ರತ್ಲಾಮ್(ಮಧ್ಯಪ್ರದೇಶ): ಜಿಲ್ಲೆಯ ಭಾದ್ವಾಸಾ ಗ್ರಾಮದಲ್ಲಿರುವ ಅಂಬೆಮಾತಾ ದೇವಸ್ಥಾನದ ಸ್ಥಳವನ್ನು ಗೂಗಲ್ ಮ್ಯಾಪ್‌ನಲ್ಲಿ ಕಹಕಶನ್ ಮಸೀದಿ ಭಾದ್ವಾಸಾಎಂದು ತೋರಿಸಲಾಗಿದೆ. ದೇವಸ್ಥಾನದ ಬದಲಾಗಿ ಮಸೀದಿಯನ್ನು ತೋರಿಸುವ ಗೂಗಲ್ ಮ್ಯಾಪ್‌ನ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ.
ಗೂಗಲ್ ಮ್ಯಾಪ್ ಸೌಲಭ್ಯ ದುರ್ಬಳಕೆ:ಗೂಗಲ್ ಮ್ಯಾಪ್‌ನಲ್ಲಿ ಸ್ಥಳವನ್ನು ಹೆಸರಿಸಲು ಒಂದು ಆಯ್ಕೆ ಇದೆ. ಇದನ್ನು ಬಳಸಿಕೊಂಡು ಜನರು ಸಾಮಾನ್ಯವಾಗಿ ತಮ್ಮ ವ್ಯಾಪಾರ ಸ್ಥಾಪನೆಯ ಹೆಸರು, ಗ್ರಾಮದ ಹೆಸರು ಮತ್ತು ಸ್ಥಳಗಳನ್ನು ನಮೂದಿಸುತ್ತಾರೆ. ಆದರೆ ರತ್ಲಾಮ್‌ನ ನಮ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಭಾದ್ವಾಸ ಗ್ರಾಮದ ಧಾರ್ಮಿಕ ಸ್ಥಳದ ಹೆಸರನ್ನು ಬದಲಾಯಿಸಲು ಈ ನಕ್ಷೆಯನ್ನು ಬಳಸಲಾಗಿದೆ. ಈ ಬದಲಾವಣೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ನಮ್ಲಿ ಠಾಣೆಗೆ ಬಂದು ಆರೋಪಿ ಯುವಕರ ವಿರುದ್ಧ ದೂರು ದಾಖಲಿಸಿದ್ದಾರೆ.