ಕೊಟ್ಟಾಯಂ(ಕೇರಳ) :ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದ ಮೇಲೆ ದೇವಸ್ಥಾನದ ಅರ್ಚಕನೋರ್ವನನ್ನು ಬಂಧಿಸಲಾಗಿದೆ. ಕೇರಳದ ಕೊಟ್ಟಾಯಂನಲ್ಲಿ ಈ ಘಟನೆ ನಡೆದಿದೆ.
ಪರಿಪ ಶ್ರೀ ಪುರಂ ದೇವಸ್ಥಾನದ ಅರ್ಚಕ ಶಿರೀಶ್(33) ಬಂಧನಕ್ಕೊಳಗಾಗಿರುವ ಪೂಜಾರಿ. ರಾಶಿ ಭವಿಷ್ಯ ತಿಳಿದುಕೊಳ್ಳುವ ಉದ್ದೇಶದಿಂದ ತನ್ನ ಪೋಷಕರೊಂದಿಗೆ ದೇವಸ್ಥಾನಕ್ಕೆ ಬಂದಿದ್ದ ಬಾಲಕಿಗೆ ಪೂಜಾರಿ ಲೈಂಗಿಕ ದೌರ್ಜನ್ಯ ಮಾಡಿದ್ದಾನೆ. ಜೊತೆಗೆ ತನ್ನನ್ನು ರೂಂನೊಳಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆಂದು ಬಾಲಕಿ ಗಂಭೀರ ಆರೋಪ ಮಾಡಿದ್ದಾಳೆ.