ಗಾಂಧಿನಗರ (ಗುಜರಾತ್): ಬಸ್‌ಗಾಗಿ ಕಾಯುತ್ತಿದ್ದ ಜನರ ಮೇಲೆ ಬಸ್ ಹರಿದು ಹತ್ತು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುಜರಾತ್ನ ಗಾಂಧಿನಗರ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಹಲವರು ಕೂಡ ಗಾಯಗೊಂಡಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ.
ಗಾಂಧಿನಗರದಲ್ಲಿ ಬಸ್ ಗುದ್ದಿ 10 ಮಂದಿ ಸ್ಥಳದಲ್ಲೇ ಸಾವು - 10 ಮಂದಿ ಸ್ಥಳದಲ್ಲೇ ಸಾವು
ಗುಜರಾತ್ನ ಗಾಂಧಿನಗರ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
![ಗಾಂಧಿನಗರದಲ್ಲಿ ಬಸ್ ಗುದ್ದಿ 10 ಮಂದಿ ಸ್ಥಳದಲ್ಲೇ ಸಾವು Ten people died in Road Accident in Gandhinagar , gujarat](https://etvbharatimages.akamaized.net/etvbharat/prod-images/1200-675-18466722-thumbnail-16x9-ran1.jpg)
ಗಾಂಧಿನಗರ: ಖಾಸಗಿ ಬಸ್ ಗುದ್ದಿ 10 ಮಂದಿ ಸ್ಥಳದಲ್ಲೇ ಸಾವು
ಕಲೋಲ್ ತಾಲೂಕಿನ ಅಂಬಿಕಾ ನಗರ ಬಸ್ ನಿಲ್ದಾಣದ ಬಳಿ ಬಸ್‌ಗಾಗಿ ಪ್ರಯಾಣಿಕರು ಕಾಯುತ್ತಿದ್ದರು. ಈ ವೇಳೆ ಸಾರಿಗೆ ಬಸ್ಸೊಂದು ನಿಲ್ದಾಣದ ಹೊರಗೆ ನಿಂತಿತ್ತು. ಬಸ್ ಮುಂಭಾಗದಲ್ಲಿ ಪ್ರಯಾಣಿಕರು ಎರಡನೇ ಬಸ್‌ಗಾಗಿ ಕಾಯುತ್ತಿದ್ದರು. ಆಗ ಹಿಂದಿನಿಂದ ಬಂದ ಖಾಸಗಿ ಬಸ್ ಸರ್ಕಾರಿ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ನಿಂತಿದ್ದ ಸಾರಿಗೆ ಬಸ್ ರಭಸದಿಂದ ಮುಂದೆ ಸಾಗಿ ಜನರ ಮೇಲೆ ಹರಿಯಿತು ಎಂದು ಹೇಳಲಾಗುತ್ತಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಯಲಹಂಕ ನಿಲ್ದಾಣದಲ್ಲಿ ಗುದ್ದಿದ ಬಿಎಂಟಿಸಿ ಬಸ್ : ಕಂಡಕ್ಟರ್ ಸ್ಥಳದಲ್ಲೇ ಸಾವು