ಕರ್ನಾಟಕ

karnataka

ETV Bharat / bharat

ಉತ್ತರಕಾಶಿ ಹಿಮಪಾತ ದುರಂತ: ಸಾವಿನ ಸಂಖ್ಯೆಕ್ಕೆ 27ಕ್ಕೇರಿಕೆ... ಮೃತರಲ್ಲಿ ಕರ್ನಾಟಕದ ಇಬ್ಬರ ಗುರುತು ಪತ್ತೆ - ಕರ್ನಾಟಕದ ಇಬ್ಬರ ಗುರುತು

ಉತ್ತರಾಖಂಡದ ಉತ್ತರಕಾಶಿಯಲ್ಲಿ ನಡೆದ ಹಿಮಪಾತ ದುರಂತದಲ್ಲಿ ಸಾವಿನ ಸಂಖ್ಯೆ 27ಕ್ಕೆ ಏರಿಕೆಯಾಗಿದ್ದು, ಮೃತರಲ್ಲಿ ಕರ್ನಾಟಕದ ಇಬ್ಬರ ಗುರುತು ಪತ್ತೆಯಾಗಿದೆ.

ten-bodies-were-brought-by-helicopter-to-matli-helipad-in-uttarkashi
ಉತ್ತರಕಾಶಿ ಹಿಮಪಾತ ದುರಂತ: ಸಾವಿನ ಸಂಖ್ಯೆಕ್ಕೆ 27ಕ್ಕೇರಿಕೆ... ಮೃತರಲ್ಲಿ ಕರ್ನಾಟಕದ ಇಬ್ಬರ ಗುರುತು ಪತ್ತೆ

By

Published : Oct 9, 2022, 5:35 PM IST

ಉತ್ತರಕಾಶಿ (ಉತ್ತರಾಖಂಡ): ಉತ್ತರಾಖಂಡದ ಗಡಿ ಜಿಲ್ಲೆ ಉತ್ತರಕಾಶಿಯಲ್ಲಿ ನಡೆದ ಹಿಮಪಾತ ದುರಂತದಲ್ಲಿ ಮೃತಪಟ್ಟವರ ಪೈಕಿ ಒಬ್ಬರು ಕರ್ನಾಟಕದವರೂ ಸೇರಿದ್ದಾರೆ. ಬೆಂಗಳೂರಿನ ರಕ್ಷಿತ್​ ಹಾಗೂ ವಿಕ್ರಮ್ ಎಂಬುವವರೇ ಮೃತರು ಎಂದು ಗುರುತಿಸಲಾಗಿದೆ.

ಅಕ್ಟೋಬರ್​ 4ರಂದು ಉತ್ತರಕಾಶಿ ಜಿಲ್ಲೆಯ ದ್ರೌಪದಿಯ ದಂಡ-2 ಪ್ರದೇಶದಲ್ಲಿ ನೆಹರೂ ಪರ್ವತಾರೋಹಣ ಸಂಸ್ಥೆ (ಎನ್‌ಐಎಂ)ಯ 27 ಪ್ರಶಿಕ್ಷಣಾರ್ಥಿಗಳು ಮತ್ತು ಇಬ್ಬರು ಬೋಧಕರು ಸೇರಿದಂತೆ 29 ಪರ್ವತಾರೋಹಿಗಳು ಹಿಮ ಕುಸಿತದಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.

ಭಾನುವಾರ ಸತತ ಆರನೇ ದಿನವೂ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಇಂದು 10 ಜನ ಪ್ರಶಿಕ್ಷಣಾರ್ಥಿಗಳ ಹತ್ತು ಶವಗಳನ್ನು ಉತ್ತರಕಾಶಿಗೆ ತರಲಾಗಿದೆ. ಇದರಲ್ಲಿ ಬೆಂಗಳೂರಿನ ಮುನೇಶ್ವರ ಬ್ಲಾಕ್​ನ ರಕ್ಷಿತ್​ ಹಾಗೂ ಕಾಡುಗೋಡಿಯ ವಿಕ್ರಮ್ ಕೂಡ ಸೇರಿದ್ದಾರೆ.

ಇದನ್ನೂ ಓದಿ:ಉತ್ತರಕಾಶಿ ಹಿಮಪಾತ ದುರಂತ: ಸಾವಿನ ಸಂಖ್ಯೆ 26ಕ್ಕೆ ಏರಿಕೆ.. ಮುಂದುವರೆದ ರಕ್ಷಣಾ ಕಾರ್ಯ

ಇಲ್ಲಿಯವರೆಗೆ ಒಟ್ಟು 27 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಈ ಪೈಕಿ 21 ಮೃತದೇಹಗಳನ್ನು ಉತ್ತರಕಾಶಿಗೆ ಅವರ ಕುಟುಂಬಗಳಿಗೆ ಹಸ್ತಾಂತರಿಸಲು ತರಲಾಗಿದೆ ಎಂದು ಎನ್‌ಐಎಂ ಸಂಸ್ಥೆ ತಿಳಿಸಿದೆ.

ಶುಕ್ರವಾರ ನಾಲ್ಕು, ಶನಿವಾರ ಏಳು ಮತ್ತು ರವಿವಾರ 10 ಮೃತದೇಹಗಳನ್ನು ಉತ್ತರಕಾಶಿಯ ಮಟ್ಲಿ ಹೆಲಿಪ್ಯಾಡ್‌ಗೆ ತರಲಾಗಿದೆ. ಉತ್ತರಕಾಶಿಗೆ ತರಲಾದ ಎಲ್ಲ 21 ಮೃತದೇಹಗಳನ್ನು ಗುರುತಿಸಲಾಗಿದ್ದು, ಇಬ್ಬರು ಪರ್ವತಾರೋಹಿಗಳು ಇನ್ನೂ ನಾಪತ್ತೆಯಾಗಿದ್ದಾರೆ ಎಂದೂ ಸಂಸ್ಥೆ ಮಾಹಿತಿ ನೀಡಿದೆ.

ಇಂದು ಉತ್ತರಕಾಶಿಗೆ ತಂದ ಮೃತದೇಹಗಳು

  • ನರೇಂದ್ರ ಸಿಂಗ್ - ತಂದೆ ಅಕ್ವೀರ್ ಸಿಂಗ್, ಗಾರ್ಲ್ಯಾಂಡ್, ಪುರಿ
  • ರಕ್ಷಿತ್​ ಪುತ್ರ - ತಂದೆ ಕುಮಾರ್ ಜೆ.ಹೆಚ್, 6ನೇ ಕ್ರಾಸ್ ಮುನೇಶ್ವರ ಬ್ಲಾಕ್, ಬೆಂಗಳೂರು
  • ಸತೀಶ್ ರಾವತ್ - ತಂದೆ ಶೂರ್​ವೀರ್ ಸಿಂಗ್ ರಾವತ್, ತೆಹ್ರಿ ಗರ್ವಾಲ್
  • ಅಮಿತ್ ಕುಮಾರ್ - ತಂದೆ ಅರ್ಜುನ್ ಶಾ, ಕೋಲ್ಕತ್ತಾ
  • ಅತುನು ಧರ್ - ತಂದೆ ಸಸಂಕ ಧರ್, ಚತ್ತರ್‌ಪುರ, ನವದೆಹಲಿ
  • ಗೋಹಿಲ್ ಅರ್ಜುನ್ ಸಿಂಗ್ - ತಂದೆ ಗೋಹಿಲ್ ಭೂಪೇಂದ್ರ ಸಿನ್ಹಾ, ಮೌಂಟ್ ಅಬು
  • ಅಂಶುಲ್ ಕೈಂತಾಳ - ತಂದೆ ಇಂದರ್ ಕೈಂತಲ, ಕುಮಾರ್ಸೆನ್, ಶಿಮ್ಲಾ
  • ವಿಕ್ರಮ್ - ತಂದೆ ಮಲ್ಲೇಶ್, ಕಾಡುಗೋಡಿ, ಕರ್ನಾಟಕ
  • ಶುಭಂ ಸಿಂಗ್ - ತಂದೆ ದೇವಿಪ್ರಸಾದ್
  • ಕಪಿಲ್ ಪನ್ವಾರ್ - ತಂದೆ ಜಗಮೋಹನ್ ಸಿಂಗ್, ಉತ್ತರಕಾಶಿ

ABOUT THE AUTHOR

...view details