ಅಮರಾವತಿ (ಆಂಧ್ರಪ್ರದೇಶ):ಲಸಿಕೆ ನೀಡುವುದಾಗಿ ತೆಲುಗು ನಿರ್ಮಾಪಕರೊಬ್ಬರಿಗೆ 1 ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ನಿರ್ಮಾಪಕರಿಗೆ ಕರೆ ಮಾಡಿದ್ದ ವಂಚಕ, ನಾನು ಆರೋಗ್ಯ ಇಲಾಖೆಯ ನೌಕರನಾಗಿದ್ದು, 2.50 ಲಕ್ಷ ಮೌಲ್ಯದ ಲಸಿಕೆ ನೀಡುವುದಾಗಿ ತಿಳಿಸಿದ್ದ.
ಕೋವಿಡ್ ಲಸಿಕೆ ನೀಡುವುದಾಗಿ ತೆಲುಗು ನಿರ್ಮಾಪಕನಿಗೆ 1 ಲಕ್ಷ ರೂ. ವಂಚನೆ - ಕೋವಿಡ್ ಲಸಿಕೆ ವಿತರಣೆ
ಜನರಿಗೆ ವಿತರಿಸಲು ಲಸಿಕೆ ನೀಡುವುದಾಗಿ ತೆಲುಗಿನ ಖ್ಯಾತ ನಿರ್ಮಾಪಕರೊಬ್ಬರಿಗೆ 1 ಲಕ್ಷ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ. 2.50 ಲಕ್ಷದ ಲಸಿಕೆ ನೀಡುವುದಾಗಿ ತಿಳಿಸಿದ್ದ ವಂಚಕ ಮುಂಗಡವಾಗಿ 1 ಲಕ್ಷ ರೂಪಾಯಿ ಪಡೆದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ.
ಕೋವಿಡ್ ಲಸಿಕೆ
ಇದನ್ನು ನಂಬಿದ್ದ ನಿರ್ಮಾಪಕರು ಆತನಿಂದ ಲಸಿಕೆ ಪಡೆದು ಜನರಿಗೆ ವಿತರಿಸಲು ನಿರ್ಧರಿಸಿದ್ದರು. ಬಳಿಕ ಮುಂಗಡವಾಗಿ 1 ಲಕ್ಷ ರೂಪಾಯಿ ಪಡೆದ ವಂಚಕ ನಂತರ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಹೀಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಿರ್ಮಾಪಕರು ವಂಚನೆ ಪ್ರಕರಣ ದಾಖಲಿಸಿದ್ದರು. ಆದರೆ ಈ ಪ್ರಕರಣದ ತನಿಖೆಗೂ ಮುನ್ನವೇ ವಂಚಕ ಬೇರೊಂದು ಪ್ರಕರಣದಲ್ಲಿ ಜೈಲು ಸೇರಿದ್ದು, ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ:‘ನಿರ್ದಿಷ್ಟ ಜನರ ಏಕಸ್ವಾಮ್ಯ' ಮುರಿದು ಹಾಕಿದ OTT ಫ್ಲಾಟ್ ಫಾರ್ಮ್ಗಳು'