ಶಿಮ್ಲಾ (ಹಿಮಾಚಲ ಪ್ರದೇಶ): ವಾಹನ ಕಂದಕಕ್ಕೆ ಉರುಳಿಬಿದ್ದ ಪರಿಣಾಮ 10 ಮಂದಿ ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ಸಿರ್ಮುರ್ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಮದುವೆ ಕಾರ್ಯಕ್ರಮದಿಂದ ಜನರನ್ನು ಹೊತ್ತು ತರುತ್ತಿದ್ದ ವಾಹನ ಶಿಲ್ಲೈ ಉಪವಿಭಾಗದ ಪಶೋಗ್ ಬಳಿ ಕಂದಕಕ್ಕೆ ಉರುಳಿ ಅವಘಡ ಸಂಭವಿಸಿದೆ.
ವಾಹನದಲ್ಲಿ ಒಟ್ಟು 12 ಜನರಿದ್ದರು. ಈ ಪೈಕಿ ಅಪಘಾತ ನಡೆದ ತಕ್ಷಣ 9 ಮಂದಿ ಸ್ಥಳದಲ್ಲೇ ಕೊನೆಯುಸಿರೆಳೆದರೆ, ಒಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಪ್ರಾಣ ಬಿಟ್ಟಿದ್ದಾರೆ. ಇಬ್ಬರು ಗಾಯಾಗಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
"ನಾನು ಆ ದಾರಿಯಾಗಿ ಹೋಗುತ್ತಿದ್ದಾಗ ಆ್ಯಂಬುಲೆನ್ಸ್ ನೋಡಿ ಅಪಘಾತ ನಡೆದ ವಿಷಯ ಗೊತ್ತಾಯಿತು. ನಾನು ಉತ್ತಮ ಚಿಕಿತ್ಸೆ ನೀಡುವಂತೆ ಸೂಚಿಸಲು ಗಾಯಾಳುಗಳನ್ನು ದಾಖಲಿಸಿದ್ದ ಆಸ್ಪತ್ರೆಗೆ ತೆರಳಿದ್ದೆ. ಹಿರಿಯ ವೈದ್ಯರೊಂದಿಗೆ ವಿಶೇಷ ಕಾಳಜಿ ವಹಿಸುವಂತೆ ಹೇಳಿದ್ದೇನೆ. ಆದರೂ, ಗಾಯಗೊಂಡವರಲ್ಲಿ ಒಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರು" ಎಂದು ಪಾವೊಂಟಾ ಸಾಹಿಬ್ ಎಸ್‌ಡಿಎಂ ವಿವೇಕ್ ಮಹಾಜನ್ ಹೇಳಿದ್ದಾರೆ.