ಕರ್ನಾಟಕ

karnataka

ETV Bharat / bharat

ನಿವಾರ್ ಎಫೆಕ್ಟ್​: ಅಲೆಯ ಹೊಡೆತಕ್ಕೆ ಸಿಲುಕಿ ಸಮುದ್ರ ಪಾಲಾದ ದೇವಾಲಯ - ನೈರುತ್ಯ ಸಮುದ್ರ ತೀರ

ನಿವಾರ್ ಚಂಡಮಾರುತದ ಪರಿಣಾಮದಿಂದ ಸಮುದ್ರ ತೀರದಲ್ಲಿದ್ದ ದೇವಾಲಯವೊಂದು ಸಮುದ್ರ ಪಾಲಾಗಿದೆ. 7 ವರ್ಷದ ಹಿಂದೆ ನಿರ್ಮಿಸಲಾಗಿದ್ದ ದೇವಾಲಯ ಅಲೆಯ ಹೊಡೆತಕ್ಕೆ ಸಿಲುಕಿ ಧರೆಗುರುಳಿದೆ.

temple-collapsed-by-the-sea-waves-at-east-godavari
ನಿವಾರ್ ಎಫೆಕ್ಟ್​: ಸಮುದ್ರ ತೀರದಲ್ಲಿದ್ದ ದೇವಾಲಯ ಸಮುದ್ರ ಪಾಲು

By

Published : Nov 26, 2020, 1:17 PM IST

ಪೂರ್ವ ಗೋಧಾವರಿ (ಆಂಧ್ರ ಪ್ರದೇಶ):ನೈರುತ್ಯ ಸಮುದ್ರ ತೀರದಲ್ಲಿ ನಿವಾರ್ ಚಂಡಮಾರುತದ ಅಬ್ಬರ ಜೋರಾಗಿದೆ. ಅಲೆಗಳ ಉಬ್ಬರ ಇಳಿತ ಹೆಚ್ಚಾಗಿದ್ದು, ಕಡಲ್ಕೊರೆತ ಉಂಟಾಗಿದೆ.

ಇಲ್ಲಿನ ಪೂರ್ವ ಗೋಧಾವರಿಯ ಸಮುದ್ರ ತೀರದಲ್ಲಿ 7 ವರ್ಷದ ಹಿಂದೆ ನಿರ್ಮಿಸಲಾಗಿದ್ದ ದೇವಾಲಯವೊಂದು ಅಲೆಯ ಹೊಡೆತಕ್ಕೆ ಸಿಲುಕಿ ಸಮುದ್ರ ಪಾಲಾಗಿದೆ.

ಸಮುದ್ರದಿಂದ ಸುಮಾರು 100 ಮೀಟರ್​ ದೂರದಲ್ಲಿದ್ದ ದೇವಾಲಯ ಇದೀಗ ಸಮುದ್ರದ ಅಲೆಗೆ ಸಿಲುಕಿ ಧರೆಗುರುಳಿದೆ. ಅಲ್ಲದೆ ತೀರದಲ್ಲಿದ್ದ ಮನೆಗಳು ಸಹ ಹಾನಿಗೊಳಗಾಗಿದ್ದು, ರಸ್ತೆವರೆಗೂ ಅಲೆಗಳು ಅಪ್ಪಳಿಸಿವೆ.

ಕಳೆದ ಮಳೆಗಾಲದಲ್ಲೂ ಪೂರ್ವ ಗೋಧಾವರಿಯ ಕಡಲ ತೀರದಲ್ಲಿ ಕಡಲ್ಕೊರೆತ ಉಂಟಾಗಿತ್ತು.

ABOUT THE AUTHOR

...view details