ್ ಸಾವು

ABOUT THE AUTHOR

...view details