ಹೈದರಾಬಾದ್:ತೆಲುಗು ನಟ ಮಹೇಶ್ ಬಾಬು ಅವರ ತಂದೆ, ಸೂಪರ್ ಸ್ಟಾರ್ ಕೃಷ್ಣ ಅವರು ಅನಾರೋಗ್ಯಕ್ಕೀಡಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಭಾನುವಾರ ರಾತ್ರಿ 2 ಗಂಟೆ ಸುಮಾರಿಗೆ ಕೃಷ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತೆಲುಗು ನಟ ಮಹೇಶ್ಬಾಬು ತಂದೆ ಕೃಷ್ಣ ಆರೋಗ್ಯ ಸ್ಥಿತಿ ಗಂಭೀರ - ಮಹೇಶ್ಬಾಬು ತಂದೆ ಕೃಷ್ಣ ಆರೋಗ್ಯ ಸ್ಥಿತಿ ಗಂಭೀರ
ತೆಲುಗು ನಟ ಮಹೇಶ್ ಬಾಬು ಅವರ ತಂದೆ, ಸೂಪರ್ ಸ್ಟಾರ್ ಕೃಷ್ಣ ಅವರು ಅನಾರೋಗ್ಯಕ್ಕೀಡಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ತೆಲುಗು ನಟ ಮಹೇಶ್ಬಾಬು ತಂದೆ ಕೃಷ್ಣ ಆರೋಗ್ಯ ಸ್ಥಿತಿ ಗಂಭೀರ
ಇಂದು ಹಿರಿಯ ನಟನ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿರುವ ವೈದ್ಯರು, ನಟ ಮಹೇಶ್ಬಾಬು ಅವರ ತಂದೆಯ ಆರೋಗ್ಯ ಕ್ಷೀಣಿಸುತ್ತಿದೆ. ಎದೆನೋವು ಸಮಸ್ಯೆಯಿಂದ ಅವರು ಬಳಲುತ್ತಿದ್ದಾರೆ. ತುರ್ತು ಚಿಕಿತ್ಸಾ ಘಟಕದಲ್ಲಿ ಅವರಿಗೆ ವೆಂಟಿಲೇಟರ್ ನೆರವಿನಿಂದ ಚಿಕಿತ್ಸೆ ನೀಡಲಾಗುತ್ತಿದೆ. ಸಿಪಿಆರ್ ನಡೆಸಲಾಗಿದೆ. ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ತೀವ್ರ ನಿಗಾ ವಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಓದಿ:ಅಸಾದುದ್ದೀನ್ ಓವೈಸಿ ವಿರುದ್ಧ ಬಿಜೆಪಿ ಪ್ರತಿಭಟನೆ.. ಕಪ್ಪುಬಾವುಟ ಪ್ರದರ್ಶಿಸಿ, ಮೋದಿ ಪರ ಘೋಷಣೆ